6th December 2024
Share

ಶ್ರೀ ಮೋಹನ್‌ಕುಮಾರ್, ಶ್ರೀ ಈಶ್ವರಪ್ರಸಾದ್, ಶ್ರೀ ಶಶಿಕುಮಾರ್, ಬೆಂಗಳೂರಿನ ಶ್ರೀ ಅಶೋಕ್, ಮೈಸೂರಿನ ಶ್ರೀ ಲೋಕೇಶ್, ಶ್ರೀಮತಿ ನೇತ್ರಾ, ಕು.ದ್ರಿಷ್ಠಿ ಮತ್ತು ಕುಂದರನಹಳ್ಳಿ ರಮೇಶ್ ಇದ್ದಾರೆ.

TUMAKURU:SHAKTHIPEETA FOUNDATION

2020-2021  ನೇ ಸಾಲಿನ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಎರಡನೇ ಸಭೆಯು ದಿನಾಂಕ: 21.11.2020  ರಂದು ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಭಾ ಸೂಚನಾ ಪತ್ರ ನೀಡಲು ಬಂದ ಪಿಡಿಯವರಾದ ಶ್ರೀ ಮೋಹನ್ ಕುಮಾರ್ ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.

 ಕಳೆದ ವರ್ಷ 3 ಸಭೆಗಳನ್ನು ನಡೆಸಿದ್ದೇವೆ, ಈ ವರ್ಷದ 2 ನೇ ಸಭೆಯನ್ನು ಕರೆಯಲಾಗಿದೆ, ಇದೂವರೆಗೂ ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಕೇಂದ್ರ ಸರ್ಕಾರದ ಯೋಜನೆಗಳ  ಇಲಾಖಾವಾರು ಇಂಡೆಕ್ಸ್ ಮಾಡಲು ಸಾಧ್ಯವಾಗಿಲ್ಲ ಎಂದರೆ ದಿಶಾ ಸಭೆ ನಡೆಸುವ ಉದ್ದೇಶವೇನು? ಸಾರ್.

 ಬಿಜಾಪುರ ಜಿಲ್ಲೆಯ ಒಂದು ಗ್ರಾಮಪಂಚಾಯಿತಿಯ ಪಿಡಿಓ ಒಬ್ಬರು ಜಿಪಿ ಮಾಡ್ಯುಲ್’ ಎಂಬ ಆಪ್ ಮಾಡಿ, ಕೇಂದ್ರ ಸರ್ಕಾರದಿಂದ ಗ್ರಾಮಪಂಚಾಯಿತಿಗಳಿಗೆ ಬರುವ ಎಲ್ಲಾ ವಿಧವಾದ ಯೋಜನೆಗಳ ಮಾಹಿತಿಯನ್ನು ಬೆರಳ ತುದಿಯಲ್ಲಿ ಇಟ್ಟು ಕೊಳ್ಳುವ ಮಹತ್ತರವಾದ ಕೆಲಸ ಮಾಡಿದ್ದಾರಂತೆ.

 ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ದಿಶಾ ಸಮಿತಿ ಕಾರ್ಯವೈಖರಿ ನೋಡಿ ಕೊಳ್ಳುತ್ತಿರುವ ಶ್ರೀ ಪ್ರಾಣೇಶ್‌ರವರು, ಈ ವಿಚಾರದ ಬಗ್ಗೆ ನನ್ನೊಂದಿಗೆ ಬಹಳ ಹೆಮ್ಮೆಯಿಂದ ಹಂಚಿಕೊಂಡರು. ನಾನೂ ಸಹ ಬಿಜಾಪುರಕ್ಕೆ ಹೋದಾಗ ಈ ವ್ಯಕ್ತಿಯ ಜೊತೆ ಸಮಾಲೋಚನೆ ಮಾಡಬೇಕೆಂದಿದ್ದೇನೆ.

