22nd December 2024
Share

TUMAKURU:SHAKTHIPEETA FOUNDATION

 ತುಮಕೂರು ಜಿಲ್ಲೆಯಲ್ಲಿ ಮೆಗಾ ಸೋಲಾರ್ ವಿಧ್ಯುತ್ ಪಾರ್ಕ್ – ಜಿಲ್ಲೆಗೆ  ಬೇಕು ನ್ಯಾಷನಲ್ ಇನ್ಸಟ್ಯೂಟ್ ಆಫ಼್ ಸೋಲಾರ್ ಎನರ್ಜಿ [NISE] ಕೇಂದ್ರ

 ಮೆಗಾ ಸೋಲಾರ್ ಪಾರ್ಕಗಳಿಗೆ ಪೂರಕವಾಗಿ ಮತ್ತು ಅದರ ಅಗತ್ಯತೆ ಪರಿಣತರರನ್ನು ಸನ್ನದ್ದಗೊಳಿಸಲು ಸದ್ಯ ಗುರಗಾಂವ ಬಳಿ ಕೇಂದ್ರಸರಕಾರದ ನ್ಯೂ ಅಂಡ್ ರಿನ್ಯೂಯಬಲ್ ಎನರ್ಜಿ ಸಚಿವಾಲಯದ ಸ್ವಾಯಸ್ಥ ಸಂಸ್ಧೆಯಾಗಿ 200 ಎಕರೆ ವಿಶಾಲ ಪ್ರದೇಶದಲ್ಲಿ ನ್ಯಾಷನಲ್ ಇನ್ಸಟ್ಯೂಟ್ ಆಫ಼್ ಸೋಲಾರ್ ಎನರ್ಜಿ  ಸೆಂಟರ್ ಆಫ಼್ ಎಕ್ಸಲೆನ್ಸಿ ಕೇಂದ್ರವಾಗಿ ಸ್ಥಾಪಿಸಲಾಗಿದೆ. ಈ ಸಂಸ್ಧೆಯು ಸೋಲಾರ್ ಮಿಷನ್ ಕಾರ್ಯನೀತಿ ಅಡಿಯಲ್ಲಿ ಕಾರ್ಯನಿರ್ವಹಿಸಿ ಸಂಶೋಧನೆ ಮತ್ತು ಅಭಿವೃಧ್ಧಿ ಗಮನ ಕೇಂದ್ರೀಕರಿಸುತ್ತಾ, ಭವಿಷ್ಯದಲ್ಲಿ ಮೆಗಾ ಸೋಲಾರ್ ಪಾರ್ಕ್‌ಗಳಿಗೆ ಮಾನವ ಸಂಪನ್ಮೂಲ ಸಿದ್ದಪಡಿಸಲು ಕೌಶಲ್ಯ/ತರಬೇತಿ ನೀಡಲು ಸ್ಥಳೀಯ ತಾಂತ್ರಿಕ ಸಂಸ್ಧೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

  ಈ ತರಬೇತಿ ಸಂಸ್ಧೆಗಳ ಮೂಲಕ ಅದರಲ್ಲೂ ಗ್ರಾಮಾಂತರ ಪ್ರದೇಶದ ಪದವೀದರ ರಲ್ಲದ ಯುವಕರಿಗೆ ಸೋಲಾರ ಎನರ್ಜಿ ಆವರಣದ ಮೇಲ್ಚಾವಣಿ ಸೊಲಾರ್ ವಿಧ್ಯುತ ಫೊಟೋವೋಲ್ಟಾವಿಕ್ ಅಳವಡಿಸುವ ಚಟುವಟಿಕೆಗಳಲ್ಲಿ ಸೂರ್ಯ ಕಿರಣ ಮಿತ್ರ ಯೋಜನೆ ಅಡಿಯಲ್ಲಿ ತರಬೇತಿ ನೀಡಿ ಈ ಆವರಣದಲ್ಲಿ ಕುಶಲಿಗಳನ್ನಾಗಿಸಲು ಕ್ರಮವಹಿಸುತ್ತಿದೆ.

