19th May 2024
Share
ಚಿತ್ರದಲ್ಲಿ ಶ್ರೀ ಪ್ರಮೀತ್, ಶ್ರೀ ಶ್ರೀನಿವಾಸ್, ಶ್ರೀ ಶಶಿ ಮತ್ತು ಕುಂದರನಹಳ್ಳಿ ರಮೇಶ್ ಇದ್ದಾರೆ.

TUMAKURU:SHAKTHIPEETA FOUNDATION

ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಡ್ಯಾಂ ಮಧ್ಯ ಕರ್ನಾಟಕದ ವಾಟರ್ ಬ್ಯಾಂಕ್, ಈ ಪ್ರದೇಶವನ್ನು ಅಗ್ರಿ ಟೂರಿಸಂ ಆಗಿ ಪರಿವರ್ತಿಸಿ, ಅಂತರ ರಾಷ್ಟ್ರೀಯ ಮೆರಗು ಬರುವಂತೆ ಮಾಡಲು ಭಧ್ರಾ ಮೇಲ್ದಂಡೆ ಯೋಜನೆಯ ಇಇ ರವರಾದ ಶ್ರೀ ಪ್ರಮೀತ್‌ರವರೊಂದಿಗೆ ಸಮಾಲೋಚನೆ ನಡೆಸಲಾಯಿತು.

ದಿನಾಂಕ:25.11.2020 ರಂದು ಅವರ ಕಚೇರಿಯಲ್ಲಿ ಚರ್ಚೆ ಮಾಡುತ್ತಿರುವಾಗ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಪೂರ್ಣಿಮಾರವರ ಪತಿಯವರು ಮತ್ತು ಸಮಾಜ ಚಿಂತಕರಾದ ಶ್ರೀ ಶ್ರೀನಿವಾಸ್‌ರವರು ಆಗಮಿಸಿದರು.

 ವಾಣಿವಿಲಾಸ್ ಡ್ಯಾಂ ಸುತ್ತ – ಮುತ್ತ, ವೇದಾವತಿ ನದಿ, ವಾಣಿವಿಲಾಸ ಎಡದಂಡೆ ಕಾಲುವೆ ಮತ್ತು ವಾಣಿವಿಲಾಸ ಬಲದಂಡೆ ಕಾಲುವೆಯ ಅಕ್ಕ-ಪಕ್ಕ ನಿಗಮದ ನೂರಾರು ಎಕರೆ ಜಮೀನು ಇದೆ. ಕೆಲವು ಕಡೆ ಪ್ರವಾಸಿ ಮಂದಿರಗಳು ಇವೆಯಂತೆ. ಈ ಜಮೀನು ಗುರುತಿಸಿ ಅಗ್ರಿ ಟೂರಿಸಂ ಆಗಿ ಪರಿವರ್ತಿಸಿ, ವಿಶ್ವದ ಗಮನ ಸೆಳೆಯುವ ಬಗ್ಗೆ ಚಿಂತನೆ ಆರಂಭವಾಗಿದೆ.

 ಕಾಲುವೆಯ ಎರಡು ಬದಿ ಗ್ರೀನ್ ಕಾರಿಡಾರ್ ಆಗಿ ಮಾರ್ಪಾಡು ಮಾಡಿ, ವಿಶ್ವದ ಎಲ್ಲಾ ಜಾತಿಯ ಮರಗಿಡಗಳನ್ನು ಹಾಕುವ ಮೂಲಕ ಕಾಲುವೆಗೆ ಹಸಿರು ಮೆರಗು ನೀಡಲು ಯೋಚನೆ ನಡೆದಿದೆ. ಅಷ್ಟೆ ಅಲ್ಲದೆ ಹಿರಿಯೂರು ತಾಲ್ಲೂಕಿನಲ್ಲಿ ಸುಮಾರು 15೦೦೦ ಎಕರೆ ಸರ್ಕಾರಿ ಜಮೀನು ಇದೆಯಂತೆ, ಎಲ್ಲವನ್ನು ಶ್ರೀನಿವಾಸ್‌ರವರು ಪತ್ತೆ ಮಾಡಿ ಪಟ್ಟಿ ಮಾಡಿದ್ದಾರೆ.

  ವಾಟರ್ ಯೂನಿವರ್ಸಿಟಿ ಮಾಡಲು ಚಿಂತನೆ ಆರಂಭಿಸಿ, ಸರ್ಕಾರದ ಹಂತದಲ್ಲಿ ನೆನೆಗುದಿಗೆ ಬಿದ್ದಿದೆ. ಹಿರಿಯೂರು ನಗರದ ಮಧ್ಯೆ ಭಾಗ ಹರಿಯುವ ಕಾಲುವೆಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಿದರೆ, ಸುಮಾರು 4 ಕೀಮೀ ನೀರು ನಿಲ್ಲುವ ಮೂಲಕ ಹಿರಿಯೂರು ವಾತವಾರಣವೇ ಬದಲಾಗಲಿದೆ.

ವಾಣಿ ವಿಲಾಸ ಡ್ಯಾಂಗೆ ಭಧ್ರಾ ಮೇಲ್ದಂಡೆ ನೀರು, ಎತ್ತಿನಹೊಳೆ ನೀರು, ಭೇಡ್ತಿ- ಅಘಿನಾಶಿನಿ ನೀರು, ಶರಾವತಿ ನೀರು ಹೀಗೆ ಹಲವಾರು ನದಿಗಳ ನೀರು ತುಂಬಿಸುವ ಚಿಂತನೆ ಸರ್ಕಾರದ ಹಂತದಲ್ಲಿದೆ, ಸುಮಾರು 30  ಟಿಎಂಸಿ ಅಡಿ ನೀರು ಸಾಮಾರ್ಥ್ಯದ ಈ ಡ್ಯಾಂಗೆ ಶುಕ್ರ ದೆಸೆ ಬರಲಿದೆ.

ಈ ಹಿನ್ನಲೆಯಲ್ಲಿ ಹಾಗೂ ಬೆಂಗಳೂರು-ಮುಂಬೈ ಎಕಾನಾಮಿಕ್ ಕಾರಿಡಾರ್‌ನಲ್ಲಿ ಬರುವ ಈ ಯೋಜನೆಯನ್ನು ಹೇಗೆ ಅಭಿವೃದ್ಧಿ ಪಡಿಸಬಹುದು ಎಂಬ ಪರಿಕಲ್ಪನೆಗೆ ಯಾವೂ ಸಲಹೆ ನೀಡಬಹುದಾಗಿದೆ.