12th September 2024
Share
ಎತ್ತಿನಹೊಳೆ ಯೋಜನೆಗೆ ಜಿ.ಎಸ್.ಪರಮಶಿವಯ್ಯನವರ ವರಧಿ ಆಧಾರಿತ ಇನ್ನೂ ಯಾವ ಹಳ್ಳದ ನೀರು ಹರಿಸ ಬಹುದು ಎಂಬ ಬಗ್ಗೆ ಕುಮಾರ ಪರ್ವತದ ಅಕ್ಕ-ಪಕ್ಕ ಸ್ಥಳ ವೀಕ್ಷಣೆ. ಡಿ.ಎಸ್.ಹರೀಶ್, ವೇದಾನಂದಾಮೂರ್ತಿ ಮತ್ತು ಕುಂದರನಹಳ್ಳಿ ರಮೇಶ್ ಚಿತ್ರದಲ್ಲಿದ್ದಾರೆ.    

TUMAKURU:SHAKTHIPEETA FOUNDATION    

 ಎತ್ತಿನಹೊಳೆ ಯೋಜನೆ ಭೋಗಸ್ ಯೋಜನೆ. ಹಣ ಕಬಳಿಸಲು ಸೃಷ್ಠಿಸಿರುವ ಯೋಜನೆ, ಪರಿಸರ ಹಾಳು ಮಾಡುವ ಯೋಜನೆ, ಎಂಬ ಬಹುದೊಡ್ಡ ಕೂಗು ಇದೆ. ಈ ಯೋಜನೆಯಿಂದ ಈಗ ಮಾಡುತ್ತಿರುವ ರೀತಿಯಲ್ಲಿಯೇ ಮುಂದುವರೆದರೆ ಖಂಡಿತ ನೀರು ಬರುವುದಿಲ್ಲಾ ಎಂಬ ಅಪವಾದವೂ ಇದೆ.

 ಇಲ್ಲದ ನೀರಿಗೆ ಚುನಾಯಿತ ಜನಪ್ರನಿಧಿಗಳು ಆಗಿಂದಾಗ್ಗೆ ಅಲೋಕೇಷನ್ ಬದಲಾಯಿಸಲು ಕಿತ್ತಾಡುತ್ತಿದ್ದಾರೆಯೇ ಹೊರತು, ಯೋಜನೆಯ ಯಶಸ್ಸಿಗೆ ಗಮನ ಹರಿಸುತ್ತಿಲ್ಲ. ಮಾಮೂಲಿಗಾಗಿ ಏನೇನೋ ನೆಪ ಹೇಳಿ, ರೈತರನ್ನು ಎತ್ತಿಕಟ್ಟಿ ಗುತ್ತಿಗೆದಾರರ ಚರ್ಮ ಸುಲಿಯುತ್ತಿದ್ದಾರೆ ಎಂಬ ಸುದ್ದಿಯೂ ಇದೆ.

 ಜೊತೆಗೆ ಎತ್ತಿನಹೊಳೆ ಯೋಜನೆಯಲ್ಲಿ ಕೆಳಕಂಡ ವಿವಿಧ ಯೋಜನೆಗಳ ವಿಶಿಷ್ಠತೆಗಳೂ ಇವೆ. ಈ ಯೋಜನೆಯ ಯಶಸ್ವಿಗಾಗಿ ಏನು ಮಾಡಬೇಕು, ಎಂಬ ಸಲಹೆಗಳನ್ನು ಪಡೆದು ಸರ್ಕಾರಕ್ಕೆ ನೀಡುವ ಅವಶ್ಯಕತೆಯೂ ಇದೆ.

