9th October 2024
Share
NIRANJAN, BASAVARAJ, BASAVANNA, & RAJESH
ಪೈಪ್ ಹಾಕುವ ಕಾಮಗಾರಿ.

TUMAKURU:SHAKTHIPEETA FOUNDATION

ಯಾವುದೇ ಒಂದು ಒಳ್ಳೆಯ ಕೆಲಸವನ್ನು ಮಾಡಲು, ಯುಗಾದಿ ಹಬ್ಬದ ದಿವಸ ತುಂಬಾ ಒಳ್ಳೆಯ ದಿವಸವಂತೆ. ಒಳ್ಳೆಯ ಗಳಿಗೆ, ಒಳ್ಳೆಯ ಮೂಹೂರ್ತ ಹೀಗೆ ತಲೆಕಡಿಸಿಕೊಳ್ಳುವುದು ಬೇಡ ಎಂದು ಜ್ಯೋತಿಷ್ಯದಾರರೊಬ್ಬರೂ ತಿಳಿಸಿದ್ದರು.

ಯಾವುದೇ ಅಬ್ಬರ, ಆಡಂಬರವಿಲ್ಲದೆ 2018 ರ ಯುಗಾದಿ ಹಬ್ಬದ ದಿವಸ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕ್ಯಾಂಪಸ್‌ನ ಪ್ರಥಮ ಭೂಮಿ ಪೂಜೆಯನ್ನು ಅತ್ಯಂತ ಭಕ್ತಿಯಿಂದ ಮಾಡಲಾಯಿತು.

 ದಿನಾಂಕ:10.11.2017 ರಂದು ಶ್ರೀ ನರೇಂದ್ರಮೋದಿಯವರ ಕನಸಿನ ಕೇಂದ್ರ ಸರ್ಕಾರದ ನ್ಯೂ ಇಂಡಿಯಾ 2022 ಮತ್ತು ಆಗಿನ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಕನಸಿನ ರಾಜ್ಯ ಸರ್ಕಾರದ ನವ ಕರ್ನಾಟಕ ವಿಷನ್ 2025 ಎರಡನ್ನು ಒಗ್ಗೂಡಿಸಿ ’ಜನತೆಯ ವಿಷನ್ ಡಾಕ್ಯುಮೆಂಟ್- 2025’ ನ್ನು ಬಿಡುಗಡೆ ಮಾಡಿ ದೇಶದ ಅಭಿವೃದ್ಧಿಯಲ್ಲಿ ಸಾರ್ವಜನಿಕ ಸಹಭಾಗಿತ್ವ ಜವಾಬ್ಧಾರಿ-ಹೊಣೆಗಾರಿಕೆ ಹಂಚಿಕೆಯ ಪ್ರತಿಪಾದನೆ ಮಾಡಲಾಗಿತ್ತು.

 ಅಂದು ತುಮಕೂರು ವಿಶ್ವವಿದ್ಯಾನಿಲಯ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಹಭಾಗಿತ್ವದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಮುಖಾಂತರ ಈ ಎಲ್ಲಾ ಯೋಜನೆಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿತ್ತು. ಅಂದಿನ ವಿಸಿಯವರಾದ ಶ್ರೀ ರಾಜಾಸಾಬ್‌ರವರು ಸಿಂಡಿಕೇಟ್ ಮತ್ತು ಕೌನ್ಸಿಲ್ ಎರಡು ಸಭೆಗಳ ಅನುಮತಿ ನೀಡಿದ್ದರು.

  ಅಭಿವೃದ್ಧಿ ರೆವೂಲ್ಯೂಷನ್ ಫೋರಂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಫೋರಂ ಪಾಲಿನ ಹಣವಾಗಿ ರೂ 50 ಲಕ್ಷವನ್ನು ವಿಶ್ವವಿದ್ಯಾನಿಲಯಕ್ಕೆ ಪಾವತಿಸಲು ಮನವಿ ಮಾಡಿದಾಗ  ಅಂದಿನ ಮುಖ್ಯಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ಜಲಸಂಪನ್ಮೂಲ ಸಚಿವರಾದ ಶ್ರೀ ಎಂ.ಬಿ.ಪಾಟೀಲ್‌ರವರು,  ಜಲಸಂಪನ್ಮೂಲ ಪ್ರಧಾನಕಾರ್ಯದರ್ಶಿಯವರಾದ  ಶ್ರೀ ರಾಕೇಶ್‌ಸಿಂಗ್‌ರವರು, ಮುಖ್ಯ ಮಂತ್ರಿಯವರ ಪ್ರಧಾನ ಕಾರ್ಯದರ್ಶಿರವರಾದ ಶ್ರೀ ಎಲ್.ಕೆ.ಅತೀಕ್‌ರವರು, ಜಲಸಂಪನ್ಮೂಲ ಸಚಿವರ ಆಪ್ತಕಾರ್ಯದರ್ಶಿರವರಾದ ಶ್ರೀ ಪಾಟೀಲ್‌ರವರು, ಜಲಸಂಪನ್ಮೂಲ ಕಾರ್ಯದರ್ಶಿಯವರಾದ ಶ್ರೀ ಗುರುಪಾದಸ್ವಾಮಿರವರು,  ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್‌ರವರ ಸಹಕಾರದಿಂದ ರೂ 50 ಲಕ್ಷ ಹಣವನ್ನು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲಿ ಬಿಡುಗಡೆಗೊಳಿಸಿ ದಾಖಲೆ ಮಾಡಿದ್ದರು.

