9th October 2024
Share

TUMAKURU:SHAKTHIPEETA FOUNDATION

 ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಯ, ಎಲ್ಲಾ ಯೋಜನೆಗಳು ತುಮಕೂರು ಜಿಐಎಸ್ ಪೋರ್ಟಲ್‌ನಲ್ಲಿ ಲೇಯರ್‌ವಾರು ಮಾಹಿತಿಗಳನ್ನು, ಸಾರ್ವಜನಿಕರು ಸಹ ವೀಕ್ಷಣೆ ಮಾಡಲು ಡಿಸೆಂಬರ್ ತಿಂಗಳ ಒಳಗಾಗಿ ಲೋಕಾರ್ಪಣೆ ಮಾಡುವ ಮಹತ್ವದ ನಿರ್ಣಯವನ್ನು ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯ ಕೈಗೊಂಡಿದೆ.

 ಕೇಂದ್ರ ಸರ್ಕಾರದ ಸಚಿವರಾದ ಶ್ರೀ ರವಿಶಂಕರ್ ಪ್ರಸಾದ್ ರವರು  ವರ್ಕ್ ಪ್ರಂ ಹೋಮ್- ವರ್ಕ್ ಪ್ರಂ ಎನಿವೇರ್’ ಎಂದು ಘೋಷಣೆ ಮಾಡಿರುವ ಮಾದರಿಯಲ್ಲಿ, ತುಮಕೂರು ಜಿಲ್ಲಾ ದಿಶಾ ಸಮಿತಿಯ ಸದಸ್ಯರು ಮನೆಯಲ್ಲಿ ಕುಳಿತು ಪೋರ್ಟಲ್‌ನಲ್ಲಿ ಯಾವ ಇಲಾಖೆಯ, ಯಾವ ಅಧಿಕಾರಿಗಳು, ಯಾವ ಕೆಲಸ ಮಾಬೇಕು ಎಂದು ಸಲಹೆ ನೀಡುವ ಮಹತ್ವದ ಯೋಜನೆಗೂ ಚಾಲನೆ ನೀಡಲು ನಿರ್ಣಯಿಸಲಾಗಿದೆ.

 ಒಮ್ಮೆ ದಿಶಾ ಸಮಿತಿಯಲ್ಲಿ ಚರ್ಚಿಸಿದ ವಿಷಯ, ನಿರ್ಣಯ ಮಾಡಿದ ಪ್ರತಿಯೊಂದು ಯೋಜನೆಯ ಮಾಹಿತಿಯ ಬಗ್ಗೆ ಪೋರ್ಟಲ್‌ನಲ್ಲಿ ದಾಖಲೆಯಾಗಲಿದೆ. ಯಾವುದೇ ಅಧಿಕಾರಿ ಮಾಹಿತಿಯಿಲ್ಲ, ಹಿರಿಯ ಅಧಿಕಾರಿಗಳು ಬಂದಿಲ್ಲ ಎಂದು ಹೇಳುವ ಪ್ರಮೇಯವೇ ಇನ್ನೂ ಮುಂದೆ ಬರುವುದಿಲ್ಲ.  

ದಿನಾಂಕ:21.11.2020 ರಂದು ನಡೆದ ದಿಶಾ ಸಮಿತಿ ಸಭೆಯಲ್ಲಿ, ತುಮಕೂರು ಸಂಸದ ಹಾಗೂ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು, ಜಿಲ್ಲಾಧಿಕಾರಿ ಶ್ರೀ ರಾಕೇಶ್‌ಕುಮಾರ್‌ರವರು ಮತ್ತು ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶುಭಕಲ್ಯಾಣ್‌ರವರು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಫ್ಲಿಕೇಷನ್ ಸೆಂಟರ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

