26th July 2024
Share

TUMAKURU:SHAKTHIPEETA FOUNDATION

  ತುಮಕೂರಿನಲ್ಲಿ  ದೇಶೀ ಕುಶಲಿ ಕಲೆಗೆ ಹೊಸತನದ ಮೆರಗು, ಹೊಸ ಆಲೋಚನೆಗಳೊಂದಿಗೆ ಹೊಸ ಸಾಧ್ಯತೆಗಳ  [NEW Thinking- NEW Possibilities]  ಕನಸು ಕಾಣಲು ಒಂದು ದಶಕದಿಂದಲೂ ಸದ್ಯ ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯರು ಆದ ಶ್ರೀಯುತ ಕುಂದರಹಳ್ಳಿ ರಮೇಶ್ ಅವರ ನಾಯಕತ್ವದಲ್ಲಿ ವಿಷನರಿ ತಂಡ ಕಾರ್ಯನಿರ್ವಹಿಸುತ್ತಿದೆ.

ಈ ತಂಡವು ತಮ್ಮ ಆಲೋಚನೆಗಳಲ್ಲಿ ಒಂದಾದ ಗ್ರಾಮೀಣ ವೃತ್ತಿಗೆ ನೈಪುಣ್ಯದ ಸೊಗಡು, ದೇಶೀಕಲೆಗೆ ಹೊಸತನದ ಮೆರಗು, ನೀಡಿ ಜಾಗತಿಕ ಸವಾಲುಗಳಿಗೆ ಸನ್ನದ್ದಮಾಡಲು ವಿಸೃತ ಚಟುವಟಿಗೆ ಅವಶ್ಯಕವಾದ ಕೇಂದ್ರವನ್ನು ಪರಿಚಯಿಸುವ ಕಾಯಕವನ್ನು ಸಾಕಾರಗೊಳಿಸಲು ಹೊಣೆಹೊತ್ತಿಕೊಂಡು ಮುನ್ನೆಡದಿದೆ.

ಈ ಕಾಯಕಕ್ಕೆ ಈಗಾಗಲೇ ಕೇಂದ್ರ ಹಾಗೂ ರಾಜ್ಯದ  ಸಚಿವಾಲಯದ ಬೆಂಬಲದೊಂದಿಗೆ ಮೂಲ ವಿಜ್ಞಾನದ ಅರಿವು ಮೂಡಿಸುವುದರ ಜೊತೆಗೆ ಗ್ರಾಮೀಣ ವೃತ್ತಿ ನೈಪುಣ್ಯವನ್ನು ಬೆಳಸುವ ಜಿಲ್ಲೆಯನ್ನು ಕೇಂದ್ರವನ್ನಾಗಿ ಮಾಡುವ ಗುರಿ ಗುರುತಿಸಿಕೊಂಡು  ನೈಪುಣ್ಯ ಬೆಳಸುವ ಪರಿಕಲ್ಪನೆಯ ಕೇಂದ್ರವಾಗಿ ಬೆಳಸುವ ಸವಾಲೊಂದಿಗೆ ಹೆಜ್ಜೆ ಇಡುತ್ತಾಇದುವರೆಗೆ ಮುಂದುವರೆದಿದೆ.              

  ಈ ಉದ್ದೇಶ ಹೊತ್ತುಕೊಂಡು ಒಮ್ಮೆ ತುಮಕೂರು -ಮಧುಗಿರಿ ರಸ್ತೆಯಲ್ಲಿರುವ ಅಮಲಾಪುರ ಗ್ರಾಮದ ಪರಿಸರದಲ್ಲಿರುವ ಕೇಂದ್ರೀಯ ವಿದ್ಯಾಯದ ಹಿಂಬದಿಯಲ್ಲಿರುವ  ವಿಶಾಲವಾದ ಸರ್ಕಾರಿ ಭೂಮಿಯನ್ನು ಬಳಸಿ ನಮ್ಮ ಪರಿಕಲ್ಪನೆಯ ವಿಜ್ಞಾನ ಗುಡ್ಡಮತ್ತು ಅದಕ್ಕೆ ಲಗತ್ತಾಗಿ ವಿಜ್ಞಾನ ಕೇಂದ್ರದ ಪರಿಚಯಿಸಲು ಪ್ರಯತ್ನಿಸಲಾಗಿತ್ತು.

