26th July 2024
Share

  

TUMAKURU:SHAKTHIPEETA FOUNDATION

ಡಿಫೆನ್ಸ್ ಕಾರಿಡಾರ್ ಕರ್ನಾಟಕದ ಬಾಗಿಲ ಬಳಿ ತನಕ ಇದೆ – ಆದರೆ ಕರ್ನಾಟಕದ ಒಳಭಾಗಕ್ಕೆ ಇಲ್ಲ   – ಬೇಕು ರಾಜ್ಯ ಸರಕಾರದ ಲಾಬಿ

 ಕೇಂದ್ರ ಸರಕಾರ ರಕ್ಷಣಾ ಸಚಿವಾಲಯದ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್  ಮತ್ತು ಡಿಫೆನ್ಸ್ ಪಬ್ಲಿಕ್ ಸೆಕ್ಟಾರ್ ಅಂಡರ್‌ಟೇಕಿಂಗ್‌ಗಳ ಹೂಡಿಕೆ ಯೊಂದಿಗೆ ಉತ್ತರ ಭಾರತದ ಉತ್ತರಪ್ರದೇಶ-ಬಿಹಾರ್ ಮತ್ತು ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಡಿಫೆನ್ಸ್ ಕಾರಿಡಾರ್  ಪರಿಚಯಿಸಿದೆ.

 ಈ ಕಾರಿಡಾರ್‌ನಲ್ಲಿ ಉತ್ತರ ಭಾರತದಲ್ಲಿ 6 ಸಂಖ್ಯೆ ಮತ್ತು ದಕ್ಷಿಣದಲ್ಲಿ 5 ನೋಡಲ್ ಪಾಯಿಂಟ್ಸ್ ಆಭಿವೃಧ್ಧಿ ಪಡಿಸಿಲು ಕ್ರಮವಹಿಸಿದೆ. ದಕ್ಷಿಣಭಾರತದ ಡಿಫೆನ್ಸ್ ಕಾರಿಡಾರ್ 3100 ಕೋಟಿ ರೂ ಹೂಡಿಕೆಯೊಂದಿಗೆ ಚೆನ್ನೈ-ತಿರುಚಾನಪಳ್ಳಿ-ಕೊಯಮೊತ್ತೂರು, ಸೇಲಂ ಹೊಸೂರ್ ವರೆಗೆ ಇರಲಿದೆ.

 ಅದು ಬೆಂಗಳೂರು ತುಮಕೂರು ಇಂಡಸ್ಟ್ರಿಯಲ್ ನೋಡ್ ವರೆಗೆ ವಿಸ್ತರಿಸಲಾಗುವುದು ಎಂದು, ಈ ಹಿಂದೆ ರಕ್ಷಣಾ ಸಚಿವರಾಗಿದ್ದ ಶ್ರೀಮತಿ ನಿರ್ಮಲಾ ಸೀತಾರಾಮನ್ ಒಮ್ಮೆ ಹೇಳಿಕೆ ನೀಡಿದ್ದರು. ಇತ್ತೀಚಿನ ಬೆಳವಣೆಗೆಯಂತೆ ಚೈನ್ನೈ-ಬೆಂಗಳೂರು-ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ನ್ನು ತಮಿಳುನಾಡು ಮತ್ತು ಕೇರಳ ಸರ್ಕಾರದ ಒತ್ತಾಯದ ಮೇರೆಗೆ ಈಗ ಕೊಯಮೊತ್ತೂರು ಮೂಲಕ ಕೇರಳದ ಕೊಚ್ಚಿವರೆಗೆ ವಿಸ್ತರಿಸಿದೆ.

 ಆದ್ದರಿಂದ ಕರ್ನಾಟಕ ರಾಜ್ಯ ಸರಕಾರವೂ ಕೇಂದ್ರದ ಮೇಲೆ ಒತ್ತಡ ತಂದು ಡಿಫೆನ್ಸ್ ಕಾರಿಡಾರ್‌ನ್ನು ಎರಡು ಕವಲಾಗಿ ಒಂದು ಭಾಗ ಶಿವಮೊಗ್ಗವರೆಗೆ ಮತ್ತೊಂದು ಭಾಗ ತುಮಕೂರು ದಾವಣಗೆರೆ , ಹುಬ್ಬಳ್ಳಿ ಮೂಲಕ ಬೆಳಗಾವಿವರೆಗೆ ವಿಸ್ತರಿಸಲು ಕೋರುವುದು ಅವಶ್ಯಕವಾಗಿದೆ.

