22nd December 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯು ಶ್ರೀ ಜಿ.ಎಸ್.ಬಸವರಾಜ್‌ರವರು ಸಂಸದರಾದ ನಂತರ 5 ಸಭೆಗಳನ್ನು ಮಾಡಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ತುಮಕೂರು ಜಿಐಎಸ್ ಲೋಕಾರ್ಪಣೆ’ ಮಾಡಲು ಮತ್ತೊಂದು 6 ನೇ ಸಭೆಗೆ ಅಜೆಂಡಾ ಸಿದ್ಧವಾಗುತ್ತಿದೆ.

ಜಿಲ್ಲಾ ಪಂಚಾಯತ್ ಪಿಡಿಯವರಾದ ಶ್ರೀ ಮೋಹನ್‌ಕುಮಾರ್‌ರವರು ಮತ್ತು ಅವರ ತಂಡ 5 ನೇ ಸಭೆ ನಡವಳಿಕೆ ಮತ್ತು 6 ನೇ ಸಭೆ ಅಜೆಂಡಾದ ಸಂಶೋಧನೆ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನೊಂದು ಭಾಷೆಯಲ್ಲಿ ಹೇಳಬೇಕೆಂದರೆ, ದಿಶಾ ಸಭೆ ನಡವಳಕೆ ಟೆಂಪ್ಲೇಟ್ ಮಾಡುತ್ತಿದ್ದಾರೆ.

 ತುಮಕೂರು ಜಿಲ್ಲಾ ದಿಶಾ ಸಮಿತಿಯ ಸಭೆಯಲ್ಲಿ, ಈ ಕೆಳಕಂಡ 9 ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲು ಚಿಂತನೆ ಆರಂಭವಾಗಿದೆ.

1.ಪಾಲನಾ ವರದಿಗಳ ಬಗ್ಗೆ ಚರ್ಚೆ. 

ತುಮಕೂರು ಜಿಲ್ಲೆಗೆ ಕೇಂದ್ರ ಸರ್ಕಾರದಿಂದ, ಪ್ರತಿಯೊಂದು ಇಲಾಖೆಯಡಿ ಮಂಜೂರಾಗಿರುವ ಅನುದಾನ ಬಿಡುಗಡೆಯಾಗಿರುವ ಅನುದಾನ,  ಖರ್ಚಾಗಿರುವ ಅನುದಾನ ಮತ್ತು ಬಿಡುಗಡೆಯಾಗ ಬೇಕಾಗಿರುವ ಅನುದಾನ ಇಲಾಖಾವಾರು ಇಂಡೆಕ್ಸ್‌ನಲ್ಲಿ ಇರಬೇಕು. ಒಂದೇರಡು ಪುಟದಲ್ಲಿ ಸಮಗ್ರ ಯೋಜನೆಗಳ ಕಣಜವಾಗಿರಬೇಕು.

2. ಕೇಂದ್ರ ಸರ್ಕಾರದಿಂದ ವಿವಿಧ ಇಲಾಖೆಗಳ ಯೋಜನೆಗಳ ನಡೆಸಿದ ಪತ್ರ ವ್ಯವಹಾರಗಳು.

ಪ್ರತಿಯೊಂದು ಇಲಾಖೆಗೆ ಬಂದಿರುವ ಪತ್ರ ಅಥವಾ ಬರೆದಿರುವ ಪತ್ರದ ಮಾಹಿತಿ ದಿಶಾ ಸದಸ್ಯರಿಗೆ ನೀಡಬೇಕು. ಇದರಿಂದ ಯೋಜನೆಯ ಸ್ಥಿತಿ-ಗತಿ ತಿಳಿಯಲಿದೆ.

3.ದಿಶಾ ಮಾರ್ಗಸೂಚಿಯಂತೆ ಅಜೆಂಡಾವಾರು ಚರ್ಚೆ.

ದಿಶಾ ಮಾರ್ಗಸೂಚಿಯ 42 ಯೋಜನೆಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಬೇಕು.

4. ಕೇಂದ್ರ ಸರ್ಕಾರ ದಿಶಾ ಮಾರ್ಗ ಸೂಚಿಯ ನಂತರ ಘೋಷಣೆ ಮಾಡಿರುವ ಹೊಸ ಯೋಜನೆಗಳು.