 ಈ ವಿಶಾಲ ವಿಜ್ಞಾನ ಕೇಂದ್ರದ ಪ್ರದೇಶದಲ್ಲಿ ವಿಧ್ಯಾರ್ಥಿಗಳಲ್ಲಿ ಸಾರ್ವಜನಿಕರು ಅದರಲ್ಲೂ ಗ್ರಾಮೀಣಭಾಗದ ಜನರಿಗೆ ವಿಜ್ಞಾನ ಹಾಗೂ ತಂತ್ರ ಜ್ಞ್ನಾನ ದ ಮನೋಭಾವ ಜಾಗ್ರತಗೊಳಿಸಲು ಮೂಲಭೂತ ಸೌಕರ್ಯ ಕಲ್ಪಿಸುವಿಕೆ ಮತ್ತು ವಿಜ್ಞಾನ ಗುಡ್ಡ ಪರಿಕಲ್ಪನೆ ಚಿಗುರೊಡೆದಿತ್ತು.

 ಗ್ರಾಮೀಣ ವೃತ್ತಿಗೆ ನೈಪುಣ್ಯದ ಸೊಗಡು, ದೇಶೀಕಲೆಗೆ ಹೊಸತನದ ಮೆರಗು, ಸಂಶೋಧನೆಗೆ ಪ್ರತ್ಯೇಕ ಆವರಣ, ಹಲವಾರು ವನಗಳು, ಹೀಗೆ ಈ ಕೇಂದ್ರವು ವಿಜ್ಞಾನದ ಅರಿವು ಜೊತೆಗೆ ಅಭಿವೃಧ್ಧಿ ಕ್ಷೇತ್ರದಲ್ಲಿ ಸಂಶೋಧನೆಗೂ ಅವಕಾಶ-ಎಲ್ಲಾ ಅನನ್ಯ ಅಲೋಚನೆಗಳ  ಕನಸುಗಳ ಸಾಕಾರಕ್ಕೆ ಸಜ್ಜುಗೊಳಿಸಲು ಅಣಿಮಾಡಲು ಹೊರಟ ಈ ವಿಭಿನ್ನ ಯೋಜನೆಯೇ ವಿಜ್ಞಾನ ಗುಡ್ಡದ ಪರಿಕಲ್ಪನೆ.

ಈ ವಿಷನರಿ ತಂಡಕ್ಕೆ ಪ್ರಕೃತಿಯದೇ ಪಾಠ,  ಈ ಮೂಲಕ ನಮ್ಮ ಸುತ್ತಲ ನೈಸರ್ಗಿಕ ಸಂಪಮ್ಮೂಲ ಬಳಸಿ ಜಿಲ್ಲೆಯ ಜನರ ಮನೋಭೂಮಿಕೆಯನ್ನು ಪರಿವರ್ತನೆ ಮಾಡುತ್ತಾ, ಈ ಮಣ್ಣಿನಲ್ಲಿ ಬೇಕುಗಳನ್ನು ಆತ್ಯಂಕವಾಗಿ ಪಡೆದುಕೊಳ್ಳಲು ಹಾಗೂ  ಜೀವನ ದೃಡತೆಯ ಭವಿಷ್ಯ ಕಾಣಲು ಸಜ್ಜುಗೊಳಿಸಲು ಆಲೋಚಿಸಿತ್ತು.

ಹಾಗೆಯೇ ಏನಾಗ ಬೇಕೆಂದಿದ್ದ ಎನ್ನುವರಿಗೆ ಅವರು-ಅವರ ಚಿಂತನೆಯ ಆಕೃತಿ ಪಡೆದು ಸಮಾಜದಲ್ಲಿ ಸ್ವಾಭಿಮಾನದ ವ್ಯಕ್ತಿತ್ವ ಹೊಂದುವುದು ಜೊತೆಗೆ ಗ್ರಾಮೀಣ ವೃತ್ತಿ ನೈಪುಣ್ಯತೆಗಳನ್ನು ಬೆಳಸುವತ್ತ ಹಾಗೂ ಕೇಂದ್ರೀಕರಿಸುವ ಆಲೋಚನೆಗಳಲ್ಲಿ ಸಂಶೋಧನೆಯ ಭಾಗವೂ ಸೇರಿಸಿ ಎಲ್ಲವನ್ನೂ ಇಲ್ಲಿ ಪಡೆಯಲು ಅವಕಾಶ ಕಲ್ಪಿಸಿ ವಿಜ್ಞಾನಗುಡ್ಡ ವಿಸೃತ ಚಟುವಟಿಗೆ ಕೇಂದ್ರದಲ್ಲಿ ಪರಿಚಯಿಸುವುದು ಎಂದು ಆಲೋಚಿಸಲಾಗಿತ್ತು.