ಅಂದು ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಸ್ಥಾಪನೆಗೆ ಟೊಂಕ ಕಟ್ಟಿ ನಿಂತಿದ್ದರು. ರಾಜಾಸಾಬ್ ಮತ್ತು ಅವರ ತಂಡ ನಿಜಕ್ಕೂ ಅದ್ಭುತವಾದ ಸಹಕಾರ ನೀಡಿದ್ದರು’

 ನಂತರ ತುಮಕೂರು ವಿಶ್ವವಿದ್ಯಾನಿಲಯಕ್ಕೆ ವಿಸಿಯವರಾಗಿ ಬಂದ ಶ್ರೀ ಸಿದ್ದೇಗೌಡರು ಕುಂದರನಹಳ್ಳಿ ರಮೇಶ್ ಬರೀ ಸರ್ಕಾರಿ ಯೋಜನೆಗಳ ಸ್ಥಾಪನೆಗೆ ಶ್ರಮಿಸುತ್ತಿದ್ದಾರೆ. ಅವರು ಸ್ವಂತವಾಗಿ ಒಂದು ಯೋಜನೆ ಸ್ಥಾಪಿಸಲಿ ಎಂಬ ಉದ್ದೇಶದಿಂದ ಅಭಿವೃದ್ಧಿ ರೆವೂಲ್ಯೂಷನ್ ಫೋರಂನ್ನು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದದಿಂದ ಹೊರಗಿಡಲು ತಿರ್ಮಾನಿಸಿರಬಹುದು. ಅದಕ್ಕೂ ಮೊದಲು ರಾಜಕಾರಣ ನಡೆದಿದ್ದು ನನಗೂ ಗೊತ್ತಿದೆ.

 ನಾನು ಕೊರಗಲಿಲ್ಲ, ಒಂದು ನಿಮಿಷ ಸಮಯವನ್ನು ಹಾಳು ಮಾಡಲಿಲ್ಲ, ವಿಸಿಯವರ ಮೇಲೆ ಹಾಗೂ ರಾಜಕಾರಣ ಮಾಡಿದ ರಾಜಕಾರಣಿ ಮೇಲೆಯೂ ದ್ವೇಷವನ್ನು ಮಾಡಲಿಲ್ಲ, ಅತ್ಯಂತ ಸಂತೋಷದಿಂದ ಸವಾಲಾಗಿ ಸ್ವೀಕರಿಸಿ ಶಕ್ತಿಪೀಠ ಫೌಂಡೇಷನ್ ಸ್ಥಾಪಿಸಿ ನಮ್ಮದೇ ಆದ ಒಂದು ಜಲಭಾರತ ಕ್ಯಾಂಪಸ್’ ಅರಂಭಿಸಲು ಮುನ್ನುಗಿದೆ.

ಬಹುಷಃ ಇದು ಶಕ್ತಿದೇವತೆಯ ನಿರ್ದೇಶನವಿರಬಹುದು. ಕಳೆದ ಮೂರು ವರ್ಷದಲ್ಲಿ ನನಗೆ ತೃಪ್ತಿಯಾಗುವ ರೀತಿಯಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಶಕ್ತಿಪೀಠ ಪೌಂಡೇಷನ್ ಸಹಭಾಗಿತ್ವದಲ್ಲಿ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕನಸಿನ ಯೋಜನೆಗೆ ಚಾಲನೆ ದೊರೆತಿದೆ.

