TUMAKURU: SHAKTHIPEETA FOUNDATION
ದಿನಾಂಕ:18.11.2020 ರಂದು ಗುಬ್ಬಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ, ಗುಬ್ಬಿ ವಿಧಾನಸಭಾ ಕ್ಷೇತ್ರದ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯ ಸಂಸದರ ಆದರ್ಶ ಗ್ರಾಮ ಯೋಜನೆಯ 6 ನೇ ಪ್ರಗತಿ ಪರಿಶೀಲನೆ ಸಭೆ ನಡೆಯಲಿದೆ.
ದಿನಾಂಕ:06.09.2020 ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯಲ್ಲಿ ನಡೆದ ಮಾರಶೆಟ್ಟಿಹಳ್ಳಿ ಸಂಸದರ ಆದರ್ಶ ಗ್ರಾಮ ಯೋಜನೆ 5 ನೇ ಸಭೆಯಲ್ಲಿ ಸುಮಾರು 83 ವಿಷಯಗಳ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲು ಲಿಖಿತವಾಗಿ ಸೂಚಿಸಿದ್ದರು.
ತಾಲ್ಲೂಕು ಮಟ್ಟದ ಅಧಿಕಾರಿಗಳು ಯಾವ ರೀತಿ ಸ್ಪಂಧಿಸಿದ್ದಾರೆ ಎಂಬ ಬಗ್ಗೆ ಕಾದು ನೋಡಬೇಕು. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಸಂಸದರ ಆದರ್ಶ ಗ್ರಾಮ ಯೋಜನೆಯ ಮಾರ್ಗಸೂಚಿಯನ್ನು ಓದಿಕೊಂಡು ಬನ್ನಿ ಎಂದು ಸಂಸದರು ಈಗಾಗಲೇ ಸೂಚಿಸಿದ್ದಾರೆ.
ಸೂಕ್ತ ಮಾಹಿತಿಗಳೊಂದಿಗೆ ಅಧಿಕಾರಿಗಳು ಸಭೆಗೆ ಹಾಜರಾಗುವುದು ಅನಿವಾರ್ಯವಾಗಿದೆ. ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳ ಜನರು ನಮ್ಮೂರಿಗೆ, ಇಂಥಹ ಕಾಮಾಗಾರಿ ಮಾಡಿ ಎಂದು ಎಷ್ಟು ಅರ್ಜಿಗಳನ್ನು ನೀಡಿದ್ದಾರೆ. ಅವುಗಳಿಗೂ ಸೂಕ್ತ ಮಾಹಿತಿಯೊಂದಿಗೆ ಬರಲು ಸಂಸದರು ಸೂಚಿಸಿದ್ದಾರೆ.
ಪ್ರತಿಯೊಂದು ಗ್ರಾಮದಲ್ಲಿ ಬರೆಸಿರುವ ಗೋಡೆ ಬರಹಗಳ ಮತ್ತು ಸಂಸದರ ಯೋಜನೆ ಬಗ್ಗೆ ನಡೆಸಿರುವ ಗ್ರಾಮಸಭೆಗಳ ಫೋಟೋಗಳನ್ನು ಸಭೆಯಲ್ಲಿ ಪ್ರದರ್ಶನ ಮಾಡಲು ಸಂಸದರು ಸೂಚಿಸಿದ್ದಾರೆ.
ಇದೂವರೆಗೂ ಸಂಸದರು ನಡೆಸಿರುವ ಎಲ್ಲಾ ಸಭೆಗಳ ವಿಚಾರಗಳ ಪಾಲಾನಾವರದಿ ಬಗ್ಗೆಯೂ ಸುಧೀರ್ಘವಾದ ಚರ್ಚೆ ನಡೆಯಲಿದೆ.