ಈ ಎರಡು ಭಾಗದಲ್ಲಿರುವ ರಕ್ಷಣಾ ಸಚಿವಾಲಯ, ಇತರೆ ಡಿಫೆನ್ಸ್ ಚಟುವಟಿಕೆಗೆ ಕಾರಣವಾಗುವ  ಈ ಕೆಳಗೆ ಗುರುತಿಸಿರುವ ಸಂಸ್ಧೆಗಳು ಸಕ್ರಿಯವಾಗಿ/ ಪುನ:ಚೇತನವಾಗಿ  ರಾಜ್ಯದಲ್ಲಿ ಹೆಚ್ಚಿನ ಹೂಡಿಕೆಗೆ, ಉದ್ಯೋಗ ಸೃಷ್ಠಿಗೆ ಕಾರಣವಾಗುತ್ತೆ ಎಂದೂ ಸಹಾ ಕೇಂದ್ರದ ಗಮನಕ್ಕೆ ತರುವುದು ಮಹತ್ವದ ಕ್ರಮವಾಗುವುದು.

 ಡಿಫೆನ್ಸ್ ಕಾರಿಡಾರ್  ಕರ್ನಾಟಕದ ರಾಜ್ಯದ ಬಾಗಿಲ ಬಳಿ ತನಕ  ಇರುವುದನ್ನು ರಾಜ್ಯದ ಒಳಭಾಗಕ್ಕೆ ವಿಸ್ತರಿಸಿದರೆ ರಾಜ್ಯ ಸರ್ಕಾರದ ಎಕ್ಸ್‌ಪೋ 2021 ರ ಸಮಾವೇಶದಲ್ಲಿ ಹೆಚ್ಚಿನ ಹೂಡಿಕೆ ಆಕರ್ಷಣೆಗೆ ಪೂರಕವಾಗಲಿದೆ.

  1. ಬೆಂಗಳೂರು ಉತ್ತರಭಾಗದಲ್ಲಿ ರಾಜ್ಯಸರಕಾರ ಅಭಿವೃಧ್ಧಿ ಪಡಿಸುತ್ತಿರುವ ಏರೋಸ್ಪೇಸ್ ಪಾರ್ಕ್ ಮತ್ತು ಐಟಿಐಆರ್ ಪ್ರದೇಶದಲ್ಲಿ ಹೆಚ್ಚಿನ ಹೂಡಿಕೆ ಬರಲು ಕಾರಣ ವಾಗುತ್ತದೆ.
  2. ತುಮಕೂರು ಬಳಿ ಗುರುತಿಸಿರುವ ತುಮಕೂರು ಇಂಡಸ್ಟ್ರಿಯಲ್ ನೋಡ್ ಆವರಣದಲ್ಲಿ ಹೆಚ್ಚಿನ ಹೂಡಿಕೆಗೆ ಅವಕಾಶ ಮತ್ತು ರಕ್ಷಣಾಸಚಿವಾಲಯಕ್ಕೆ ಸೇರಿದ ಹೆಚ್.ಎ.ಎಲ್ ಪೂರ್ಣ ಪ್ರಮಾಣದಲ್ಲಿ  ಬಳಸಲು, ಅದೇ ರೀತಿ ತುಮಕೂರು ಇಸ್ರೋ ಸಂಸ್ಧೆಯಲ್ಲೂ ಚಟುವಟಿಕೆ ಪ್ರಾಂರಂಭವಾಗಲು ಕಾರಣವಾಗುತ್ತದೆ.
  3. ತರೀಕೆರೆಯ ಬಿಹೆಚ್‌ಎಎಲ್ ಅಂಗ ಸಂಸ್ಧೆಯಾದ ವಿಜ್ಞಾನ ಇಂಡಸ್ಟ್ರೀಸ್ ಮತ್ತು ಭದ್ರಾವತಿ ನಿಷ್ಕ್ರಿಯ ವಿಐಎಸ್‌ಎಲ್            ಸಂಸ್ಧೆಗೆ ಸೇರಿದ ಟೌನ್ ಶಿಪ್‌ಆವರಣ ಬಿಟ್ಟು ಉಳಿಕೆ ಜಾಗ ಸುಮಾರು ೫೩೨ ಎಕರೆ ಇದ್ದು ಬಳಸಲು ಅನುಕೂಲಕರವಾಗುತ್ತದೆ.
  4. ಚಳ್ಳಕೆರೆ ಬಳಿಯ ಡಿಆರ್ ಡಿಒ ಮತ್ತು ಭಾರತ ವಿಜ್ನಾನ ಸಂಸ್ಧೆ ವಿಸ್ತರಣೆ  ಸಂಸ್ಧೆಗಳಿಗೆ ಪೂರಕ ವಾಗುತ್ತದೆ
  5. ಅದೇ ರೀತಿ ಮುಂಬೈ-ಬೆಂಗಳೂರು ಎಕನಾಮಿಕ್ ಕಾರಿಡಾರ್ ಉದ್ದಲಗಕ್ಕೂ, ಈಗಾಗಲೇ ಗುರುತಿಸಿರುವ ಇಂಡಸ್ಟ್ರಿಯಲ್ ನೋಡ್‌ಗಳಾದ ಚಿತ್ರದುರ್ಗ-ದಾವಣಗೆರೆ ಮಧ್ಯಭಾಗದ ಭರಮಸಾಗರ, ಅದೇ ರೀತಿಯ ಹುಬ್ಬಳ್ಳಿ-ಧಾರವಾಡ ನಡುವೆ ಬರುವ ಧಾರವಾಡ್ ನೋಡ್, ಮತ್ತು ಬೆಳಗಾವಿ ಸಮೀಪದ ಎರೋಸ್ಪೇಸ್ ಪಾರ್ಕ್ ಅವರಣದಲ್ಲಿ ಹೆಚ್ಚಿನ ಹೂಡಿಕೆ ಬರಲು ಕಾರಣ ವಾಗುತ್ತದೆ.