  ಈ ಕೇಂದ್ರಗಳು ಅಂತರರಾಷ್ಟ್ರೀಯ ಮಾನ್ಯತೆ ಪಡೆಯುವುದರ ಜೊತೆಗೆ ಸಾಮಾಜಿಕ ಕ್ರಾಂತಿ ಹಾಗೂ ದೇಶೀ ಕೌಶಲ್ಯಗಳ ಅಭಿವೃಧ್ಧಿ, ರೈತರಿಗೆ ಬೇಸಾಯ ಪದ್ದತಿಯಲ್ಲಿ ಆಧುನೀಕರಣ ಪರಿಚಯ ಹೀಗೆ ಅನೇಕ ಆಲೋಚನೆಗಳೊಂದಿಗೆ ವಿಜ್ಞಾನ ಗುಡ್ಡದ ಅಭಿವೃಧ್ಧಿ ಮತ್ತು  ಈ ಆವರಣದಲ್ಲಿ ಮೂಲ ವಿಜ್ಞಾನದ ಅರಿವು ಮೂಡಿಸುವುದರ ಜೊತೆಗೆ ಗ್ರಾಮೀಣ ವೃತ್ತಿ ನೈಪುಣ್ಯವನ್ನು ಬೆಳಸುವ ಕೇಂದ್ರವನ್ನಾಗಿ ಮಾಡುವ ಉದ್ದೇಶಗಳೆಂದು ಗುರುತಿಸಿಕೊಂಡು  ನೈಪುಣ್ಯ ಬೆಳಸುವ ಪರಿಕಲ್ಪನೆಯ ಕೇಂದ್ರವಾಗಿ ಬೆಳಸುವ ಸವಾಲೊಂದಿಗೆ ಹೆಜ್ಜೆ ಗುರ್ತಿಸಿಕೊಂಡಲಾಗಿತ್ತು.      

  ವಿಜ್ಞಾನ ಕೇಂದ್ರದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರದ ಧ್ಯೇಯೋದ್ದೇಶದ ಫಲಿತಾಂಶಗಳನ್ನು ಕಾಣಲು ಪ್ರತ್ಯೇಕ ಆವರಣ     ದೇಶೀ ಕುಲಕಸುಬುಗಳ ಪುನ: ಶ್ಚೇತನ, ಜಾಗತಿಕ ಸ್ಪರ್ಧೆಗೆ, ಸವಾಲಿಗೆ ಸ್ವೀಕಾರ್ಹ ವಸ್ತು ವಿನ್ಯಾಸದ ನಿಪುಣತೆ, ಪರಿಣಿತಿಗೆ, ಗ್ರಾಮೀಣ ಕುಶಲ ಕರ್ಮಿಗಳಿಗೆ ಬದುಕಿಗೆ -ಕಲಿಕೆಗೆ-ದುಡಿಮೆಗೆ ಪ್ರತ್ಯೇಕ ತರಬೇತಿ ಆವರಣ, ಆಧುನಿಕ ವ್ಯವಸಾಯ ಸಲಕರಣೆ/ಯಂತ್ರಗಳಉಪಯೋಗಿಸುವ            ಬಗ್ಗೆಪ್ರಾತ್ಯಕ್ಷಿಕೆ/ತರಬೇತಿ ಹಾಗೂಸಂಶೋಧನಾಕೇಂದ್ರ, ಶಿಶುಕ್ಷಿಗಳಿಗೆ ವಸತಿ ಸೌಲಭ್ಯ, ಔಷಧಿ ವನ ಹೀಗೆ ಇತ್ಯಾದಿ. 

 ದೇಸಿಕುಲಕಸುಬು  ಆಕೃತಿ ನಿರ್ಮಾಣ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳನ್ನು ನಮ್ಮ ಆಶಯಗಳ ಸಾಧ್ಯತೆಗಳಿಗೆ ಇರುವ ಅವಕಾಶಗಳನ್ನು ಬಳಸಿಕೊಂಡು ವಿಜ್ಞಾನ ಗುಡ್ಡ ಹಾಗೂ ದೇಸಿ ಕುಲಕಸುಬು ಆಕೃತಿ ನಿರ್ಮಾಣ ಕೇಂದ್ರ ಸ್ಥಾಪಿಸಲು ಕ್ರಮವಾಗಿತ್ತು.