   ತುಮಕೂರು ಜಿಲ್ಲೆಯು ಏಷ್ಯಾ ಖಂಡದಲ್ಲಿಯೇ ದೊಡ್ಡದಾದ ಮೆಗಾ ಸೋಲಾರ್ ಎನರ್ಜಿ ಪಾರ್ಕ್ ಹೊಂದಿರುವುದರಿಂದ ಜಿಲ್ಲೆಗೆ ಕೇಂದ್ರಸರಕಾರದ ವತಿಯಿಂದ ನ್ಯೂ ಅಂಡ್ ರಿನ್ಯೂಯಬಲ್ ಎನರ್ಜಿ ಸಚಿವಾಲಯದ ವತಿಯಿಂದ ನ್ಯಾಷನಲ್ ಇನ್ಸಟ್ಯೂಟ್ ಆಫ಼್ ಸೋಲಾರ್ ಎನರ್ಜಿ  ಸೆಂಟರ್ ಆಫ಼್ ಎಕ್ಸಲೆನ್ಸಿ ಕೇಂದ್ರ ಪಡೆಯಲು ಅರ್ಹತೆಗಳಿಸಿದೆ.

  ಆದರ ಸಂಭಂದದ ಪ್ರಯತ್ನಗಳು ನಡೆದಿದೆಯೇ ಎಂಬುದನ್ನು ಗಮನಿಸಿದಾಗ ಕಂಡುಬಂದಿದ್ದು ಹಾಲಿ ಸಂಸದರು ಶ್ರೀ ಜಿಎಸ್ ಬಸವರಾಜ್ ರವರು 10/2005  ರಲ್ಲಿ ಅಂದಿನ ರಿನ್ಯೂಬಲ್ ಎನರ್ಜಿ ಸ್ವತಂತ್ರ ರಾಜ್ಯ ಸಚಿವರಾಗಿದ್ದ ಶ್ರೀಯುತ ಪಿಯುಷ್ ಗೋಯಲ್ ಅವರಿಗೆ ಪತ್ರಬರೆದಿರುವುದು , ಅದಕ್ಕೆ ಅವರಿಂದ ನವೆಂಬರ್2005 ರಲ್ಲಿ ಪ್ರಸ್ಥಾವನೆಯನ್ನು ಪರಿಶೀಲಿಸುವುದಾಗಿ ತಿಳಿಸಿರುವುದು ಮತ್ತು ಅಂದಿನ ರಿನ್ಯೂಬಲ್ ಎನರ್ಜಿ ಸಚಿವಾಲಯದ ಜಾಯಿಂಟ್ ಸೆಕ್ರಟರಿ ಶ್ರೀ ತರುಣ್ ಕಪೂರ್ ರವರು ತುಮಕೂರು ಜಿಲ್ಲೆಯು ಏಷ್ಯಾ ಖಂಡದಲ್ಲಿಯೇ ದೊಡ್ಡದಾದ ಮೆಗಾ ಸೋಲಾರ್ ಎನರ್ಜಿ ಪಾರ್ಕ್ ಹೊಂದಿರುವುದರಿಂದ ಜಿಲ್ಲೆಗೆ ನ್ಯಾಷನಲ್ ಇನ್ಸಟ್ಯೂಟ್ ಆಫ಼್ ಸೋಲಾರ್ ಎನರ್ಜಿ ಸ್ಥಾಪನೆಗೆ  ಕೋರಿಕೆಗೆ ಮೆಚ್ಚುಗೆ ವ್ಯಕ್ತ ಪಡಿಸಿ ಅದರ ಸಂಬಂಧ ವಾಗಿ ಸಚಿವಾಲಯದಲ್ಲಿ ಪೂರಕ ಕ್ರಮ ವಹಿಸುದಾಗಿ ತಿಳಿಸಿರುವುದು ಕಂಡು ಬಂದಿದೆ.

