14th July 2024
Share

TUMAKURU:SHAKTHI PEETA FOUNDATION

 ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರ ಆಪ್ತ ಬಳಗದಲ್ಲಿದ್ದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು ಕರ್ನಾಟಕ ರಾಜ್ಯದಲ್ಲಿ ಜಲಸಂಪನ್ಮೂಲ ಸಚಿವಾಲಯದಲ್ಲಿ ದಾಖಲೆ ನಿರ್ಮಾಣ ಮಾಡುವಂತಹ ಯೋಜನೆ ರೂಪಿಸಲು ತೆರೆ ಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರಂತೆ.

 ಪ್ರಧಾನಿ ನರೇಂದ್ರ ಮೋದಿಯವರ ಟೀಂ ಮಾದರಿಯಲ್ಲಿ ನೀರಾವರಿ ವಿಷಯದಲ್ಲಿ ಅನುಭವವಿರುವ ಒಂದು ತಂಡ ಸಮಾರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಸಜ್ಜಾಗಿದೆ. ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರ್‍ಪನವರು ಸಹ ರೈತರಿಗೆ ಮತ್ತು ರಾಜ್ಯದ ಪ್ರತಿಯೊಂದು ಕುಟಂಬಕ್ಕೂ ಸಮಾದಾನ ತರಬಹುದಾದ ಯೋಜನೆ ನೀರು. ಆದ್ದರಿಂದ ಶೀಘ್ರವಾಗಿ ಯೋಜನೆ ರೂಪಿಸಿ ಎಂದು ಹಸಿರು ನಿಶಾನೆ ನೀಡಿದ್ದಾರಂತೆ.

 ಕೇಂದ್ರ ಸರ್ಕಾರವೂ ಜಲಜೀವನ್ ಮಿಷನ್ ಯೋಜನೆ ಮೂಲಕ ಮನೆ ಮನೆಗೆ ನೀರಿನ ಯೋಜನೆಗೆ ಕಾಲಮಿತಿ ಗಡುವು ನೀಡಿದೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ರಾಜ್ಯದ ಎಲ್ಲಾ ಕೆರೆ-ಕಟ್ಟೆಗಳಿಗೆ ನದಿ ನೀರು ತುಂಬಿಸುವ ಯೋಜನೆ ರೂಪಿಸಿ, ರಾಜ್ಯದ ನದಿ ಜೋಡಣೆ ಬೃಹತ್ ಯೋಜನೆಯ ಡಿ.ಪಿ.ಆರ್ ಮಾಡಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಜ್ಜಾಗುತ್ತಿದ್ದಾರಂತೆ.

 2020-2021  ನೇ ಸಾಲಿನ ಆಯವ್ಯಯದಲ್ಲಿ ಈ ಎಲ್ಲಾ ಯೋಜನೆಗಳಿಗೆ ಪೂರಕವಾಗಿ ವಿಷಯ ಮಂಡಿಸಿರುವುದು ವರದಾನವಾಗಿದೆ. ಹಠಮಾರಿತನ ಮಾಡಿ, ಛಲದಿಂದ ಜಲಸಂಪನ್ಮೂಲ ಖಾತೆ ಪಡೆಯಲಾಗಿದೆ. ವಾಲ್ಮೀಕಿ ರಾಮಾಯಣ’ ಬರೆದ ಹಾಗೆ, ವಾಲ್ಮೀಕಿ ಜಲಸಂಪನ್ಮೂಲ ಅಲೋಕೇಷನ್’  ಮಾಡಲೇ ಬೇಕು ಎಂಬ ಹಠ ಅವರ ತಂಡದ ಟೀಂ ನಲ್ಲಿದೆ.

ಸಿದ್ಧರಾಮಯ್ಯನವರು ಸಹ ಮೋದಿಯವರು ಹೇಳುತ್ತಿರುವ ಎಲ್ಲಾ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಿ, ಅವರು ಯೋಜನೆ ಮಂಜೂರು ಮಾಡಬೇಕು, ಇಲ್ಲವೇ ನಮಗೆ ಒಳ್ಳೆ ಅಸ್ತ್ರ ದೊರೆಯಲಿದೆ. ಏನೇ ಆಗಲಿ ರಾಜ್ಯದ ರೈತರಿಗೆ ಒಳ್ಳೆಯದಾಗಲಿ ಎಂಬ ಸಲಹೆ ನೀಡಿದ್ದಾರಂತೆ.’

ಐದು ಅಂಶಗಳ ಯೋಜನೆ ತಯಾರಿಗೆ ಭರದ ಸಿದ್ಧತೆಗೆ ರಮೇಶ್ ಜಾರಕಿಹೊಳೆ ಮುನ್ನುಡಿ ಬರೆಯಲ್ಲಿದ್ದಾರಂತೆ.