ಕೇಂದ್ರ ಸರ್ಕಾರ ದಿನಕ್ಕೊಂದು ಯೋಜನೆ ರೂಪಿಸುತ್ತಿದೆ, ತುಮಕೂರು ಜಿಲ್ಲೆಗೆ ಬಂದಿರುವ ಎಲ್ಲಾ ಯೋಜನೆಗಳು ಇಲ್ಲಿ ಚರ್ಚೆಯಾಗಬೇಕು.

5.ತುಮಕೂರು ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದಿಂದ ನಡೆಯುತ್ತಿರುವ ಇತರೆ ಯೋಜನೆಗಳು.

ಇಸ್ರೋ, ಹೆಚ್.ಎ.ಎಲ್. ಸೋಲಾರ್ ಪಾರ್ಕ್, ಮನೆ-ಮನೆಗೆ ಗ್ಯಾಸ್, ಪವರ್ ಗ್ರಿಡ್ ಇತ್ಯಾದಿ ಬೃಹತ್ ಯೋಜನೆಗಳ ಬಗ್ಗೆ ಚರ್ಚೆಯಾಗಬೇಕು.

6. ತುಮಕೂರು ಜಿಐಎಸ್

 ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಜಿಐಎಸ್ ಲೇಯರ್ ದಿಶಾ ಸಮಿತಿಯಡಿಯಲ್ಲಿ ಬರಲಿದೆ, ಯಾವ ಇಲಾಖೆ ಈವರೆಗೂ ಎಷ್ಟು ಲೇಯರ್‌ಗೆ ಮಾಹಿತಿ ಅಫ್‌ಲೋಡ್ ಮಾಡಿದೆ. ಇನ್ನೂ ಎಷ್ಟು ಲೇಯರ್‌ಗೆ ಮಾಹಿತಿ ಅಫ್‌ಲೋಡ್ ಮಾಡಬೇಕಿದೆ, ಜೊತೆಗೆ ಇನ್ನೂ ಯಾವ ಜಿಐಎಸ್ ಲೇಯರ್ ಅಗತ್ಯವಿದೆ ಎಂಬ ಬಗ್ಗೆ ಪ್ರತಿ ಇಲಾಖಾವಾರು ಚರ್ಚೆಯಾಬೇಕು. ಜಿಲ್ಲೆಯ ಪ್ರತಿ ಗ್ರಾಮದ ತಾಜಾ ಡೇಟಾ ಇಲ್ಲಿ ದೊರೆಯಲಿದೆ. ಯಾರ ಬೇಕಾದರೂ ನೋಡಬಹುದು.

7.ತುಮಕೂರು ಜಿಲ್ಲೆಯ ಹೊಸ ಪ್ರಸ್ತಾವನೆಗಳು.

  ಕೇಂದ್ರ ಸರ್ಕಾರ ಘೋಶಿಸಿರುವ 2022 ರೊಳಗೆ ರೈತರ ಆದಾಯ ದುಪ್ಪಟ್ಟು ಯೋಜನೆಗೆ ಪೂರಕವಾಗಿ,  ರೈತರಿಗೆ ನೀರು ಮತ್ತು ಅವರ ಬೆಳೆಗಳಿಗೆ ಮೌಲ್ಯವರ್ಧಿತ ಬೆಲೆಗಾಗಿ, ತುಮಕೂರು ಜಿಲ್ಲಾ ದಿಶಾ ಸಮಿತಿ,  ಬಹಳ ಮುಖ್ಯವಾದ ಎರಡು ಯೋಜನೆಗಳನ್ನು ಕೈಗೆತ್ತಿಕೊಂಡಿದೆ.  ಅವುಗಳೆಂದರೆ ತುಮಕೂರು ಜಿಲ್ಲಾ ಸಮಗ್ರ ನೀರಾವರಿ ಮತ್ತು ಇನ್ವೆಸ್ಟ್ ತುಮಕೂರು’ ಈ ಎರಡು ಯೋಜನೆಗಳಡಿ ಬರುವ ಎಲ್ಲಾ ಯೋಜನೆಗಳ ಬಗ್ಗೆ ವಿಶೇಷ ಚರ್ಚೆಯಾಗಬೇಕು.

8. ಸದಸ್ಯರಿಂದ ಬಂದ ಪತ್ರಗಳ ಬಗ್ಗೆ ಚರ್ಚೆ.