 ಈ ಸಂಬಂಧವಾಗಿ ಇಂದಿನ ರಾಜ್ಯ ಮಟ್ಟದ ದಿಶಾ ಸಮಿತಿಯ  ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ರವರು ಅವರೊಂದಿಗೆ ನಾನು, ಅಂದಿನ ಜಿಲ್ಲಾಧಿಕಾರಿಯಾಗಿದ್ದ ಶ್ರಿಯುತ ಮೋಹನ್ ರಾಜ್ ಅವರನ್ನು ಭೇಟಿ ಮಾಡಿ ನ್ಯಾಷನಲ್ ಇನ್ಸಟ್ಯೂಟ್ ಆಫ಼್ ಸೋಲಾರ್ ಎನರ್ಜಿ ಸಂಸ್ಧೆ- ಜಿಲ್ಲೆಗೆ ಅವಶ್ಯಕತೆ ಮತ್ತು ಅದು ತುಮಕೂರು ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯದ ಮಾಸ್ಟರ್ ಪ್ಲಾನ್‌ನಲ್ಲಿ ಗುರುತಿಸಿರುವ ನಾಲೆಡ್ಜ್ ಪಾರ್ಕ್‌ನಲ್ಲಿ ಅವಕಾಶದ ಬಗ್ಗೆ ಚರ್ಚಿಸಲಾಗಿತ್ತು.

 ಹಿಂದಿನ ಮಾನ್ಯ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಕೆ.ಪಿ.ಮೋಹನ್‌ರಾಜ್‌ರವರು ಇದು ಪ್ರಾಂಟೇರ್ ಸ್ಟಡೀಸ್ ಸೆಂಟರ್-ಎಂ.ಎನ್.ಆರ್.ಇ  ನೀತಿ ಅಡಿಯಲ್ಲಿ ಕೆಲಸ ಮಾಡುವ  ಉನ್ನತ ಮಟ್ಟದ ಅಧ್ಯಯನ ಕೇಂದ್ರ ಮತ್ತು ಕುಶಲಿಗಳನ್ನು ಸಿದ್ದ ಪಡಿಸುವ ಹೊಣೆ ಇದೆ, ಈಗ ತುಮಕೂರು ಜಿಲ್ಲೆ ಬ್ರಹತ್ ಸೋಲಾರ್ ಪಾರ್ಕ್ ಸ್ಥಾಪನೆ ಆಗುತ್ತಿರುವುದರಿಂದ ಇದು ಉತ್ತಮ ಸಲಹೆ ಆಗಿದೆ. ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದ್ದು ಈಗ ಇದು ಅಲ್ಲಿಗೇ ನಿಂತಿದೆ.

  ಕರ್ನಾಟಕದಲ್ಲಿ ಸೂರ್ಯ ಕಿರಣ ಮಿತ್ರ ಕೌಶಲ್ಯ ಅಭಿವೃಧ್ಧಿ ಯೋಜನೆ ಆಡಿಯಲ್ಲಿ ಈ ಸ್ವಾಯತ್ತ ಸಂಸ್ಧೆಯೊಂದಿಗೆ ಒಪ್ಪಂದ ಮಾಡಿಕೊಂಡು  ತರಬೇತಿ ನೀಡುತ್ತಿರುವ ದೇಶದಲ್ಲಿನ ಸಂಸ್ಧೆಗಳ ಪಟ್ಟಿ ಅವಲೋಕಿಸಿದಾಗ ರಾಜ್ಯದ ಇತರೆ ಜಿಲ್ಲೆಯಲ್ಲಿ ತರಬೇತಿ ಸೆಂಟರ್‌ಗಳು  ಇದ್ದರೂ, ಏಷ್ಯಾ ಖಂಡದಲ್ಲಿಯೇ ದೊಡ್ಡದಾದ ಮೆಗಾ ಸೋಲಾರ್ ಎನರ್ಜಿ ಪಾರ್ಕ್ ಹೊಂದಿರುವ ತುಮಕೂರು ಜಿಲ್ಲೆಯಲ್ಲಿ ಒಂದೂ ತರಬೇತಿ ಸಂಸ್ಧೆಯು ಪಾಟ್ನ್‌ರ್ ಆಗಿರುವುದು ಕಂಡುಬಂದಿಲ್ಲ.

