22nd December 2024
Share
Dr. MUGUR MADHU DIKSHITH GURUJI , ASHOK, SATHYANAND, ROOPESH, LOKESH & KUNADARNAHALLI RAMESH

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್‌ನಲ್ಲಿ ಹಿಂದೂ ಸಂಸ್ಕೃತಿಯಂತೆ / ವಾಸ್ತು ಪ್ರಕಾರ ಒಂದು – SQUARE ಇರಲೇ ಬೇಕಂತೆ. ನಮ್ಮ ಕ್ಯಾಂಪಸ್‌ನ ಆರ್ಕಿಟೆಕ್ಚರ್ ಶ್ರೀ ಚಿದಾನಂದ್‌ರವರು, ಇಂಜಿನಿಯರ್‌ಗಳಾದ ಶ್ರೀ ಡಿ.ಎಸ್.ಹರೀಶ್ ರವರು, ಶ್ರೀ ಮಲ್ಲೇಶ್‌ರವರು ಶ್ರೀ ಬಸವರಾಜ್ ಸುರಣಗಿರವರು  ಶ್ರೀ ಸತ್ಯಾನಂದ್‌ರವರು, ವಾಸ್ತುವಿಗೆ ವಿಶೇಷ ಒತ್ತು ಕೊಡುವುದಿಲ್ಲ ಅನ್ನಿಸುತ್ತೆ.

ಶ್ರೀ ಚಿದಾನಂದ್‌ರವರು ವೃತ್ತದ ಒಳಗೆ ಭಾರತ ನಕ್ಷೆ ಇರಲಿ ಎಂಬ ಒಂದು ಐಡಿಯಾ ಕೊಟ್ಟ ತಕ್ಷಣ, ಶ್ರೀ ಬಸವರಾಜ್ ಸುರಣಗಿರವರು  ಮತ್ತು ನನಗೂ ಸರಿ ಎನಿಸಿತು. ನಾವೂ ಯಾರ ಬಳಿಯೂ ವಿಚಾರಿಸದೆ ಭೂಮಿಯ ಮೇಲೆ ವೃತ್ತ. ಭಾರತ ನಕ್ಷೆ ಮತ್ತು ಕೃತಕ ಹಿಂದೂ ಮಾಹಾ ಸಾಗರ, ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ನಿರ್ಮಾಣ ಮಾಡಿಯೇ ಬಿಟ್ಟೆವು.

ನೀರು (ಗಂಗಾಮಾತೆ) ಮತ್ತು ಶಕ್ತಿಪೀಠಗಳ ಅಧ್ಯಯನ ಕೇಂದ್ರದ ಪ್ರಾತ್ಯಕ್ಷಿಕೆ, 108 ಶಕ್ತಿಪೀಠಗಳು ಮತ್ತು ಜ್ಯೋತಿರ್ಲಿಂಗಗಳ ಪ್ರಾತ್ಯಕ್ಷಿಕೆ, ಪ್ರಮುಖ ನದಿಗಳ ಉಗಮ ಮತ್ತು ಹರಿದು ಸಮುದ್ರ ಸೇರುವ ಸ್ಥಳಗಳ ಪ್ರಾತ್ಯಕ್ಷಿಕೆ ಇದೊಂದು ಸಾಹಸದ ಕೆಲಸ. ನಂತರ ನನಗೆ ಅನ್ನಿಸಿದ್ದು, ಈ ಯೋಜನೆಗೆ ಶಾಸ್ತ್ರ, ಜೋತಿಷ್ಯ, ವಾಸ್ತು ಪರಿಣಿತರ ಬಳಿ ಸಮಾಲೋಚನೆ ನಡೆಸಬೇಕು ಅನ್ನಿಸಿತು.