ಈ ಯೋಜನೆಯ ಜಾರಿಗಾಗಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೂರಾರು ಜನರ ಬೆವರಿನ ಶ್ರಮವೂ ಇದೆ. ಅವರ ಅನುಭವಗಳನ್ನು ಹಂಚಿಕೊಳ್ಳುವುದು ಸೂಕ್ತವಾಗಿದೆ. ಅದೇ ರೀತಿ ಜಿ.ಎಸ್.ಪರಮಶಿವಯ್ಯನವರ ವರದಿ ಜಾರಿಯಾಗಲಿಲ್ಲ ಎಂದು ಕೊರಗುವವರು ಇದ್ದಾರೆ. ಅವರ ವರದಿಯ ಒಂದು ಭಾಗದ ಯೋಜನೆ ಆರಂಭವಾಗಿದೆ ಎಂದು ಖುಷಿ ಪಡುವವರು ಇದ್ದಾರೆ. ಇವರೆಲ್ಲರ ಅನಿಸಿಕೆಗಳ ಮತ್ತು ಅನುಭವದ ಅಗತ್ಯವೂ ಇದೆ.
ಮಾಜಿ ಸಚಿವರಾದ ನಜೀರ್‌ಸಾಬ್‌ರವರು ಬೋರ್‌ವೆಲ್ ಕೊರೆಸುವುದನ್ನು ರೂಢಿ ಮಾಡಿ ಅಂತರ್ಜಲ ಕುಸಿಯಲು ಕಾರಣರಾಗಿದ್ದಾರೆ, ಅದೇ ರೀತಿ ಜಿ.ಎಸ್.ಪರಮಶಿವಯ್ಯನವರು ಪಶ್ಚಿಮಘಟ್ಟಗಳ ನೀರು ತರಬಹುದೆಂದು ತೋರಿಸಿ ಪರಿಸರ ಹಾಳು ಮಾಡಲು ಕಾರಣರಾಗಿದ್ದಾರೆ ಎಂಬ ವಾದವೂ ಇದೆ.

  ಈ ಹಿನ್ನೆಲೆಯಲ್ಲಿ  ಯೋಜನೆಯ ಪರ-ವಿರೋದಗಳ ಬಗ್ಗೆ ವಿವಿಧ ವರ್ಗದವರ ಸಂದರ್ಶನ  ನಡೆಸಲು ಚಿಂತನೆ ನಡೆಸಿದ್ದೇನೆ, ಆಸಕ್ತರು ತಮ್ಮ ಅಭಿಪ್ರಾಯ ನೀಡಲು ಮುಕ್ತ ಅವಕಾಶಗಳಿವೆ. ಆಸಕ್ತರು ಯೋಜನೆಯ ಪರ-ವಿರೋಧಗಳ ಬಗ್ಗೆ, ಲೇಖನಗಳನ್ನು ನೀಡಿದಲ್ಲಿ ಪ್ರಕಟಿಸಲಾಗುವುದು.  

