12th September 2024
Share
ಕ್ಯಾಂಪಸ್‌ನಲ್ಲಿನ ಪಿಕ್‌ಅಫ್ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಜಲನಿಗಮದ ವತಿಯಿಂದ ಅನುದಾನ ನೀಡಿದ್ದಾರೆ. ಇಲಾಖೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ದಿನಾಂಕ:03.11.2020 ರಂದು ಸ್ಥಳ ವೀಕ್ಷಣೆಗೆ ಆಗಮಿಸಿದ ಭಧ್ರಾಮೇಲ್ದಂಡೆ ಯೋಜನೆಯ ಚಿತ್ರದುರ್ಗ ವಿಭಾಗದ ಇಇ ಶ್ರೀ ಪ್ರಣೀತ್‌ರವರು, ಎಇಇ ಶ್ರೀ ವೀರಭದ್ರಯ್ಯನವರು, ಎಇ ಶ್ರೀ ವೆಂಕಟೇಶ್‌ರವರು ಮತ್ತು ತುಮಕೂರಿನ ಶ್ರೀ ಸತ್ಯಾನಂದ್‌ರವರು ಕುಮಾರಧಾರ ನೀರನ್ನು ಕೃತಕ ಸಮುದ್ರಗಳಿಗೆ ಹಾಕುತ್ತಿದ್ದಾರೆ.

TUMAKURU:SHAKTHIPEETA FOUNDATION

 ಕಳೆದ 4-5 ತಿಂಗಳಿನಿಂದ ಸತತವಾಗಿ ಮಳೆ ಬೀಳುತ್ತಿದ್ದು, ಕ್ಯಾಂಪಸ್‌ನ ಜಮೀನಿನಲ್ಲಿ ತೇವಾಂಶ ಇದ್ದುದರಿಂದ ಶಕ್ತಿಪೀಠ. ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕ್ಯಾಂಪಸ್ ಲೇಔಟ್ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. 

 ಪ್ರಸ್ತುತ ಕುಮಾರಧಾರ ನದಿ ನೀರನ್ನು ಕ್ಯಾಂಪಸ್‌ನಲ್ಲಿ ಕೃತಕವಾಗಿ ನಿರ್ಮಾಣ ಮಾಡಿರುವ ಹಿಂದೂ ಮಹಾ ಸಾಗರ, ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಗಳಲ್ಲಿ ಹಾಕುವ ಮೂಲಕ ಮತ್ತೆ ಲೇಔಟ್ ಕಾಮಗಾರಿ ಮತ್ತೆ ಆರಂಭವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ಬರಿಕೈಯಲ್ಲಿ ದಿ. ಮದನ್ ಮೋಹನ್ ಮಾಳವೀಯವರವರು ಹಿಂದೂ ಮಹಾ ವಿಶ್ವವಿದ್ಯಾನಿಲಯದ ಕನಸು ಕಂಡಂತೆ ಶಕ್ತಿಪೀಠ. ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕ್ಯಾಂಪಸ್ ಕನಸು ಕಂಡಿರುವ ತುಮಕೂರಿನ ಶಕ್ತಿಪೀಠ ಪೌಂಢೇಷನ್ ಭೂಮಿ ಪೂಜೆಯನ್ನು ದಿನಾಂಕ:18.03.2018  ರಂದು ಯುಗಾದಿ ಹಬ್ಬದ ದಿನ ಸರಳವಾಗಿ ಮಾಡಲಾಗಿತ್ತು.

