12th September 2024
Share

TUMAKURU:SHAKTHIPEETA FOUNDATION

ಊರಿಗೊಂದು ಕೆರೆ- ಕೆರೆಗೆ ನದಿ ನೀರು’

ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020 ಇಂದಿಗೆ 19 ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-16 ದಿನಾಂಕ: 28.11.2020

 ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಬಗ್ಗೆ ಮಾನ್ಯ ಮುಖ್ಯ ಮಂತ್ರಿಗಳು ಆಯೋಜಿಸಿದ್ದ ರಾಜ್ಯ ಸಂಸದರ ಸಭೆಯಲ್ಲಿ ಭಾಗವಹಿಸಿದ್ಧ ಎಲ್ಲಾ ಸಂಸದರು ಒಕ್ಕೋರಲಿನ ಆಗ್ರಹ ಮಾಡುವ ಮೂಲಕ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ.

  ದಿನಾಂಕ:27.11.2020 ರಂದು ಕೃಷ್ಣಾದಲ್ಲಿ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಂಸದರ ಸಭೆಯಲ್ಲಿ ಈ ವಿಚಾರವನ್ನು ಕೇಂದ್ರ ಜಲಶಕ್ತಿ ಸಮಿತಿಯ ಸದಸ್ಯರು ಹಾಗೂ ತುಮಕೂರು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಪ್ರಸ್ತಾಪಿಸಿದ್ದಾರೆ.

 ಸಭೆಯಲ್ಲಿ ಭಾಗವಹಿಸಿದ್ಧ ಇನ್ನೊಬ್ಬ ಕೇಂದ್ರ ಜಲಶಕ್ತಿ ಸಮಿತಿಯ ಸದಸ್ಯರು ಹಾಗೂ ಹಾವೇರಿ ಸಂಸದರಾದ ಶ್ರೀ ಶಿವಕುಮಾರ್ ಉದಾಸಿಯವರು ಬೆಂಬಲಿಸಿ ಮಾತನಾಡಿ, ಕೇಂದ್ರದ ಜಲಶಕ್ತಿ ಸಭೆಯಲ್ಲಿ ಬಸವರಾಜ್‌ರವರು ಈ ಯೋಜನೆ ಬಗ್ಗೆ ಸುಮಾರು ಅರ್ಧ ಘಂಟೆಗೂ ಹೆಚ್ಚು ಕಾಲ ಮಾತನಾಡಿ, ಕೇಂದ್ರದ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರಸಿಂಗ್‌ರವರ ಗಮನ ಸೆಳೆಯುವಲ್ಲಿ ಸಫಲರಾಗಿದ್ದರೆ.

 ಈ ಯೋಜನೆಯ ಡಿಪಿಆರ್ ಮಾಡಲು ಅದೇಶ ನೀಡಿ ಎಂಬ ಸಲಹೆಗೆ, ಭಾಗವಹಿಸಿದ್ದ ಎಲ್ಲಾ ಸಂಸದರು ಇದೊಂದು ಒಳ್ಳೆಯ ಯೋಜನೆ ಶೀಘ್ರವಾಗಿ ಕ್ರಮಕೈಗೊಳ್ಳಲು ಮುಖ್ಯ ಮಂತ್ರಿಯವರಲ್ಲಿ ಒತ್ತಾಯಿಸಿದ್ದಾರೆ. ಮಾನ್ಯ ಮುಖ್ಯ ಮಂತ್ರಿಯವರು ಈ ಯೋಜನೆಗೆ ಎಷ್ಟು ಖರ್ಚಾಗ ಬಹುದು ಎಂದಾಗ  ಬಸವರಾಜ್‌ರವರು ಪ್ರತಿಕ್ರೀಯಿಸಿ ಮೂರು ಲಕ್ಷ ಕೋಟಿ ಯಾಗಲಿ ಬಿಡಿ, ಕೇಂದ್ರ ಸರ್ಕಾರ ಶೇ 90 ರಷ್ಟು ಹಣ ನೀಡಲಿದೆ, ರಾಜ್ಯ ಸರ್ಕಾರ ಶೇ 10 ರಷ್ಟು ನೀಡಿದರೆ ಸಾಕು ಎಂದಿದ್ದಾರೆ.

 ಸಭೆಯಲ್ಲಿ ಭಾಗವಹಿಸಿದ್ಧ ರಾಜ್ಯಸಭಾ ಸದಸ್ಯರಾದ ಶ್ರೀ ರಾಮಮೂರ್ತಿಯವರು ಬೆಂಗಳೂರಿಗೂ ನೀರಿನ ಅವಶ್ಯಕತೆಯಿದೆ, ಶೇ 10 ರಷ್ಟು ಹಣವನ್ನು ಬೃಹತ್ ಬೆಂಗಳೂರು ನಗರ ಪಾಲಿಕೆ ನೀಡಬಹುದು, ಡಿಪಿಆರ್ ಆಗಲಿ ಸಾರ್ ಎಂದು  ಸಹಮತ ವ್ಯಕ್ತಪಡಿಸಿದ್ದಾರೆ.

