4th January 2025
Share

TUMAKURU:SHAKTHIPEETA FOUNDATION

ಒಬ್ಬ ಅಧಿಕಾರಿ ನನಗೆ ಹೇಳುತ್ತಿದ್ದರು ಸಾರ್ ಇದೂವರೆಗೂ ದಿಶಾ ಸಮಿತಿ ಸಭೆಗಳು ನಮ್ಮ ರಾಜ್ಯದಲ್ಲಿಯೇ ಕಾಟಚಾರಕ್ಕೆ ನಡೆಯುತ್ತಿದ್ದವು. ನಾನು 8  ಜಿಲ್ಲೆಗಳ ದಿಶಾ ಸಮಿತಿ ನೋಡಿದ್ದೇನೆ. ಆದರೇ ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆ ವಿಶಿಷ್ಠವಾಗಿ ನಡೆಯುತ್ತಿದೆ. ನಿಜಕ್ಕೂ ಅರ್ಥಪೂರ್ಣವಾಗಿದೆ. ಇದೊಂದು ಅಭಿವೃದ್ಧಿ ಮಾಹಿತಿಗಳ ಕಣಜವಾಗಲಿದೆ.

ಇನ್ನೊಬ್ಬ ಅಧಿಕಾರಿ ಹೇಳಿದ ಮಾತು ಒಂದು ಕೆಡಿಪಿ ಸಭೆ ಅಥವಾ ಜಿಪಂ ಸಭೆ ಎಂದರೆ, ಕೇವಲ ಕೆಲವೇ ಇಲಾಖೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದವು, ಅನುಮೋದನೆಗೆ ಎಷ್ಟು ಬೇಕೋ ಅಷ್ಟು ಚರ್ಚೆಯಾಗುತ್ತಿತ್ತು. ಇಲಾಖೆಯ ಅಧಿಕಾರಿಗಳನ್ನು ಬೈಯ್ಯುವುದೇ ಸಭೆ ಅಜೆಂಡಾ ಎನ್ನುವ ಹಾಗೆ ಕೆಲವು ಸಭೆಗಳು ನಡೆಯುತ್ತಿವೆ.  ಸಾರ್ ನಮಗೆ ಈಗ ಅನ್ನಿಸುವುದು ಇಷ್ಟೊಂದು ಇಲಾಖೆಗಳು, ಇಷ್ಟೊಂದು ಯೋಜನೆಗಳು, ನಮಗೂ ಒಳ್ಳೆಯ ಅನುಭವವಾಗಲಿದೆ.

 ಇನ್ನೊಬ್ಬ ಅಧಿಕಾರಿ ಮಾತು, ಸಾರ್ ನೀವೂ ಬೈಕಣಲ್ಲ ಅಂದರೆ ನಾನು ಒಂದು ಮಾತು ಹೇಳುತ್ತಿನಿ, ಹೇಳಿ ಸಾರ್ ಅಂದಾಗ ನೀವೂ ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿರ ಬಾರದಿತ್ತು.   ನಮ್ಮನ್ನು ಹಾಕಿಕೊಂಡು ಜಿಐಎಸ್ ಅಂತಾ ಅರೆಯುತ್ತಾ ಇದ್ದೀರಿ, ನೀರೀಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಗಿದೆ. ನೀವೂ ಏನಿದ್ದರೂ ಪ್ಲಾನಿಂಗ್ ಕಮಿಷನ್‌ನಲ್ಲಿದ್ದರೆ, ನಮ್ಮ ರಾಜ್ಯಕ್ಕೆ ಅನೂಕೂಲವಾಗುತ್ತದೆ. ಅದರೂ ನಮಗೂ ಈಗಿಗ ಖುಷಿ ಅನ್ನಿಸುತ್ತಿದೆ. ಒಳ್ಳೆಯ ದಾರಿಯಲ್ಲಿ ದಿಶಾ ಸಾಗುತ್ತಿದೆ.