  1. 2023 ರೊಳಗೆ ರಾಜ್ಯದ ಮನೆ ಮನೆಗೆ ನಲ್ಲಿ ನೀರು.
  2. ರಾಜ್ಯದ ನದಿ ಜೋಡಣೆ.
  3. ರಾಜ್ಯದ ಕೆರೆ-ಕಟ್ಟೆಗಳಿಗೆ ನದಿ ನೀರು.
  4. ರಾಜ್ಯಾಧ್ಯಾಂತ ಇಸ್ರೇಲ್ ಮಾದರಿ ಮೈಕ್ರೋ ಯೋಜನೆ.
  5. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ರಾಜ್ಯದ ಪ್ರತಿಯೊಬ್ಬ ರೈತರಿಗೂ ಕನಿಷ್ಠ ಒಂದು ಎಕರೆ ಜಮೀನಿಗೆ ಮೈಕ್ರೋ ಇರ್ರಿಗೇಷನ್ ಪದ್ಧತಿಯಲ್ಲಿ ನದಿ ನೀರು. 

  ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿ ಹೋದರು, ಶ್ರೀ ಹೆಚ್.ಡಿ.ರೇವಣ್ಣವರು ಬಹಳಷ್ಟು ಇಂಜಿನಿಯರ್‌ಗಳಿಗೆ ಪ್ರಮೋಷನ್ ಕೊಟ್ಟು ದಾಖಲೆ ನಿರ್ಮಿಸಿದರು.  ಮಾಜಿ ಮುಖ್ಯ ಮಂತ್ರಿಯವರಾದ ದಿ.ದೇವರಾಜು ಅರಸ್ ಅವರು, ಉಳುವವನೇ ಭೂಮಿ ಒಡೆಯ ಎಂದರು, ಮಾಜಿ ಮುಖ್ಯ ಮಂತ್ರಿಯವರಾದ ದಿ.ಗುಂಡುರಾವ್ ವರವರು ರೈತರ ಪಂಪ್ ಸೆಟ್‌ಗೆ ವಿಧ್ಯುತ್ ಮನ್ನಾ ಅಂದರು. ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಅನ್ನಭಾಗ್ಯ/ಅಕ್ಕಿ ಸಿದ್ಧರಾಮಯ್ಯ ಆದರು.

  ನಮ್ಮ ಸಾಹೇಬರು ಮತ್ತು ಯಡಿಯೂರಪ್ಪನವರು ರಾಜ್ಯದ ಪ್ರತಿಗ್ರಾಮಕ್ಕೂ ನದಿ ನೀರಿನ ಅಲೋಕೇಷನ್ ಮಾಡಿ ದಾಖಲೆ ನಿರ್ಮಿಸಲಿದ್ದಾರೆ. ಯೋಜನೆ ರೂಪಿಸುವ ವೇಳೆಗೆ ಚುನಾವಣೆ ಬರಲಿದೆ. ಚಾಲನೆ ನೀಡಿಯೇ ತೀರುತ್ತೇವೆ ಎಂಬ ಅವರ ದೃಢ ವಿಶ್ವಾಸ ನಿಜಕ್ಕೂ ಮೆಚ್ಚುವಂತದ್ದು. 

 ಕೊಲ್ಲಾಪುರದ ಮಾಹಾಲಕ್ಷ್ಮೀ ಶಕ್ತಿಪೀಠಕ್ಕೆ ಪೂಜೆ ಸಲ್ಲಿಸಿ ರಮೇಶ್‌ರವರು ಶಪಥ ಮಾಡಿದ್ದಾರಂತೆ. ಅಧಿಕಾರ ಬರುತ್ತದೆ, ಹೋಗುತ್ತದೆ ಆದರೇ ನೀರಾವರಿ ವಿಚಾರದಲ್ಲಿ ಮೋದಿಯವರು ಭೇಷ್ ಅನ್ನುವ ಕೆಲಸ ಮಾಡಲೇ ಬೇಕು ಎಂಬ ಅವರ ಇಚ್ಚೆಗೆ ತಾಯಿ ಶಕ್ತಿ ಕೊಡುವಳೇ ಕಾದು ನೋಡಬೇಕು? ಹೆಸರು ಹೇಳಲು ಇಚ್ಚಿಸಿದ ಅವರ ಜಾತಿಯ ಪರಿಣಿತರೊಬ್ಬರು ಈ ಮಾತು ಹೇಳಿದ್ದು ನಿಜಕ್ಕೂ ನನಗೂ ಆಶ್ಚರ್ಯವಾಗಿದೆ.

 ‘ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರ ಮತ್ತು ಶ್ರೀ ರಮೇಶ್ ಜಾರಕಿಹೊಳೆರವರ ಚಿಂತನೆಗೆ/ ಯೋಜನೆಗಳಿಗೆ ಎಲ್ಲಾ ರಾಜಕೀಯ ಪಕ್ಷಗಳ ಬೆಂಬಲ ದೊರಕಿಸಲು ಕಾಂಗ್ರೆಸ್‌ಶ್ರೀ ಹೆಚ್.ಕೆ.ಪಾಟೀಲ್‌ರವರು, ಬಿಜೆಪಿಯ ಶ್ರೀ ಜಿ.ಎಸ್.ಬಸವರಾಜ್‌ರವರು, ಜನತಾ ದಳದ ಶ್ರೀ ಕೋನರೆಡ್ಡಿರವರು, ಸೇರಿದಂತೆ 15 ಜನರ ತಂಡದ   ವೇದಿಕೆ ಶೀಘ್ರವಾಗಿ ಸಿದ್ಧವಾಗಲಿದೆಯಂತೆ.  ಪಲಿತಾಂಶ ಕಾದು ನೋಡೋಣ?’