  1. ಕಾವೇರಿ ಮತ್ತು ಕೃಷ್ಣಾ ನದಿ ಪಾತ್ರಗಳ ರಿಡ್ಜ್‌ನಲ್ಲಿ ಗುರುತ್ವಾಕರ್ಷಣೆ ಕಾಲುವೆ.
  2. ಮಧ್ಯ ಕರ್ನಾಟಕದ ವಾಟರ್ ಗ್ರಿಡ್ ಕೆನಾಲ್.
  3. ಹೆಡ್‌ವರ್ಕ್ಸ್‌ನಲ್ಲಿ ಹೊಸ, ಹೊಸ ಯೋಜನೆ ರೂಪಿಸಿ, ಕಾಲುವೆಯಲ್ಲಿ ವರ್ಷ ಪೂರ್ತಿ ಇನ್ನೂ ಹೆಚ್ಚು ನೀರು ಹರಿಸಲು ಅವಕಾಶ.
  4. ರಾಜ್ಯದ ನದಿ ಜೋಡಣೆ ಫೈಲಟ್ ಯೋಜನೆಗೆ ಅವಕಾಶ.
  5. ಜಲ ಜೀವನ್ ಮಿಷನ್ ಗ್ರಿಡ್ ಫೈಲಟ್ ಯೋಜನೆಗೆ ಅವಕಾಶ. ರಾಜ್ಯದ ೨ ಕೋಟಿ ಜನಕ್ಕೆ ಕುಡಿಯುವ ನೀರು
  6. ಪವರ್ ಸ್ಟೇಷನ್ ವಿಶಿಷ್ಟತೆ.
  7. WEIR ಗಳ ವಿಶಿಷ್ಟತೆ.
  8. ಬೈರಗೊಂಡ್ಲು ಡ್ಯಾಂ ವಿಶಿಷ್ಟತೆ.
  9. ಅಕ್ವಿಡಕ್ಟ್ ಮತ್ತು ಸರ್ಜ್‌ಟ್ಯಾಂಕ್ ವಿಶಿಷ್ಟತೆ.
  10. WEIR ಗಳ ಮತ್ತು ಕಾಲುವೆಯ  ಅಕ್ಕ-ಪಕ್ಕದಲ್ಲಿ ಸುಂದರ ಪ್ರವಾಸಿ ಸರ್ಕ್ಯುಟ್  ನಿರ್ಮಾಣ.
  11. WEIR ಗಳ ಮತ್ತು ಕಾಲುವೆಯ  ಅಕ್ಕ-ಪಕ್ಕದಲ್ಲಿ ಪರಿಸರ ಸೃಷ್ಟಿಗೆ ಪೂರಕ,
  12. ಕೇಂದ್ರ ಸರ್ಕಾರ ಜಾರಿಮಾಡುತ್ತಿರುವ ಪ್ರಾಡಕ್ಟ್-ಒನ್ ಡಿಸ್ಟ್ರಿಕ್ -ಒನ್ ಕ್ಲಸ್ಟರ್‌ಗಳನ್ನು  ಕಾಲುವೆಯ  ಅಕ್ಕ-ಪಕ್ಕದಲ್ಲಿ ಸ್ಥಾಪಿಸಿ ರೈತರ ಆದಾಯ ದುಪ್ಪಟ್ಟು ಯೋಜನೆಗೆ  ಫೈಲಟ್ ಯೋಜನೆ. 
  13. ಭೂಸ್ವಾಧೀನವಿಲ್ಲದೆ ಕಾಮಗಾರಿಗೆ ಟೆಂಡರ್.
  14. ಟ್ರೈಪಾಯಿಡ್ ಅಗ್ರಿಮೆಂಟ್, ಪ್ಯಾಕೇಜ್ ಗುತ್ತಿಗೆದಾರರೇ ರೈತರ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ ಎಂಬ ಅಪವಾದ.
  15. ಐಇಸಿ ಕಾರ್ಯಕ್ರಮ.
  16. ಜಲಾನಯನ ಪ್ರದೇಶದಲ್ಲಿ ಮಳೆಮಾಪನ ಕೇಂದ್ರಗಳು.
  17. ಒಂದು ಎಕರೆ ಭೂಮಿಗೂ ಕೃಷಿಗಾಗಿ ನೀರು ನೀಡದ ಏಕೈಕ ಯೋಜನೆ.
  18. ಮುಖ್ಯ ಕಾಲುವೆಯ  ಅಕ್ಕ-ಪಕ್ಕದಲ್ಲಿ ಬಫರ್‌ಝೋನ್ ರೀತಿ, ರೈತರ ಜಮೀನುಗಳಿಗೆ ಇಸ್ರೇಲ್ ಮಾದರಿ ಕೃಷಿಗಾಗಿ ಬೆಳೆವಾರು ಕ್ಲಸ್ಟರ್‌ಗಳಿಗೆ ನೀರು ನೀಡುವ ಮೂಲಕ ಭೂ ಸತ್ರಂತ್ಥ ರೈತರಿಗೆ ಸಾಮಾಜಿಕ ನ್ಯಾಯ ನೀಡುವುದು.

ಇನ್ನೂ ಯಾವುದಾರೂ ಅಂಶಗಳಿದ್ದಲ್ಲಿ ತಿಳಿಸಿದಲ್ಲಿ ಉತ್ತಮ. ಈ ಎಲ್ಲಾ ಅಂಶಗಳ ಸಾಧಕ-ಬಾಧಕಗಳ ಬಗ್ಗೆ ವರದಿ ಮಾಡಲು ಸಲಹೆ ನೀಡಲು ಮತ್ತೊಮ್ಮೆ ಮನವಿ.