16th September 2024
Share

TUMAKURU:SHAKTHIPEETA FOUNDATION

 ಮಾಜಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರ ಕನಸಿನಂತೆ ಕರ್ನಾಟಕ ಹೆರಿಟೇಜ್ ಹಬ್ ಆರಂಭಿಸಬೇಕು ಎಂಬ ಪರಿಕಲ್ಪನೆಯಿಂದ ಆಗಿನ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್  ಅಧ್ಯಕ್ಷತೆಯಲ್ಲಿ ದಿನಾಂಕ:21.06.2016  ರಂದು ಕರ್ನಾಟಕ ಹೆರಿಟೇಜ್ ಹಬ್   ಎಂಬ ಸೊಸೈಟಿಯನ್ನು ಹುಟ್ಟು ಹಾಕಿದರು.

 ಯೋಜನೆಗೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮಾರನಗೆರೆ ಮತ್ತು ಉಜ್ಜನಕುಂಟೆ ಗ್ರಾಮಗಳಲ್ಲಿ 811 ಎಕರೆ 14 ಗುಂಟೆ ಜಮೀನು ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕರಿಯಾಲ ಗ್ರಾಮದಲ್ಲಿ  108 ಎಕರೆ 06 ಗುಂಟೆ ಜಮೀನು ಸೇರಿದಂತೆ 919 ಎಕರೆ 20 ಗುಂಟೆ ಜಮೀನು ನಿಗದಿ ಮಾಡಲಾಗಿತ್ತು.

ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಚಾಲನೆ ನೀಡಲು ಇತ್ತೀಚೆಗೆ ಶಿರಾ ನೂತನ ಶಾಸಕರಾದ ಶ್ರೀ ರಾಜೇಶ್ ಗೌಡರವರೊಂದಿಗೆ ಸಮಾಲೋಚನೆ ನಡೆಸಲಾಗಿತ್ತು. ಕಾಂಗ್ರೆಸ್ ಶಾಸಕರು ಆರಂಭಿಸಿದ ಯೋಜನೆ ಎಂದು ಕೊಂಕು ತೆಗೆಯದೆ, ಅತ್ಯತ್ತುಮವಾದ ಯೋಜನೆ ಎಂಬ ಚಿಂತನೆಯಿಂದ ನೂತನ ಸದಸ್ಯ ಕಾರ್ಯದರ್ಶಿ ನೇಮಕ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸುವ ಮೂಲಕ ಚಾಲನೆ ನೀಡಿದ್ದಾರೆ.

 ನಮ್ಮ ಜಿಲ್ಲೆಯಲ್ಲಿಯೇ ನಾನು ಬಹಳ ಚುನಾಯಿತ ಜನಪ್ರತಿನಿಧಿಗಳನ್ನು ನೋಡಿದ್ದೇನೆ, ಅವರು ಮಾಡಿದ ಯೋಜನೆಯನ್ನು ನಾನೇಕೆ ಮಾಡಬೇಕು, ಎಂದು ಬದಲಿಸಿ ಬೇರೆ ಯೋಜನೆ ಮಾಡಿರುವ ಮಹಾತ್ಮರುಗಳಿಗೆ ಇವರ ನಡೆತೆ ಜ್ಞಾನೋದಯವಾಗ ಬೇಕು.