12th October 2024
Share

TUMAKURU:SHAKTHIPEETA FOUNDATION

ತುಮಕೂರು ಲೋಕಸಭಾ ಕ್ಷೇತ್ರದ, ಗುಬ್ಬಿ ವಿಧಾನಸಭಾ ಕ್ಷೇತ್ರದ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ದೇಶದಲ್ಲಿಯೇ ಮಾದರಿ ಸಂಸದರ ಆದರ್ಶ ಗ್ರಾಮ ಯೋಜನೆ ಮಾಡುವುದಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಪ್ರತಿಜ್ಞೆ ಮಾಡಿದರು.

ಸಂಸದರ ಆದರ್ಶ ಗ್ರಾಮ ಯೋಜನೆ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀ ರಮೇಶ್‌ರವರ ಅಧ್ಯಕ್ಷತೆಯಲ್ಲಿ ದಿನಾಂಕ:18.11.2020 ರಂದು ಗುಬ್ಬಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪ್ರತಿಜ್ಞೆ ಮಾಡಿದರು.

 ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಯಾವ ಯಾವ ಯೋಜನೆ ರೂಪಿಸಬಹುದು ಎಂಬ ಬಗ್ಗೆ ಪ್ರತಿಯೊಂದು ಇಲಾಖಾವಾರು ಚರ್ಚೆನಡೆಯಿತು. ಸುಮಾರು 83 ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದ ಶ್ರೀ ರಮೇಶ್‌ರವರು ತಾತ್ಕಾಲಿಕ ವಿಡಿಪಿ ಪ್ಲಾನ್ ಪರಿಷ್ಕೃತ ಗೊಳಿಸಿ ದೇಶಕ್ಕೆ ಮಾದರಿಯಾದ ವಿಡಿಪಿ ಪ್ಲಾನ್ ಮಾಡಲಾಗುವುದು ಎಂದರು.

ಸಭೆಗೆ ಗೈರಾಜರಾದ ಅಧಿಕಾರಿಗಳನ್ನು ಕರೆಸಿ, ಕರೆಸಿ ಚರ್ಚಿಸಿದ್ದು, ಮುಂದಿನ ಸಭೆಗೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಲಿಖಿತ ವರದಿಯೊಂದಿಗೆ ಸಭೆಗೆ ಹಾಜರಾಗಲು ನಿರ್ಣಯ ಮಾಡಿದ್ದು. ಭಾಗವಹಿಸಿದ್ದ ಎಲ್ಲರೂ ಸ್ವಯಂ ನಿರ್ಧಾರ ಕೈಗೊಂಡು ಮಾದರಿ ಯೋಜನೆಯಾಗಿ ಶ್ರಮಿಸಲು ಘೋಶಿಸಿದ್ದು ನಿಜಕ್ಕೂ ಶ್ಲಾಘನೀಯ.

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ಮಾತನಾಡಿ, ಈ ರೀತಿ ಸಭೆ ಬಹಳ ಹಿಂದೆಯೇ ನಡೆಯಬೇಕಿತ್ತು, ವಿಳಂಭ ಮಾಡಿರುವುದು ನನಗೆ ಅಸಮಾಧಾನ,  ಆದರೂ ಇಂದಿನ ಸಭೆ ನಿಜಕ್ಕೂ ಅರ್ಥಪೂರ್ಣವಾಗಿದೆ. ನೋಡೆಲ್ ಅಧಿಕಾರಿಯವರು ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ನಡೆಸುವುದಾಗಿ ತಿಳಿಸಿರುವುದು ಒಳ್ಳೆಯ ಬೆಳವಣೆಗೆ.

ಶ್ರೀ ಜಿ.ಎಸ್.ಬಸವರಾಜ್‌ರವರು ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ, ಇಡೀ ವಿಶ್ವವೇ ಗಮನ ಸೆಳೆಯುವ ಹೆಚ್.ಎ.ಎಲ್ ಘಟಕ ಸ್ಥಾಪನೆಗೆ ಕಾರಣೀಭೂತರಾಗಿದ್ದಾರೆ. ಪ್ರಸ್ತುತ ದೇಶಕ್ಕೆ ಮಾದರಿಯಾಗುವ ಸಂಸದರ ಆದರ್ಶ ಗ್ರಾಮ ಯೋಜನೆ ರೂಪಿಸಲು ಮುಂದಾಗಿದ್ದಾರೆ. ಎಲ್ಲಾ ಅಧಿಕಾರಿಗಳು ಒಂದು ಕುಟುಂಬದ ಸದಸ್ಯರಂತೆ ಕಾರ್ಯನಿರ್ವಹಿಸುವ ಮೂಲಕ ಸಂಸದರ ಕನಸಿನ   ಮಾದರಿ ಯೋಜನೆಗೆ ಶ್ರಮಿಸಲು ಕರೆನೀಡಿದರು.

 ಗುಬ್ಬಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಅನೂಸೂಯ ನರಸಿಂಹಮೂರ್ತಿ ಮಾತನಾಡಿ, ಮಹಿಳೆಯರಿಗೆ ಸ್ವಯಂ ಉದ್ಯೋಗ ನೀಡಲು ವಿಶೇಷ ಯೋಜನೆ ರೂಪಿಸಲು ಸಲಹೆ ನೀಡಿದರು. ಗುಬ್ಬಿ ತಾಲ್ಲೂಕು ಪಂಚಾಯಿತಿ ಇಓ ಶ್ರೀ ನರಸಿಂಹಯ್ಯನವರು, ಆಢಾಳಿತಾಧಿಕಾರಿ ಶ್ರೀ ಸೋಮಶೇಖರ್ ಸೇರಿದಂತೆ ಬಹುತೇಕ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಪಿಡಿಓ ಶ್ರೀ ಗುರುಮೂರ್ತಿಯವರು ಪ್ರಾರ್ಥಿಸಿ, ವಂದಿಸಿದರು. ಮುಂದಿನ ತಿಂಗಳ ಸಭೆಯ ವೇಳೆಗೆ, ನಾನೇ ಪ್ರತಿಯೊಂದು ಇಲಾಖೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಉತ್ತಮ ವಿಡಿಪಿ ಕರಡು ತಯಾರಿಸಲು ಶ್ರಮಿಸುವುದಾಗಿ ತಿಳಿಸಿದರು.