ಯಾವುದೇ ಒಬ್ಬ ಸದಸ್ಯರು ನೀಡುವ ಪತ್ರದ ಅಂಶಗಳಿಗೆ ಸಭೆಯಲ್ಲಿ ಚರ್ಚೆ ಮಾಡಬೇಕು.

9.ಅಧ್ಯಕ್ಷರ ಅಪ್ಪಣೆ ಮೇರೆಗೆ ಬರುವ ಇತರೆ ವಿಚಾರಗಳು.

ಇದೂ ಮಾಮೂಲಿ.

ದಿನಾಂಕ:21.11.2020 ರಲ್ಲಿ  ಈ ಪ್ರಕಾರ ಚರ್ಚಿಸಲು, ನಾನೇ ಪತ್ರ ನೀಡಿದ್ದೇನೆ, ಸಭೆಯಲ್ಲಿ ಚರ್ಚೆಯಾಗಿ ಎಲ್ಲರೂ ಒಪ್ಪಿದ್ದಾರೆ. ಇದೇ ಪ್ರಕಾರ ಸಭೆ ನಡವಳಿಕೆಯನ್ನು ಮಾಡಲು ಚರ್ಚೆ ಆರಂಭವಾಗಿದೆ. ಆದರೇ 5 ನೇ ಸಭೆಯಲ್ಲಿ ಚರ್ಚಿಸಿದ ಅಂಶಗಳಿಗೆ ಸಭೆ ನಡವಳಿಕೆ ಮಾಡಿ, ಮುಂದಿನ ಸಭೆಗೆ ಯಾವ ರೀತಿ ಅಜೆಂಡಾ ಇರಲಿದೆ, ಪ್ರತಿಯೊಂದು ಇಲಾಖೆಯೂ ಯಾವ ರೀತಿ ಮಾಹಿತಿ ನೀಡಬೇಕು ಎಂಬ ಬಗ್ಗೆ ಮಾಹಿತಿ ನೀಡಿ, ಮುಂದಿನ ಸಭೆಯಿಂದ ಈ ಪ್ರಕಾರ ಸಭೆ ನಡೆಸೋಣ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.

ಪಿಡಿ, ಶ್ರೀ ಮೋಹನ್ ಕುಮಾರ್‌ರವರು ಮತ್ತು ಅವರ ತಂಡ  ದಿನಾಂಕ:22.11.2020 ರಿಂದ ಈವರೆಗೂ ಅಂದರೆ, 30.11.2020 ರವರೆಗೂ ನಿರಂತರವಾಗಿ ಸಭೆ ನಡವಳಿಕೆ ಮತ್ತು ಮುಂದಿನ ಸಭೆ ಅಜೆಂಡಾ ಹೇಗಿರಬೇಕು ಎಂಬ ಬಗ್ಗೆ  ಸಿದ್ಧಪಡಿಸುತ್ತಿದ್ದಾರೆ. ಅವರಿಗಂತೂ ತಲೆ ಕೆಟ್ಟುಹೋಗಿದೆ ಎಂದು ನನಗನಿಸುತ್ತಿದೆ.

‘ನನ್ನ ಪ್ರಕಾರ ಮುಂದಿನ ಸಭೆಯಿಂದ ತುಮಕೂರು ಜಿಲ್ಲಾ ದಿಶಾ ಸಮಿತಿ ನಡವಳಿಕೆ, ದೇಶದ ಎಲ್ಲಾ ದಿಶಾ ಸಮಿತಿಗಳಿಗೂ ಮಾದರಿಯಾಗಲಿದೆ. ಇಲ್ಲಿಯವರೆಗೂ ಯಾವುದೇ ದಿಶಾ ಸಮಿತಿ ಪ್ರಕಾರ ಸಭೆ ನಡೆಸಿಲ್ಲ, ಇನ್ನೂ ಮುಂದೆ ದೇಶದ ಎಲ್ಲಾ ಜಿಲ್ಲೆಗಳ ದಿಶಾ ಸಮಿತಿಗಳು ಇದೇ ರೀತಿ ನಡೆಯಬೇಕಾಗುತ್ತದೆ’

ನಮ್ಮ ಜಿಲ್ಲೆಯ ಅಧಿಕಾರಿಗಳು ದೇಶಕ್ಕೆ ಮಾದರಿಯಾಗಲಿದ್ದಾರೆ.

ಕಾದು ನೋಡೋಣ?