2021 ರ ಯುಗಾದಿ ಹಬ್ಬದ ವೇಳೆಗೆ ಕ್ಯಾಂಪಸ್ ಮಾಸ್ಟರ್ ಪ್ಲಾನ್ ಅಂತಿಮಗೊಳಿಸಲು ಸಮರೋಪಾದಿಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಲೇ ಔಟ್‌ನ್ನು ಭೂಮಿಯ ಮೇಲೆ ಇಳಿಸುವ ಕೆಲಸವೂ ಪೂರ್ಣಗೊಳ್ಳಲಿದೆ. 2022 ರ ಯುಗಾದಿ ಹಬ್ಬದ ವೇಳೆಗೆ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಸಂಶೋಧನಾ ವರದಿಯೂ ಪೂರ್ಣಗೊಳ್ಳಲಿದೆ.

‘ಬೃಹತ್ ಕಟ್ಟಡಗಳ ಬದಲಾಗಿ ಪರಿಸರದ ಜೊತೆ ಸಾಗುವುದೇ ನಮ್ಮ ಕನಸು, ಹೂಡಿಕೆದಾರರಿಗೆ ಅವಕಾಶವನ್ನು ಕಲ್ಪಿಸಲಾಗಿದೆ’

 ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ ಹಾಗೂ ಶ್ರೀ ಜಿ.ಎಸ್.ಬಸವರಾಜ್‌ರವರು ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ ನಾಮನಿರ್ದೇಶನ ಮಾಡಿದ್ದು ನಿಜಕ್ಕೂ ನನಗೆ ವರದಾನವಾಗಿದೆ.

  1. ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್‌ರವರು ಮತ್ತು 31 ಜಿಲ್ಲೆಗಳ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರ ಸಹಕಾರದಿಂದ ನಮ್ಮ ವಿಷನ್ ಡಾಕ್ಯುಮೆಂಟ್‌ನ ಅಭಿವೃದ್ಧಿ ಪೀಠಗಳ ಅಂಶಗಳ ಜಾರಿಗೆ ಶತಾಯಗತಾಯ ಶ್ರಮಿಸಲಾಗುವುದು.
  2. ಜಲಪೀಠಗಳ ಅಂಶಗಳ ಬಗ್ಗೆ ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಮುಖಾಂತರ ನಿರಂತರವಾಗಿ ಶ್ರಮಿಸಲಾಗುತ್ತಿದೆ.
  3. ಶಕ್ತಿಪೀಠ ಅಂಶಗಳ ಗುರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ನಿಜಕ್ಕೂ ನೂರಾರು ಜನರ ಶ್ರಮ ನಿರಂತರವಾಗಿ ಸಾಗಿದೆ.

 ಶ್ರೀ ಜಿ.ಎಸ್.ಬಸವರಾಜ್‌ರವರ ನಿರಂತರ ಸಹಕಾರವಿದೆ. ತುಮಕೂರು ನಗರದ ಶಾಸಕರು ಹಾಗೂ ಜಿ.ಎಸ್.ಬಸವರಾಜ್‌ರವರ ಪುತ್ರರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು  ಕೊರೊನಾ ಹಿನ್ನಲೆಯಲ್ಲಿ ವಾರಕ್ಕೆ ಒಂದು ದಿವಸ ಮಾತ್ರ ಜಿ.ಎಸ್.ಬಸವರಾಜ್ ರವರನ್ನು ಬೆಂಗಳೂರಿಗೆ ಕರೆದು ಕೊಂಡು ಹೋಗಲು ನನಗೆ ಕಂಡೀಷನ್ ಹಾಕಿದ್ದರು. 

 ಮೊನ್ನೆ ಪುನಃ ಅವರೇ ಅವರ ಕಂಡೀಷನ್ ಬದಲಾಯಿಸಿ ವಾರಕ್ಕೆ ಮೂರು ದಿವಸ ಕರೆದುಕೊಂಡು ಹೋಗಿ ಸಾರ್, ಇಲ್ಲದಿದ್ದರೇ ಎಂಪಿಯವರ ಮತ್ತು ನಿಮ್ಮ ಕನಸಿನ ಯೋಜನೆಗಳು ನೆನೆಗುದಿಗೆ ಬೀಳಲಿವೆ ಎಂದು ಹೇಳಿದ್ದು ನಿಜಕ್ಕೂ ನನಗೆ ಖುಷಿಯಾಗಿದೆ.

ಇ-ಪೇಪರ್ ಓದುಗರಾದ ತಮ್ಮೆಲ್ಲರ ಡಿಜಿಟಲ್ ಸಹಕಾರವಿಲಿ.