 ನಾವೂ ಉತ್ತರಖಾಂಡ ಶಕ್ತಿಪೀಠಗಳ ದರ್ಶನ ಯಾತ್ರೆ ಮಾಡುವಾಗ, ಹರಿಧ್ವಾರದಲ್ಲಿ ಗುರೂಜಿ ಯೊಬ್ಬರ ಬಳಿ ಶ್ರೀ ಅಶೋಕ್‌ರವರು ಚರ್ಚೆ ಮಾಡಿ ಕೇಳಿದಾಗ ಅವರು ಹೇಳಿದ್ದು ಇಷ್ಟೆ, ಈ ಕೆಲಸ ನೀವೂ ಮಾಡುತ್ತಿರುವುದಲ್ಲ, ಇದು ದೇವಿ ಅಮ್ಮನವರು ನಿಮ್ಮ ಮೂಲಕ ಮಾಡಲು ಸೂಚಿಸಿದ್ದಾರೆ. ನಾವೂ ಯಾರೂ ಶಾಸ್ತ್ರ ಹೇಳಲು ಸಾಧ್ಯವಿಲ್ಲ?

ಆದರೇ ನಾಲ್ಕು ದಿಕ್ಕಿನಲ್ಲಿ ಈ ನಾಲ್ಕು ರುದ್ರಾಕ್ಷಿ ಇಡಿ, ಕೆಲಸ ಆದ ಮೇಲೆ ಇನ್ನೊಂದು  ತೋರಿಸಿ ಈ ತರಹದ ರುದ್ರಾಕ್ಷಿ ತಂದು ನಾನೇ ಇಟ್ಟು ಬರುತ್ತೇನೆ. ನನ್ನನ್ನೂ ಅಂದು ಕರೆಯಿರಿ. ಹಣವೆಷ್ಟು ಎಂದು ಕೇಳಿದಾಗ ಇದೂ ಅಮ್ಮನವರ ಸೇವೆ ಹಣ ಪಡೆಯವುದಿಲ್ಲ, ಎಂದು ಖಡಕ್ ಆಗಿ ಹೇಳಿದರು.

 ನಮ್ಮ ಉದ್ದೇಶಿತ ಕ್ಯಾಂಪಸ್ ಪಕ್ಕದಲ್ಲಿರುವ ಶ್ರೀ ಅಶೋಕ್‌ರವರು ಸಾರ್ ನಮ್ಮ ಮಾವ ಬೆಂಗಳೂರಿನಲ್ಲಿದ್ದಾರೆ. ಅವರ ಹೆಸರು ಶ್ರೀ ರಂಗನಾಥಸ್ವಾಮಿಯವರು ಅವರು ಸಹ ಆಗಮಿಕರು. ಅವರ ಬಳಿ ನಿಮ್ಮ ಯೋಜನೆಯ ಬಗ್ಗೆ ಮಾತನಾಡಿದೆ. ಅವರು ಬಹಳ ಆಸಕ್ತಿ ವಹಿಸಿದ್ದಾರೆ. ಅವರು ಬರುತ್ತಾರೆ ಸಾರ್ ಎಂದಾಗ ನಾನು ಅವರೊಂದಿಗೆ ಮಾತನಾಡುತ್ತೇನೆ. ಅವರಿಗೂ ತಿಳಿಸಿ ಎಂದು ಹೇಳಿದೆ.

 ಅವರು ಬಂದು ನೋಡಿದ ಮೇಲೆ, ಸಾರ್ ಟಿವಿಯಲ್ಲಿ ಬರುತ್ತಾರಲ್ಲ, ಶ್ರೀ ಬ್ರಹ್ಮಾಂಡ ಗುರೂಜಿಯವರು ಅವರು ಶಕ್ತಿಪೀಠಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅವರು ನನಗೆ ಗೊತ್ತು ಅವರೊಂದಿಗೆ ಸಮಾಲೋಚನೆ ಮಾಡಿ ಸಾರ್. ಅಂದಾಗ ಆಯಿತು ದಿನಾಂಕ ನಿಗದಿಗೊಳಿಸಿ ಮಾತನಾಡೋಣ ಎಂದೆ.