ಈ ಹಿಂದೆ ಮಾನ್ಯ ಮುಖ್ಯ ಮಂತ್ರಿಗಳಿಗೆ  ಮನವಿ ಸಲ್ಲಿಸಿ ಈ ಕ್ರಾಂತಿಕಾರಕ ಯೋಜನೆಗೆ ರಾಜ್ಯ ಸರಕಾರ ಸ್ಪಂದಿಸಲು ಕೋರಲು,ತಕ್ಷಣ ಸ್ಪಂದಿಸಿ ಜಿಲ್ಲಾಡಳಿತಕ್ಕೆ ಭೂಮಿಯ ಲಭ್ಯತೆ ಹಾಗೂ ಇತರೆ ಕ್ರಮ ಅನುಸರಣೆಗೆ ಸೂಚಿಸಿದ್ದರು.

  ಈ ಬಗ್ಗೆ ಅಂದಿನ ಸಚಿವರಾದ ಹೆಚ್.ಕೆ.ಪಾಟೀಲ್ ಅವರನ್ನು ಶ್ರಿಯುತ ಸಂಸದ ಜಿ.ಎಸ್ ಬಸವರಾಜ್ ಮತ್ತು ಕುಂದರನಹಳ್ಳಿ ರಮೇಶ್‌ರವರು ಮೊಖ್ತ: ಭೇಟಿ ಮಾಡಿ, ಈ ಯೋಜನೆಯ ವಿವರವನ್ನು ನೀಡಿ ಸರಕಾರದ ಪೂರಕ ಸಹಕಾರ ಕೋರಲಾದ ಹಿನ್ನಲೆಯಲ್ಲಿ, ರಾಜ್ಯ ಸರಕಾರ ಸೂಚನೆ ಅನುಸರಿಸಿ ಏಕ ಗವಾಕ್ಷಿ ಸೌಕರ್ಯ ಅಡಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಚರ್ಚೆಯಾಗಿ ಫ಼ೀಸಿಬಿಲಿಟಿ ಅಧ್ಯಯನ ವರದಿ ಸಿದ್ದಪಡಿಸಲು ತಮ್ಮ ಇಲಾಖೆಯ ಸೋದರ ಸಂಸ್ಧೆಯಾದ ಟೆಕ್‌ಸಾಕ್ [[TECSOK]] ಒಪ್ಪಿಸಲು ಚರ್ಚೆ ನಡೆದಿತ್ತು.

 ನಂತರದ ದಿನಗಳಲ್ಲಿ ಮಾಜಿ ಸಚಿವ ಶ್ರೀ ಟಿ.ಬಿ.ಜಯಚಂದ್ರರವರು ಈ ಯೋಜನೆಯನ್ನು ಸಿರಾ ತಾಲ್ಲೂಕಿನ 811 ಎಕರೆ ಮತ್ತು ಹಿರಿಯೂರು ತಾಲ್ಲೂಕಿನ 109 ಎಕರೆ ವಿಶಾಲ ಭೂಮಿ ಲಭ್ಯತೆ ಇರುವುದನ್ನು ಗಮನಿಸಿ  ಕರ್ನಾಟಕ ಹೆರಿಟೇಜ್ ಹಬ್’ ಎಂದು ಹೆಸರಿಸಿ ಈ ಆವರಣದಲ್ಲೇ ದೇಶೀ ಕೌಶಲ್ಯಗಳ ಅಭಿವೃಧ್ಧಿ ಆವರಣ ಸಹಿತ ಪಿಲುಕುಳ ಮಾದರಿಯಲ್ಲಿ  ಇಕೋ ಟೂರಿಸಂ  ಸೌಲಭ್ಯ ಸ್ಥಾಪಿಸಲು ದಿನಾಂಕ 12.02.2018 ರ ರಾಜ್ಯ ಸರಕಾರದ ಸಂಪುಟ ಸಭೆಯಲ್ಲಿ ಒಪ್ಪಿದೆ. ಜಯಚಂದ್ರರವರ ಸೋಲಿನ ಜೊತೆಗೆ ಹೆರಿಟೇಜ್‌ಹಬ್ ಸಹ ಸೋಲು ಕಂಡಿದೆ. ಸಿರಾ ಉಪ ಚುನಾವಣೆಯಲ್ಲಿ ನೂತನ ಶಾಸಕರಾಗಿ ಆಯ್ಕೆಯಾಗಿರುವ ಶ್ರೀ ರಾಜೇಶ್ ಗೌಡರವರು ಮುಂದೇನು ಎಂಬ ಬಗ್ಗೆ ಸ್ಪಷ್ಟ ಪಡಿಸುವರೇ ಕಾದು ನೋಡಬೇಕು. 

                                                                                                ಟಿ.ಆರ್.ರಘೋತ್ತಮ ರಾವ್