28th March 2024
Share
SHAKTHI PEETA CAMPUS LAY-OUT

TUMAKURU:SHAKTHIPEETA FOUNDATION

 ಭೌಗೋಳಿಕವಾಗಿ ಗಮನಿಸಿದಾಗ ಭಾರತ ದೇಶಕ್ಕೆ ವಾಸ್ತು ದೋಷ ಇದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಉತ್ತರದಲ್ಲಿ ಎತ್ತರದ ಹಿಮಾಲಯ ಪರ್ವತ, ದಕ್ಷಿಣವೂ ಸೇರಿದಂತೆ ಮೂರು ಕಡೆ ನೀರು ಮತ್ತೆ ವಾಸ್ತು ಪ್ರಕಾರ ಭಾರತ ಎಲ್ಲಿದೆ?  ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ, ಪರಿಣಿತರು ಮಾತ್ರ ಉತ್ತರಿಸಬೇಕು.

 ಶಕ್ತಿಪೀಠ ಕ್ಯಾಂಪಸ್ ವಾಸ್ತು ಪ್ರಕಾರ ಇರಲು ಸಾಧ್ಯವೇ ಇಲ್ಲ, ಏಕೆಂದರೆ ನಾವು ಭಾರತ ದೇಶ ಹೇಗೆ ಇದೆಯೋ, ಅದೇ ದಿಕ್ಕಿನ ಪ್ರಕಾರ ಭೂಮಿಯ ಮೇಲೆ ಇಳಿಸಲಾಗಿದೆ. ಶಕ್ತಿದೇವತೆ ಇದಕ್ಕೆ ಹೇಳಿ ಮಾಡಿಸಿದ ಹಾಗಿರುವ ಭೂಮಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಭಾವನೆ ನನ್ನದಾಗಿದೆ.

 ನಾನು ಭೇಟಿ ಮಾಡಿದ ಎಲ್ಲಾ ಜ್ಯೋತಿಷಿಗಳು, ವಾಸ್ತು ಶಿಲ್ಪಿಗಳು, ಗುರೂಜಿಗಳು ಯಾರೂ ಸಹ ಲಿಖಿತವಾಗಿ ಏನೂ ಹೇಳುವುದಿಲ್ಲಾ. ಅವರ ಬಳಿ ನಮಗಿರುವ ಗೊಂದಲವಾದ ವಿಷಯಗಳ ಬಗ್ಗೆ ಪ್ರಶ್ನೆ ಮಾಡಿ ಕೇಳಿದರೆ, ನಮ್ಮನ್ನೆ ಪ್ರಶ್ನೆ ಮಾಡುತ್ತಾರೆ. ಅವರಿಗೆ ಆಹಂಕಾರ ಎನ್ನುತ್ತಾರಂತೆ.

 ನನಗೆ ಇರುವ ಗೊಂದಲದಂತೆ ಶಕ್ತಿದೇವತೆ ದೊಡ್ಡವರೋ ಅಥವಾ ಸತಿಯ ಪತಿಯಾಗಿರುವ ಈಶ್ವರ ದೊಡ್ಡವರೋ ಎಂಬ ಪ್ರಶ್ನೆ ನನ್ನಲ್ಲಿ ಮೂಡಿದಾಗ, ನನ್ನ ಪತ್ನಿಯೇ ಹೇಳುತ್ತಾಳೆ ದೇವರ ಬಗ್ಗೆ ಪ್ರಶ್ನೆ ಮಾಡಬಾರದು, ಭಕ್ತಿಯೇ ಶಕ್ತಿ – ನಂಬಿಕೆಯೇ ದೇವರು’ ಸುಮ್ಮನೆ ನಂಬಿ ಎಂದು ಬುದ್ದೀವಾದ ಹೇಳುತ್ತಾಳೆ. ‘ಅವರವರ ಭಾವಕ್ಕೆ, ಅವರವರ ಭಕ್ತಿಗೆ ಬಿಟ್ಟ ವಿಷಯ’ ಎಂಬುದು ನನ್ನ ಅಭಿಪ್ರಾಯ.