 ಅವರು ದಿನಾಂಕ ನಿಗದಿಗೊಳಿಸಿದರು, ಶ್ರೀ ಜಿ.ಎಸ್.ಬಸವರಾಜ್‌ರವರು, ಸಾಯಿ ಶ್ರೀ ಗುರುಸಿದ್ದಪ್ಪನವರು ಮತ್ತು ನಾನು ಬೆಂಗಳೂರಿಗೆ ಯಾವೊದೋ ಬೇರೆ ಕೆಲಸಕ್ಕೆ ಹೋಗಬೇಕಾಗಿತ್ತು. ನಾನು ಎಂಪಿಯವರಿಗೆ ಸಾರ್ ನಾನು ಅಲ್ಲಿಗೆ ಹೋಗಿ ಬೆಂಗಳೂರಿಗೆ ಬರುತ್ತೇನೆ. ನೀವೂ ಬೆಂಗಳೂರಿಗೆ ಹೋಗಿರಿ ಸಾರ್ ಎಂದಾಗ, ನಡಿ ನಾನು ಬರುತ್ತೇನೆ ಹಾಗೆ ಹೋಗಿ ಹೋಗೋಣ ಎಂದರು.

SQUARE LESS

ಶ್ರೀ ಬ್ರಹ್ಮಾಂಡ ಗುರೂಜಿಯವರು ನಕ್ಷೆ ನೋಡಿದ ತಕ್ಷಣ SQUARE ಮಾಡಿಲ್ಲ, ವೃತ್ತ ಮಾಡಿದ್ದೀರಿ, SQUARE ಮಾಡಿ ಎಂದು ಸಲಹೆ ನೀಡಿದರು. 

 ನಾನು ಮತ್ತು ಶ್ರೀ ಸತ್ಯಾನಂದ್ ಅಂದಿನಿಂದ SQUARE ಮಾಡುವ ಕೆಲಸಕ್ಕೆ ಗಮನ ಹರಿಸಿದೆವು. ನಮಗೆ ಸರಿ ಎನಿಸಲಿಲ್ಲ.  ಸ್ನೇಹಿತರಾದ  ಶ್ರೀ ತ್ರಿನೇತ್ರಸ್ವಾಮಿಯವರು ವಿರಾಜಪೇಟೆಯಿಂದ ಶ್ರೀ ದಿವಾಕರ್ ಭಟ್‌ರವರು ಮತ್ತು ಶ್ರೀ ಸದಾನಂದ್‌ಕಾರಂತ್‌ರವರನ್ನು ಭೇಟಿ ಮಾಡಿಸಿ, ಕ್ಯಾಂಪಸ್‌ಗೆ ಭೇಟಿ ನೀಡಿಸಿದಾಗ ಅವರು ಹೇಳಿದ್ದು. ಈ ಜಮೀನು ದೇವರ ಭೂಮಿ, ಆದರೆ ವಿಷ್ಣು ಭೂಮಿ ಎಂದರು. ಅವರು ಸಹ SQUARE ಬಗ್ಗೆ ಏನೂ ಹೇಳಲಿಲ್ಲ.

ಶ್ರೀ ಸತ್ಯಾನಂದ್‌ರವರು ಬೆಂಗಳೂರಿನ ಡಾ.ಮುರಳೀಧರ್‌ರವರ ಪರಿಚಯ ಮಾಡಿಸಿದರು, ಅವರು ಬಂದು ನೋಡಿ, SQUARE ಈ ರೀತಿ ಮಾಡಿ ಎಂದು ಸಲಹೆ ನೀಡಿದರು. ಅಂದಿನಿಂದ ಒಂದು ಹೊಸ ತಲೆನೋವು ಶುರುವಾಯಿತು.

AS PER Dr.MURULIDHAR GURUJI SQUARE

ಕಾರಣ SQUARE ನಮ್ಮ ಜಮೀನು ಬಿಟ್ಟು ಬೇರೆಯವರ ಜಮೀನಿಗೆ ಈಶಾನ್ಯ ಭಾಗದಲ್ಲಿ ಹೋಯಿತು. ಈಶಾನ್ಯ ಕಟ್ ಆದರೇ ಕಷ್ಟ ತಪ್ಪಿದ್ದಲ್ಲ. ಜಮೀನು ಕೊಳ್ಳುವುದು ಕಷ್ಟದ ಕೆಲಸ ಹೊಸದೊಂದು ಗೊಂದಲ ಆರಂಭವಾಯಿತು.