 ಆದ್ದರಿಂದ ರಾಜ್ಯ ಸರಕಾರದ ವತಿಯಿಂದ /ಜಿಲ್ಲಾಡಳಿತ ವಾಗಲಿ ನ್ಯಾಷನಲ್ ಇನ್ಸಟ್ಯೂಟ್ ಆಫ಼್ ಸೋಲಾರ್ ಎನರ್ಜಿ[NISE]

ಕೇಂದ್ರ ಜೊತೆ ಸೆಮಿನಾರ್ ಏರ್ಪಡಿಸಿ ಸ್ಥಳೀಯ ನಿರುದ್ಯೋಗಿ ಯುವಕರು  ಸ್ಥಳೀಯವಾಗಿ ತರಬೇತಿ ಪಡೆಯಲು ಸ್ಥಳೀಯ ಇಂಜಿನಿಯರಿಂಗ್ ಕಾಲೇಜ್/ ಪಾಲಿಟೆಕ್ನಿಕ್/ಇತರೆ ಕೌಶಲ್ಯ ತರಬೇತಿ ಸಂಸ್ಧೆಗಳು ಮುಂದೆ ಬರುವಂತೆ ಮಾಡಲು ಕ್ರಮವಹಿಸಬೇಕಾಗಿದೆ.

  ಕೊನೆಯದಾಗಿ ಕೇಂದ್ರ ಸರಕಾರಕ್ಕೆ ಆಗ್ರಹಿಸಿ ತುಮಕೂರು ಜಿಲ್ಲೆಯ ಮಧುಗಿರಿ/ಪಾವಗಡ/ ತುಮಕೂರು ಸಮೀಪದಲ್ಲಿ ಪ್ರಸ್ಥಾಪಿತ ನ್ಯಾಷನಲ್ ಹೂಡಿಕೆ ಮತ್ತು ಉತ್ಪಾದನಾ ವಲಯದಲ್ಲಿ ಭೂಸ್ವಾಧೀನವಾಗಿರುವ 13000 ಎಕರೆ ಯಲ್ಲಿನ ಭಾಗವಾಗಿ 200 ಎಕರೆಯಲ್ಲಿ ಸ್ಥಾಪಿಸ ಬೇಕಾಗಿದೆ. ರಾಜ್ಯದ ಅದರಲ್ಲೂ ತುಮಕೂರು ಜಿಲ್ಲೆಯ ನಿರುದ್ಯೋಗಿ ಯುವಕರು ಸೋಲಾರ್ ಎನರ್ಜಿ ಆವರಣದಲ್ಲಿ ಕೌಶಲ್ಯವನ್ನು ಪಡೆದು ಎಂಪ್ಲಾಲಯಬಲ್ ಆಗಲು  ಮತ್ತು ಈ ಆವರಣದ ಉದ್ಯೋಗಗಳು  ಜಾಬ್ಸ್ ಫ಼ಾರ್ ಲೋಕಲ್ಸ್  ಘೋಷಣೆಗೆ ಪೂರಕ ವಾತಾವರಣ ಸಿದ್ದವಾಗುತ್ತದೆ, ಇಲ್ಲದಿದ್ದರೆ ಬೇರೆ ರಾಜ್ಯಗಳ ಯುವಕರ ಪಾಲಾಗುವ ಸಂಭವ ಹೆಚ್ಚು .

                                                                                                                ಟಿ.ಆರ್.ರಘೋತ್ತಮ ರಾವ್