ಶಕ್ತಿಪೀಠ ಫೌಂಡೇಷನ್ ಕ್ಯಾಂಪಸ್‌ನಲ್ಲಿ ಉತ್ತರ ಮತ್ತು ಈಶಾನ್ಯ ದಿಕ್ಕುಗಳ ಮಧ್ಯೆ ಭಾಗದಲ್ಲಿ, ಒಂದು ಪುಟ್ಟ ದೇವಾಲಯ ಮತ್ತು ಒಂದು ಪುಷ್ಕರಣಿ ಮಾಡಲು ಸ್ಥಳ ಗುರುತು ಮಾಡಿದೆ. ಈ ಸ್ಥಳ ಸರಿಯಾಗಿದೆಯೇ ಎಂಬ ಬಗ್ಗೆ ಸಲಹೆ ನೀಡಲು ಪರಿಣಿತರಲ್ಲಿ ಮನವಿ ಮಾಡಲಾಗಿದೆ.

ಈಶ್ವರನ ಪತ್ನಿ, ದಕ್ಷಬ್ರಹ್ಮನ ಪುತ್ರಿ ಸತಿಯ ದೇಹಕ್ಕೆ ವಿಷ್ಣು ಚಕ್ರ ಬಿಟ್ಟಾಗ, ಸತಿಯ ದೇಹದ ಭಾಗಗಳು ಬಿದ್ದ ಸ್ಥಳಗಳೇ ಶಕ್ತಿಪೀಠಗಳಾಗಿವೆ. ಸುಮಾರು 108 ಹೆಸರಿನಲ್ಲಿ ಶಕ್ತಿಪೀಠ ದೇವತೆಯರ ಪೂಜೆ ನಡೆಯುತ್ತಿದೆ. ಆದರೇ ವಿಶ್ವದಲ್ಲಿ ಎಲ್ಲಿಯೂ ಸತಿ’ ಯ ಹೆಸರಿನಲ್ಲಿ ದೇವಾಲಯ ನಿರ್ಮಾಣವಾಗಿರುವುದು ಇದೂವರೆಗೂ ತಿಳಿದಿಲ್ಲ. ಮಾಹಿತಿಯಿದ್ದಲ್ಲಿ ಸಲಹೆ ನೀಡಲು ಪರಿಣಿತರಲ್ಲಿ ಮನವಿ.

ಉತ್ತರಖಾಂಡದ ಹರಿಧ್ವಾರದ ಕಂಕಲ್‌ನಲ್ಲಿ ದಕ್ಷಬ್ರಹ್ಮನು ನಡೆಸಿದ ಯಜ್ಞದ ಜಾಗವಿದೆ. ಇದರಲ್ಲಿಯೇ ಸತಿ ಬಿದ್ದಿದ್ದು ಎಂಬ ನಂಬಿಕೆಯೂ ಇದೆ. ಯಜ್ಞ ಕುಂಡವನ್ನು ಇವತ್ತು ಸಹ ಪೂಜಿಸುತ್ತಾರೆ. ಪಕ್ಕದಲ್ಲಿ ದಕ್ಷಬ್ರಹ್ಮನ ದೇವಾಲಯವೂ ಇದೆ. ಇಲ್ಲಿಯೂ ಸಹ ಸತಿಯ ದೇವಾಲಯ ಕಣ್ಣಿಗೆ ಕಾಣಲಿಲ್ಲ.

ಕ್ಯಾಂಪಸ್‌ನಲ್ಲಿ 108 ಶಕ್ತಿಪೀಠಗಳ ಪ್ರಾತ್ಯಾಕ್ಷಿಕೆ ಮಾಡಿದರೂ, ಒಂದು ಶಕ್ತಿದೇವತೆಯ ವಿಗ್ರಹ ಸ್ಥಾಪನೆ ಮಾಡಲೇ ಬೇಕು ಎಂದು ಬಹುತೇಕ ಎಲ್ಲರೂ ಸಲಹೆ ನೀಡಿದ್ದಾರೆ. ಆದರೇ ಯಾವ ಶಕ್ತಿಪೀಠದ ಹೆಸರು ಇಡಬೇಕು ಎಂಬುದು ಇನ್ನೂ ಗೊಂದಲದಲ್ಲಿದೆ.

ನಿಮ್ಮ ಸಲಹೆಗಳಿಗಾಗಿ ಮನವಿ.