 ಬಸವರಾಜ್‌ರವರು ಕೇಂದ್ರ ಸರ್ಕಾರ ಭಧ್ರಾ ಮೇಲ್ದಂಡೆ ಯೋಜನೆ ಮತ್ತು ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆಯಿಂದ ಅನುದಾನ ನೀಡಲಿದೆ. ಭಧ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರದ ಹಣಕಾಸು ಇಲಾಖೆ ಅನುಮತಿ ನೀಡಬೇಕು, ಶೀಘ್ರವಾಗಿ ಕೊಡಿಸಿ ಹಾಗೂ ಎತ್ತಿನಹೊಳೆ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿ ಎಂದಿದ್ದಾರೆ.

 ಸಭೆಯಲ್ಲಿ ಭಾಗವಹಿಸಿದ್ದ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಶ್ರೀ ನಾರಾಯಣ ಸ್ವಾಮಿರವರು ಸಹ ಬೆಂಬಲಿಸಿ ಮಾತನಾಡಿ, ನಮ್ಮ ಭಧ್ರಾ ಮೇಲ್ದಂಡೆ ಯೋಜನೆ ರಾಜ್ಯದಲ್ಲಿ ಪ್ರಥಮ ನದಿ ಜೋಡಣೆಯಾಗಲಿದೆ ಎಂದಿದ್ದಾರೆ.

ಒಟ್ಟಿನಲ್ಲಿ  ಎಲ್ಲಾ ಸಂಸದರು ಬೆಂಬಲಿಸುವ ಮೂಲಕ ನದಿ ಜೋಡಣೆಗೆ ಬೃಹತ್ ಚಾಲನೆ ನೀಡಿದ್ದಾರೆ. ಎಂದರೆ ತಪ್ಪಾಗಲಾರದು.

ಹಿನ್ನೆಲೆ:– ಮಧ್ಯಾಹ್ನ ವಿಕಾಸ ಸೌಧದಲ್ಲಿ ಲೋಕೋಪಯೋಗಿ ಕಾರ್ಯದರ್ಶಿಯವರ ಕಚೇರಿಯಲ್ಲಿ ಕುಳಿತುಕೊಂಡಿದ್ದೇವು, ಈ ದಿನದ ಮಾನ್ಯ ಮುಖ್ಯ ಮಂತ್ರಿಯವರ ಸಭೆಯಲ್ಲಿ ಯಾವ ವಿಚಾರ ಕೇಳಬಹುದು ಎಂಬ ಚರ್ಚೆ ಆರಂಭವಾಯಿತು.

 ತಕ್ಷಣ ಜಿಲ್ಲೆಗೆ ಸೀಮೀತವಾಗದೇ ರಾಜ್ಯ ಮಟ್ಟದ ಯೋಜನೆ ಬಗ್ಗೆ ಗಮನ ಸೆಳೆಯಲು ಚಿಂತನೆ ನಡೆಸಿದ ಬಸವರಾಜ್‌ರವರು, ರಾಜ್ಯದ ನದಿ ಜೋಡಣೆ, ಕೇಂದ್ರದ ನದಿ ಜೋಡಣೆ, ರಾಜ್ಯದ ತುಮಕೂರಿನ, ಬೆಂಗಳೂರಿನ, ಮಂಗಳೂರಿನ, ಶಿವಮೊಗ್ಗದ, ಕೊಪ್ಪಳದ, ಬೆಳಗಾವಿಯ ರಿಂಗ್ ರಸ್ತೆಗಳಿಗೆ ನಿಯಮದ ಪ್ರಕಾರ ಶೇ ೫೦ ರಷ್ಟು ಭೂ ಸ್ವಾಧಿನದ ಹಣವನ್ನು ರಾಜ್ಯ ಸರ್ಕಾರದ ಅನುಮತಿ ನೀಡುವ ಬಗ್ಗೆ ಚರ್ಚಿಸಲು ನಿರ್ಧಾರಕ್ಕೆ ಬರಲಾಯಿತು.

ತಕ್ಷಣವೇ ಕಾರ್ಯದರ್ಶಿಯವರಾದ ಶ್ರೀ ಗುರುಪ್ರಸಾದ್‌ರವರು ಅವರ ಕಚೇರಿಯಲ್ಲಿ ಬಿಳಿ ಹಾಳೆಯಲ್ಲಿ ಟೈಪ್ ಮಾಡಿಸಿ ನೀಡಿದ ಯೋಜನೆಗಳ ಪಟ್ಟಿಗೆ ಮಾನ್ಯ ಮುಖ್ಯ ಮಂತ್ರಿಯವರು ಜೈ ಎಂದಿದ್ದಾರೆ. ಜೊತೆಗೆ ಬಸವರಾಜ್‌ರವರು   ತುಮಕೂರಿನಲ್ಲಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಮಾಡುವ ಬಗ್ಗೆಯೂ ಮಾತನಾಡಿದ್ದಾರೆ.

‘ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಸದರ ಸಭೆಯ ನಿರ್ಣಯಕ್ಕೆ ಮಹತ್ತರವಾದ ಗೌರವ ಇರುತ್ತದೆ. ಸಮಯ ಪ್ರಜ್ಞೆ ಒಳ್ಳೆಯ ಕೆಲಸ ಮಾಡಿಸಿದೆ. ಬಸವರಾಜ್‌ರವರು ಬಹಳ ಖುಷಿಯಿಂದ ಹೇಳಿದ ಮಾತು ಇದು,