ಶ್ರೀ ಅಶೋಕ್‌ರವರು ಮೈಸೂರಿನಲ್ಲಿ ನಮ್ಮ ಗುರೂಜಿ ಇದ್ದಾರೆ, ಅವರ ಬಳಿ ಏಕೆ ಸಮಾಲೋಚನೆ ನಡೆಸಬಾರದು ಎಂಬ ವಿಷಯವನ್ನು ಕಿವಿಗೆ ಹಾಕಿದ್ದರು. ದಿನಾಂಕ:10.11.2020 ರಂದು ಮೈಸೂರಿಗೆ ಅಚಾನಕ್ ಆಗಿ ಹೊರಟೆ ಬಿಟ್ಟೆವು.

 ಯಾವುದೇ ಪೂರ್ವ ನಿರ್ಧಾರ ಇಲ್ಲದೆ, ಶ್ರೀಮತಿ ಚಂದ್ರಿಕಾ ಎಲ್.ಕೆ.ಅಶೋಕ್‌ರವರು ಬೆಂಗಳೂರಿನಿಂದ ಬಂದರು, ಶ್ರೀ ಸತ್ಯಾನಂದ್ ಕುಟುಂಬ ಮತ್ತು ನಾನು, ಶ್ರೀ ರೂಪೇಶ್ ತುಮಕೂರಿನಿಂದ ಶ್ರೀ ಚಾಮುಂಡೇಶ್ವರಿ ದೇವಾಲಯದ ದರ್ಶನಕ್ಕೆ ಹೋದೆವು. ದರ್ಶನ ಆದ ನಂತರ ಶ್ರೀ ಅಶೋಕ್‌ರವರು ಹೇಗೂ ಬಂದಿದ್ದೇವೆ ನಮ್ಮ ಗುರೂಜಿಯವರ ಬಳಿ ಹೋಗೋಣ ಸಾರ್. ಅಂದಾಗ ನೋಡಿ ಸಾರ್ ಹೋಗೋಣ ಎಂದೆ.

 ಮೈಸೂರಿನಲ್ಲಿರುವ ಡಾ.ಶ್ರೀ ಮೂಗೂರು ಮಧು ದೀಕ್ಷೀತ್ ಗುರೂಜಿಯವರ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಿದೆವು. ಅವರ ಬಳಿ ನಮ್ಮ ಕ್ಯಾಂಪಸ್ ಲೇ ಔಟ್ ನೀಡಿ ಸಮಾಲೋಚನೆ ನಡೆಸಿದೆವು. SQUARE ಬಗ್ಗೆ ಚರ್ಚೆ ಆರಂಭವಾಯಿತು. ಅವರು ಹೌದು SQUARE ಹೀಗೆ ಏಕೆ ಇರಬೇಕು. ಹೀಗೆ ಮಾಡಿ ಎಂದಾಗ ಸತ್ಯಾನಂದ್ ಲ್ಯಾಪ್‌ಟ್ಯಾಪ್‌ನಲ್ಲಿ ಅವರು ಹೇಳಿದ ಹಾಗೆ ಮಾಡಿದರು, SQUARE ನಮ್ಮ ಜಮೀನಿನಲ್ಲಿಯೇ ಕುಳಿತು ಕೊಂಡಿತು.