  ಅಧಿಕಾರಿ ಮಿತ್ರರೇ,  ಇದು ಬದಲಾವಣೆ ಸಮಯ. ಡಿಜಿಟಲ್ ಯುಗ, ಫಲಾನುಭವಿಗಳಿಗೆ ನೇರವಾಗಿ ಹಣ ತಲುಪುವುದು ಮಾತ್ರ ಯಶಸ್ವಿಯಾಗಿದೆ. ಜಿಐಎಸ್ ಕಾಟಾಚಾರವಾಗಿದೆ. ನನಗೂ ಗೊತ್ತು, ನಿಮಗೂ ಗೊತ್ತು, ಜಿಐಎಸ್ ಲೇಯರ್ ಏಕೆ ವಿಳಂಭ ಅಗುತ್ತಿದೆ ಎಂದು.

  ಬಾಯಲ್ಲಿ ಹೇಳಿದಷ್ಟು ಸುಲಭ ಅಲ್ಲ, ಚಿತ್ರದಲ್ಲಿ ಮಾತ್ರ ಜಿಐಎಸ್, ಭೂಮಿಗೆ ಇಳಿಸಿ ಅಂದರೆ ಎಲ್ಲಾ ಬರೀ ತಪ್ಪು’. ಡ್ರೋಣ್ ಸರ್ವೇ, ಡೇಟಾ ಅನಾಲಿಸಿಸ್ ಮಾಡುವರು ಯಾರು? ಇದೊಂದು ನಾಜೂಕು. ಯಕ್ಷ ಪ್ರಶ್ನೆಯಾಗಿದೆ.  ಆದರೂ ನಮ್ಮ ಗುರಿ ದೇಶದಲ್ಲಿಯೇ ನಮ್ಮ ತುಮಕೂರು ಡೇಟಾ ಜಿಲ್ಲೆಯಾಗಿ ಘೋಷಣೆಯಾಗಲೇಬೇಕು.

 ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರಕಲೇಬೇಕು. ಸಂಸದರು ಫಿಸಿಕಲ್ ಆಗಿ ಹಳ್ಳಿಗಳಿಗೆ ಭೇಟಿ ನೀಡಬೇಕು ಎಂಬುದು ಜನರ ಅನಿಸಿಕೆ. ನಮ್ಮ ಅನಿಸಿಕೆ ಡಿಜಿಟಲ್ ಆಗಿ ಭೇಟಿ ನೀಡಬೇಕಾಗಿದೆ. ಪ್ರತಿಯೊಂದು ಗ್ರಾಮದ ಸಮಸ್ಯೆಗೆ ಕುಳಿತಲ್ಲೇ ಪರಿಹಾರ ಹುಡುಕುವ ಕೆಲಸ ಆಗಬೇಕಿದೆ. ಇದೇ ತುಮಕೂರು ಜಿಐಎಸ್ ಪ್ರಮುಖ ಉದ್ದೇಶ. ಸ್ವಲ್ಪ ತಡವಾಗಿಯಾದರೂ ಎಲ್ಲರಿಗೂ ಅರ್ಥವಾಗಲಿದೆ.

ಆರಂಭದಲ್ಲಿ ಇದೆನಪ್ಪಾ ಎಂಬ ಭಾವನೆ ಸಹಜ, ಈಗೀಗ ಎಲ್ಲರಿಗೂ ಅರ್ಥವಾಗುತ್ತಿದೆ, ಈ ಎಂಪಿ ಸುಮ್ಮನೆ ಬಿಡಲ್ಲ, ಸ್ವಲ್ಪ ಕಷ್ಟ ಆದರೂ ಪರವಾಗಿಲ್ಲ ನಿಯಮ ಪ್ರಕಾರ ಮಾಡಿಬಿಡೋಣ ಎಂಬ ಅನಿಸಿಕೆ ಅನೇಕ ಇಲಾಖೆಯ ಅಧಿಕಾರಿಗಳಲ್ಲಿ ಬರಲಾರಂಭಿಸಿದೆ. ನಿಜಕ್ಕೂ ಇದು ಒಳ್ಳೆಯ ಬೆಳವಣಿಗೆ.