ವಿಶ್ವದ 108 ಶಕ್ತಿಪೀಠಗಳ ಮಾಹಿತಿ ಸಂಗ್ರಹ ಹಾಗೂ ಶಕ್ತಿಪೀಠಗಳು ಮತ್ತು ವಿವಿಧ ನದಿಗಳ ಗಂಗಾಮಾತೆಯ ಅವಿನಾಭಾವ ಸಂಬಂದಗಳ ಬಗ್ಗೆ ಅಧ್ಯಯನ ಇನ್ನೂ ಮುಂದುವರೆದಿದೆ. ಎಲ್ಲಾ 108 ಶಕ್ತಿಪೀಠಗಳ ಸ್ಥಳಗಳ ವೀಕ್ಷಣೆ ಮಾಡದೆ ಅಂತಿಮ ಹಂತಕ್ಕೆ ಬರಲು ಸಾಧ್ಯಾವಿಲ್ಲ.

 ಯಾವುದೇ ದೇವಾಲಯದ ಬೃಹತ್ ಕಟ್ಟಡಗಳಿಲ್ಲದೆ, ಯಾವುದೇ ಅಬ್ಬರ ಆಡಂಬರದ ವಿಗ್ರಹವಿಲ್ಲದೆ, ಸಾಂಕೇತಿಕವಾಗಿ ಮೊದಲ ಹಂತದಲ್ಲಿ ಮರಗಿಡಗಳ ಹಸಿರು ಸಂಪತ್ತಿನಲ್ಲಿಯೇ ಕ್ಯಾಂಪಸ್‌ನ ಉದ್ದೇಶಗಳ ಪ್ರಾತ್ಯಕ್ಷಿಕೆ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ.

 ಈ ಯೋಜನೆಯ ಅನುಷ್ಠಾನಕ್ಕೆ ಹಲವಾರು ಜನ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರುಗಳ ಸೇವೆಯ ಬಗ್ಗೆ ಪರಿಚಯ ಮಾಡುವುದು ನಮ್ಮ ಕರ್ತವ್ಯವಾಗಿದೆ.

 ನಮ್ಮ ಕ್ಯಾಂಪಸ್‌ನ ಮೊದಲ ದೇವಾಲಯ ಹಿಂದೂ ಮಹಾ ಸಾಗರ, ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಗಳ ಜಲಸಂಗ್ರಹಾಗಾರ’ ನನ್ನ ಪ್ರಕಾರ ಇದೇ ನಮ್ಮ ವಿಶೇಷತೆ. ಸುಮಾರು ಒಂದು ಕೋಟಿ ಅರವತ್ತೆಂಟು ಲಕ್ಷ ಲೀಟರ್ ಸಾರ್ಮಾಥ್ಯವಿದೆ. ಮಳೆ ನೀರಿನಿಂದ ತುಂಬಿ ತುಳುಕುತ್ತಿದೆ. ಈ ಜಲಸಂಗ್ರಹಾಗಾರಕ್ಕೆ ದೇಶದ ಎಲ್ಲಾ ನದಿ ನೀರು ತಂದು ಹಾಕುವ ಮೂಲಕ ಶಕ್ತಿ ತುಂಬಲು ಚಿಂತನೆ ನಡೆಸಲಾಗಿದೆ.

  ಭೂಮಿಯ ಮೇಲೆ ನಿರ್ಮಾಣ ಮಾಡುವ ಜಲಭಾರತದ ನಕ್ಷೆಯಲ್ಲಿ ವಿವಿಧ ನದಿಗಳು ಹುಟ್ಟುವ ಸ್ಥಳ ಮತ್ತು ಹರಿದು ಸಮುದ್ರ ಸೇರುವ ಯೋಜನೆಯ ಅಧ್ಯಯನವೂ ಅರಂಭವಾಗಿದೆ. ಸೇವೆ ಮಾಡುವವರು ಸಂಪರ್ಕಿಸ ಬಹುದು. ಕ್ಯಾಂಪಸ್‌ನ ಪ್ರತಿಯೊಂದು ಕಾಮಗಾರಿಯ ವಿವರವಾದ ಮಾಹಿತಿಯನ್ನು ಶಕ್ತಿಪೀಠ ಫ್ಯಾಮಿಲಿಯೊಂದಿಗೆ ಹಂಚಿಕೊಳ್ಳಲಿದ್ದೇನೆ.