 ಕೇಂದ್ರ ಸರ್ಕಾರ ರಚಿಸಿರುವ ದಿಶಾ ಮಾರ್ಗಸೂಚಿಯ ಪ್ರಕಾರದಂತೆ, ದಿಶಾ ಸಮಿತಿಯ ವ್ಯಾಪ್ತಿಗೆ ಬರುವ ಯೋಜನಾವಾರು ಪಟ್ಟಿ ಮಾಡಿ, ಯಾವ ಇಲಾಖೆ ಮಾಹಿತಿ ನೀಡಿಲ್ಲವೋ, ಆ ಇಲಾಖೆ ಮಾಹಿತಿ ನೀಡಿಲ್ಲ ಎಂದೇ ಬರೆಯಿರಿ. ಮಾಹಿತಿ ನೀಡಿರುವ ಇಲಾಖೆಗಳ ಪಟ್ಟಿ ಮಾಡಿದರೆ, ‘ಉಳಿದ ಯೋಜನೆಗಳ ಕಥೆ ಏನು? ಸಾರ್’.

 ಮಾರ್ಗಸೂಚಿ ನಂತರವೂ ಕೇಂದ್ರ ಸರ್ಕಾರದಿಂದ ಹಲವಾರು ಯೋಜನೆಗಳು ಜಾರಿಯಾಗಿವೆ, ಹೊಸದಾಗಿ ಜಾರಿಯಾಗಿರುವ ಯೋಜನೆಗಳನ್ನೆಲ್ಲಾ ನಾವು ಇಲಾಖಾವಾರು ಸೇರ್ಪಡೆ ಮಾಡಿಕೊಳ್ಳಬೇಕಾಗುತ್ತದೆ. ಮೊದಲು ಸಭೆಯ ಅಜೆಂಡಾದಲ್ಲಿ ಇಲಾಖಾವಾರು, ಯೋಜನೆಗಳ ಪಟ್ಟಿ ಮಾಡಿ, ನಾನು ಮತ್ತು ನಮ್ಮ ಸಮಿತಿಯ ಸದಸ್ಯರಾದ ಶ್ರೀ ಟಿ.ಆರ್.ರಘೊತ್ತಮರಾವ್‌ರವರು ಜಿಲ್ಲೆಯ ಯೋಜನೆಗಳ ಪಟ್ಟಿ ಮಾಡಿ ನಿಮಗೆ ಇ- ಮೇಲ್ ಮಾಡಿದ್ದೇವೆ, ಆ ಪಟ್ಟಿಯನ್ನೇ ನೀವು ನೋಡಿಲ್ಲ ಎಂದರೆ ಹೇಗೆ? ಸಾರ್.

‘ನಾವು ನೀಡಿದ ಪಟ್ಟಿ ನಂತರವೂ, ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಲೇ ಇದೆ. ಅವುಗಳು ಸಹ ಈ ಪಟ್ಟಿಗೆ ಸೇರ್ಪಡೆಯಾಗಲೇ ಬೇಕು. ಇಲ್ಲವಾದರೆ ಹೇಗೆ? ಸಾರ್. ಮೊದಲು ಈ ಕೆಲಸ ಮಾಡಿ ಸಾರ್, ದಯವಿಟ್ಟು ಮಾಡಿ, ದೇಶದಲ್ಲಿಯೇ ಮಾದರಿ ದಿಶಾ ಸಮಿತಿಯಾಗಬೇಕು ಎಂದು ಬಾಯಿ ಮಾತಲ್ಲಿ ಹೇಳಿದರೆ ಸಾಲದು. ಅದು ವ್ಯವಸ್ಥಿತವಾಗಿ ಜಾರಿಯಾಗಬೇಕು.

 ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಷಾ ರವರು ತಮ್ಮ ಟ್ವಿಟ್ಟರ್‌ನಲ್ಲಿ,  ದೇಶಕ್ಕೆ ನಮ್ಮ ಜಿಲ್ಲೆಯ ದಿಶಾ ಸಮಿತಿ ಕಾರ್ಯಕ್ರಮ ಮಾದರಿಯಾಗಬೇಕು. ಎಂದು ಅಧಿಕಾರಿಗಳಿಗೆ ಹೇಳಿದ ವಿಚಾರವನ್ನು ನಾನು ಗಮನಿಸಿದೆ. ಅಷ್ಟೊಂದು ಒತ್ತಡದ ನಡುವೆಯೂ ಅವರು ದಿಶಾ ಸಮಿತಿಗೆ ಎಷ್ಟು ಮಹತ್ವ ನೀಡಿದ್ದಾರೆ, ನೋಡಿ ಸಾರ್.