 ಪ್ರತಿಯೊಂದು ಯೋಜನಾವಾರು ನಿಖರವಾದ ಮಾಹಿತಿಯನ್ನು ಯಾವ ಇಲಾಖೆ ನೀಡಿಲ್ಲ, ಯಾವ ಅಧಿಕಾರಿ ಸಭೆಗೆ ಗೈರಾಜರಾಗಿದ್ದಾರೆ, ಎಂಬ ಬಗ್ಗೆ ಸಭೆಯ ನಿರ್ಣಯದಲ್ಲೇ ದಾಖಲೆಯಾಗಲಿದೆ. ಇಲ್ಲಿಯವರೆಗೂ ಯಾವ ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ನೀಡಿರುತ್ತಿದ್ದರೋ ಅಷ್ಟು ವಿಷಯಗಳ ಬಗ್ಗೆ ಮಾತ್ರ ಚರ್ಚೆಯಾಗುತ್ತಿತ್ತು. ಉಳಿದ ವಿಷಯಗಳ ಬಗ್ಗೆ ಯಾವುದೇ ಕ್ರಮಕೈಗೊಂಡಿರಲಿಲ್ಲ.

ಇನ್ನೂ ಮುಂದೆ ಕೇಂದ್ರ ಸರ್ಕಾರ  ಘೋಶಿಸಿದ ಹೊಸ ಯೋಜನೆಯನ್ನು, ತಕ್ಷಣವೇ ಪೋರ್ಟಲ್‌ನಲ್ಲಿ ದಾಖಲೆ ಮಾಡಲೇ ಬೇಕು. ಕೇಂದ್ರ ಸರ್ಕಾರದಿಂದ ಯಾವುದೇ ಇಲಾಖೆಗೆ, ಯಾವುದೇ ಯೋಜನೆಯ ಬಗ್ಗೆ ನಡೆಸಿದ ಪತ್ರ ವ್ಯವಹಾರಗಳು ಸಹ ದಿಶಾ ಸಮಿತಿ ಸಭೆಯ ಗಮನಕ್ಕೆ ತರಲೇಬೇಕು.

ಈ ಬಗ್ಗೆ ತುಮಕೂರು ಜಿಲ್ಲೆಯಲ್ಲಿ ಕೈಗೊಂಡಿರುವ ಬಹುತೇಕ ಎಲ್ಲಾ ಯೋಜನೆಗಳ ಪಟ್ಟಿ ಮತ್ತು ಹೊಸದಾಗಿ ಪ್ರಯತ್ನಿಸುತ್ತಿರುವ ಯೋಜನೆಗಳ ಮಾಹಿತಿ ಸೇರಿದಂತೆ ಸುಮಾರು 150 ಯೋಜನೆಗಳ ಪಟ್ಟಿಯನ್ನು ಅಧ್ಯಕ್ಷರಿಗೆ ನೀಡಲಾಗಿದೆ.

 ಈ ಸಭೆಯ ನಡವಳಿಕೆಗಳಿಂದಲೇ ಯೋಜನಾವಾರು ನಿರ್ಣಯ ಮಾಡಲಾಗುವುದು. ಇದರಿಂದ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು, ಜಾಗೃತರಾಗಲೇ ಬೇಕು ಎಂಬ ವಾತಾವಾರಣ ಸೃಷ್ಟಿಯಾಗಲಿದೆ. ಸಾರ್ವಜನಿಕರು ಸಹ ವೀಕ್ಷಣೆ ಮಾಡಬಹುದಾಗಿದೆ.

ಯಾವ ಯೋಜನೆಯನ್ನು ಹೆಚ್ಚು ಜನ ಗಮನಿಸಿದ್ದಾರೆ ಎಂಬ ಡಿಜಿಟಲ್ ದಾಖಲೆಯೂ ದೊರೆಯಲಿದೆ. ಇಲ್ಲಿಯವರೆಗೂ ನಡೆದ 5 ಸಭೆಯ ಪಾಲಾನಾ ವರದಿಯಲ್ಲಿನ ಅಂಶಗಳು ಸಹ ಜನತೆಯ ವೀಕ್ಷಣೆಗೆ ದೊರೆಯಲಿದೆ.

ನೋಡೋಣ ಯಾವ ರೀತಿ ತುಮಕೂರು ಜಿಐಎಸ್ ಪೋರ್ಟಲ್ ಅಫ್ ಡೇಟ್ ಆಗಲಿದೆ.