AS PER Dr. MUGUR MADHU DHIKSHITH GURUJI SQUARE

 ‘ಒಂದೇ ನಿಮಿಷದಲ್ಲಿ ಗೊಂದಲ ಮಾಯಾವಾಯಿತು ನನಗೂ ಖುಷಿಯಾಯಿತು’ ಆದರೇ ಇನ್ನೊಂದು ಹೊಸ ಗೊಂದಲ ಅಂದರೆ ಇವರಿಬ್ಬರಲ್ಲಿ ಯಾರು ಹೇಳಿದ್ದು ಸರಿ. ನಾನೂ ಮತ್ತು ಸತ್ಯಾನಂದ್ ಮಾತನಾಡಿ ಮೂರು ನಕ್ಷೆ ಮಾಡಿ, ಇದನ್ನೂ ಇನ್ನೂ ಕೆಲವರು ಬಳಿ ಚರ್ಚಿಸೋಣ, ಸಮಗ್ರ ಚರ್ಚೆಯಾಗಲಿ ಎಂಬ ದೃಷ್ಠಿಯಿಂದ ಈ ವರದಿ ಮಾಡಿದ್ದೇನೆ.

ತಮ್ಮ ಸಲಹೆ ಗಳಿಗಾಗಿ ನೀರಿಕ್ಷೆಯಲ್ಲಿದ್ದೇನೆ.

  1. SQUARE ಹೇಗಿರ ಬೇಕು ಇವರಿಬ್ಬರಲ್ಲಿ ಯಾರು ಹೇಳಿರುವುದು ಸರಿ?
  2. ಅಡುಗೆ ಕೋಣೆ ಮತ್ತು ಊಟದ ಕೊಠಡಿ ಕಟ್ಟಡದ ಜಾಗವನ್ನು ಅಗ್ನಿ ಮೂಲೆಯಲ್ಲಿ ಮಾಡಲು ಗುರುತು ಮಾಡಿದೆ ಇದೂ ಸರಿನಾ? ನಕ್ಷೆ ನೋಡಿರುವ ಎಲ್ಲರೂ ಒಪ್ಪಿದ್ದಾರೆ.
  3. ದೇವಾಲಯವನ್ನು ಹಿಮಾಲಯದ ತಪ್ಪಲಲ್ಲಿ ಗುರುತು ಮಾಡಿದೆ, ಇದೂ ಸರಿನಾ? ನಕ್ಷೆ ನೋಡಿರುವ ಎಲ್ಲರೂ ಒಪ್ಪಿದ್ದಾರೆ.

ಈಗಾಗಲೇ

  1. ಭಾರತ ನಕ್ಷೆ ಭೂಮಿಯ ಮೇಲೆ ಕುಳಿತಿದೆ. 
  2. ಕೃತಕ ಹಿಂದೂ ಮಹಾ ಸಾಗರ, ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ನಿರ್ಮಾಣವಾಗಿದೆ. ಒಂದು ಕೋಟಿ ಅರವತ್ತೆಂಟು ಲಕ್ಷ ಲೀಟರ್ ನೀರೂ ಸಂಗ್ರಹವಾಗಿದೆ.
  3. ವೃತ್ತಾಕಾರದ ರಸ್ತೆಯೂ ಆಗಿದೆ.

ಇದನ್ನು ನೋಡಿದವರೆಲ್ಲರೂ ಸರಿಯಾಗಿದೆ ಎಂಬ ಸಲಹೆ ನೀಡಿದ್ದಾರೆ. ಈಗ ಅಂತಿಮ ರೂಪ ಕೊಡಬೇಕಷ್ಟೆ.

 ವೃತ್ತದ ಸುತ್ತಲೂ 8 ದಿಕ್ಕುಗಳಲ್ಲಿಯೂ ರಸ್ತೆ ನಿರ್ಮಾಣ ಮಾಡ ಬೇಕಿದೆ, ಈಗಷ್ಟೆ ಭೂಮಿಯ ಮೇಲೆ ಇಳಿಸುವ ಕೆಲಸ ಆರಂಭವಾಗಿದೆ. ಇದೂ ಸರಿನಾ ಅಥವಾ ಏನಾದರೂ ಬದಲಾವಣೆ ಮಾಡ ಬೇಕಾ? ಎಂಬ ಬಗ್ಗೆ ತಾವೂ ಸಲಹೆ ನೀಡ ಬಹುದು.