ಈ ಬಗ್ಗೆ ಕೇಂದ್ರ ಸರಕಾರದ ಮಾನ್ಯ ರಕ್ಷಣಾ ಸಚಿವರು ಸನ್ಮಾನ್ಯ ಶ್ರಿ ರಾಜನಥ್‌ಸಿಂಗ್ ಅವರಿಗೆ ಜುಲೈ 2019 ಮಾನ್ಯ ತುಮಕೂರು ಸಂಸದರಾದ ಶ್ರೀ ಜಿಎಸ್ ಬಸವರಾಜ್‌ರವರು ಬರೆದ ಪತ್ರಕ್ಕೆ ಶ್ರೀ ರಾಜನಾಥ್‌ಸಿಂಗ್‌ರವರು ಉತ್ತರಿಸಿ ಈ ಬಗ್ಗೆ ಪರಿಶೀಲಿಸುವುದಾಗಿ ಆಗಸ್ಟ್ 2019 ರಲ್ಲಿ ತಿಳಿಸಿರುತ್ತಾರೆ.

 ಫೆಬ್ರವರಿ 2020 ರಲ್ಲಿ ಮಾನ್ಯ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಸನಾನ್ಯ ಬಿಎಸ್.ಯಡಿಯೂರಪ್ಪ, ಮಾನ್ಯ ಮುಖ್ಯಮಂತ್ರಿಗಳು ಇವರಿಗೆ ಪತ್ರ ಬರೆದು   ಕೇಂದ್ರ ಸರಕಾರದ ಮೇಲೆ ಒತ್ತಡ ತಂದು,  ಈಗ  ಚೈನ್ನೈ-ಬೆಂಗಳೂರು-ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್‌ನ್ನು ತಮಿಳುನಾಡು ಮತ್ತು ಕೇರಳ ಸರ್ಕಾರದ ಒತ್ತಾಯದ ಮೇರೆಗೆ ಈಗ ಕೊಯಮೊತ್ತೂರು ಮೂಲಕ ಕೇರಳದ ಕೊಚ್ಚಿವರೆಗೆ ವಿಸ್ತರಿಸಿಕೊಡಂತೆ, ಕರ್ನಾಟಕ ಸರ್ಕಾರವೂ ಸಹಾ ಕೇಂದ್ರದಮೇಲೆ ಒತ್ತಡತಂದು ರಾಜ್ಯದಲ್ಲಿ ಕೈಗಾರಿಕಾ ಹೂಡಿಕೆಗೆ ಪೂರಕವಾಗುವ ಡಿಫೆನ್ಸ್ ಕಾರಿಡಾರ್ ಕರ್ನಾಟಕದ ,ತುಮಕೂರು ಶಿವಮೊಗ್ಗ ಮತು ದಾವಣಗೆರೆ ,ಹುಬ್ಬಳ್ಳಿ ಮೂಲಕ ಬೆಳಗಾವಿಯ ವರೆಗೆ ವಿಸ್ತರಿಸಲು ಆಗ್ರಹಿಸಲು ಕೋರಿರುವುದು ಮಾಹಿತಿ ಲಭ್ಯವಾಗಿದೆ.                                                    

ಡಿಫೆನ್ಸ್ ಕಾರಿಡಾರ್   ಕರ್ನಾಟಕದ ರಾಜ್ಯದ ಬಾಗಿಲ ಬಳಿ ತನಕ ಇದೆ, ಅದು ಕರ್ನಾಟಕದ ಒಳಗೆ ವಿಸ್ತರಿಸಲು ರಾಜ್ಯ ಸರಕಾರ ಕೇಂದ್ರದ ಮೇಲೆ ಒತ್ತಡ ತರುತ್ತದೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ಗಮನಿಸ ಬೇಕಿದೆ.    

                                                                                           ಟಿ.ಆರ್.ರಘೋತ್ತಮರಾವ್