16th September 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವರ್ಷಕ್ಕೆ ಕನಿಷ್ಟ ಪಕ್ಷ ನಾಲ್ಕು ದಿಶಾ ಸಭೆಗಳನ್ನು ಮಾಡಬೇಕಾಗಿದೆ.

ಕಳೆದ ಸಾಲಿನಲ್ಲಿ ತುಮಕೂರು ಜಿಲ್ಲಾ ದಿಶಾ ಸಮಿತಿ 3 ದಿಶಾ ಸಭೆಗಳನ್ನು ಮಾಡುವ ಮೂಲಕ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ.

ಈ ವರ್ಷವೂ ಇನ್ನೂ ಮಾರ್ಚ್ 31 ರವರೆಗೆ ಕಾಲಾವಕಾಶವಿದೆ. ನಾವು ಈಗಾಗಲೇ 2 ಸಭೆಗಳನ್ನು ಮಾಡಿದ್ದೇವೆ. ದಿನಾಂಕ:22.01.2021  ರಂದು 3 ನೇ ಸಭೆ ನಿಗದಿಯಾಗಿದೆ. ಫೆಬ್ರವರಿಯಲ್ಲಿ 4 ನೇ ಸಭೆಯನ್ನು ಮಾಡಲಿದ್ದೇವೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಜಿಲ್ಲೆಯ ಅಧಿಕಾರಿಗಳಿಗೆ ಕಾನ್ವೆಂಟ್ ಮಾದರಿಯಲ್ಲಿ ಹೋಂವರ್ಕ್ಸ್ ಜಾಸ್ತಿ ಕೊಟ್ಟಿದ್ದಾರೆ. ಅಧಿಕಾರಿಗಳು ವಿವಿಲನೆ ಒದ್ದಾಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ತುಮಕೂರು ಜಿಐಎಸ್ ಮಾಡುವ ಮೂಲಕ ಪ್ರತಿಯೊಂದು ಇಲಾಖೆಯೂ, ಪ್ರತಿಯೊಂದು ಯೋಜನೆಯ ಜಿಐಎಸ್ ಲೇಯರ್ ಮಾಡಿ ಅಫ್ ಲೋಡ್ ಮಾಡುವುದು ಅಧಿಕಾರಿಗಳಿಗೆ ನೀರಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಗಿದೆ’

‘ದಿನಾಂಕ:22.01.2021 ರಂದು ತುಮಕೂರು ಜಿಐಎಸ್ ಲೋಕಾರ್ಪಣೆ ಮಾಡುವ ಮೂಲಕ ದೇಶದ ಎಲ್ಲಾ ಜಿಲ್ಲೆಗಳಿಗೂ ಮಾದರಿ ದಿಶಾ ಸಮಿತಿ ತುಮಕೂರು ಜಿಲ್ಲೆಯಾಗಲಿದೆ ಎಂಬ ಕನಸು ನಮ್ಮದಾಗಿದೆ’

ಇನ್ನೂ ಮುಂದೆ ಗ್ರಾಮಗಳ ಕಲ್ಲುಕಟ್ಟೆ ಮೇಲೆ ಕುಳಿತುಕೊಳ್ಳುವ ಜನರು ಸಹ ದಿಶಾ ಸಮಿತಿಯ ಯೋಜನೆಗಳ ಅನಾಲೀಸಿಸ್ ಮಾಡಬಹುದು. ದೇಶ ವಿದೇಶಗಳಲ್ಲಿರುವ ತುಮಕೂರು ಜಿಲ್ಲೆಯ ಜನತೆಯೂ ಸಲಹೆ ನೀಡಬಹುದು. ಎಲ್ಲವೂ ಪಾರದರ್ಶಕ, ಡಿಜಿಟಲ್ ಮಯವಾಗಲಿದೆ.

ದಯವಿಟ್ಟು ನಾವೂ ಕಾಲಕಳೆದಿಲ್ಲ, ಗುರಿ ತಲುಪುತ್ತೇವೆ. ಪ್ರಧಾನಿಯವರಿಗೆ ನಮ್ಮ ವರದಿಯನ್ನು ಶೀಘ್ರವಾಗಿ ಸಲ್ಲಿಸುತ್ತೇವೆ. ನನಗೆ ನಿನ್ನೆ ಬೆಳಿಗ್ಗೆಯಿಂದ ದಿಶಾ ಸುಮಲತಾ ಫಸ್ಟ್- ನೀವೇನು ಮಾಡುತ್ತಿದ್ರಿ’ ಎಂಬ ಡಿಜಿಟಲ್  ಚಾಟಿ ಬೀಸುತ್ತಿರುವ ಜಿಲ್ಲೆಯ ದಿಶಾ ಅಭಿಮಾನಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು.

‘ಮಂಡ್ಯ ಲೋಕಸಭಾ ಸದಸ್ಯರಾದ ಶ್ರೀಮತಿ ಸುಮಲತಾರವರಿಗೆ ಮತ್ತು ದಿಶಾ ಸದಸ್ಯ ಕಾರ್ಯದರ್ಶಿಯವರಾದ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’

ಕುಂದರನಹಳ್ಳಿ ರಮೇಶ್

ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