TUMAKURU:SHAKTHI PEETA FOUNDATION
ಮಾನ್ಯ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯಲು, ರಾಜ್ಯದ 28 ಜನ ಲೋಕಸಭಾ ಸದಸ್ಯರು ಹಾಗೂ 12 ರಾಜ್ಯ ಸಭಾ ಸದಸ್ಯರಿಗೆ ತುಮಕೂರಿನ ಶಕ್ತಿಪಿಠ ಫೌಂಡೇಷನ್ ಪತ್ರ ಬರೆದು ಮನವಿ ಮಾಡಲು ಚಿಂತನೆ ನಡೆಸಲಾಗಿದೆ.
ದಿಶಾ ಸಮಿತಿ ಮಾರ್ಗದರ್ಶಿ ಸೂತ್ರದಲ್ಲಿ ಈ ಕೆಳಕಂಡ ಅಂಶಗಳನ್ನು ಸೇರ್ಪಡೆ ಮಾಡಲು ಕೋರಲಾಗುವುದು.
- ಕೇಂದ್ರ ಸರ್ಕಾರಕ್ಕೆ ಯಾವುದೇ ಜಿಲ್ಲೆಯ ಯೋಜನೆ ಪ್ರಸ್ತಾವನೆ ಸಲ್ಲಿಸುವಾಗ ಜಿಲ್ಲಾ ಮಟ್ಟದ ದಿಶಾ ಸಮಿತಿ ಹಾಗೂ ರಾಜ್ಯ ಮಟ್ಟದ ದಿಶಾ ಸಮಿತಿಯ ನಡವಳಿಕೆಯೊಂದಿಗೆ ಪ್ರಸ್ತಾವನೆ ಸಲ್ಲಿಸುವುದು ಕಡ್ಡಾಯ.
- ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಹಣವನ್ನು ಯೋಜನೆಗೆ ಬಳಸುವ ಮುನ್ನ ಜಿಲ್ಲಾ ಮಟ್ಟದ ದಿಶಾ ಸಮಿತಿ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ನಿರ್ಣಯ ಮಾಡುವುದು ಕಡ್ಡಾಯ.
- ಕೇಂದ್ರ ಸರ್ಕಾರಕ್ಕೆ ಯುಸಿ ಕಳುಹಿಸುವ ಮುನ್ನ ಜಿಲ್ಲಾ ಮಟ್ಟದ ದಿಶಾ ಸಮಿತಿ ಹಾಗೂ ರಾಜ್ಯ ಮಟ್ಟದ ದಿಶಾ ಸಮಿತಿಯ ನಡವಳಿಕೆಯೊಂದಿಗೆ ಪ್ರಸ್ತಾವನೆ ಸಲ್ಲಿಸುವುದು ಕಡ್ಡಾಯ.
- ಕೇಂದ್ರ ಸರ್ಕಾರದಿಂದ ಬಂದ ಕಾಗದ ಪತ್ರಗಳನ್ನು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ಸಭೆಯಲ್ಲಿ ರೇಕಾರ್ಡ್ ಮಾಡುವುದು ಕಡ್ಡಾಯ.
- ಕೇಂದ್ರ ಸರ್ಕಾರದಿಂದ ಯಾವುದೇ ಜಿಲ್ಲಾ ವ್ಯಾಪ್ತಿಯಲ್ಲಿ ಎನ್‌ಜಿಓಗಳಿಗೆ ನೀಡುವ ಅನುದಾನ ಬಿಡುಗಡೆ ಮಾಡುವ ಮುನ್ನ ಆಯಾ ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ಸಭೆಯಲ್ಲಿ ರೇಕಾರ್ಡ್ ಮಾಡುವುದು ಕಡ್ಡಾಯ.
- ಯಾವುದೇ ಜಿಲ್ಲಾ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ನಿಗಮಗಳು, ಬೋರ್ಡ್‌ಗಳು, ನವರತ್ನ ಕಂಪನಿಗಳು ಕೈಗೊಳ್ಳುವ ಯೋಜನೆಗಳ ಬಗ್ಗೆ ಆಯಾ ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ಸಭೆಯಲ್ಲಿ ರೇಕಾರ್ಡ್ ಮಾಡುವುದು ಕಡ್ಡಾಯ.
- ಕೇಂದ್ರ ಸರ್ಕಾರದ ಯಾವುದೇ ಯೋಜನೆಯ ಬಗ್ಗೆ ಸಮಾಲೋಚನೆ ಅಥವಾ ಪರಿಶೀಲನೆ ಮಾಡಲು ಬರುವ ಅಧಿಕಾರಿಗಳ ತಂಡದ ಮಾಹಿತಿಯನ್ನು ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯರ ಗಮನಕ್ಕೆ ತರುವುದನ್ನು ಕಡ್ಡಾಯ ಮಾಡುವುದು.
- ನಿಗದಿತ ಸಮಯದಲ್ಲಿ ಕೇಂದ್ರ ಸರ್ಕಾರದ ಅನುದಾನ ಬಳಕೆ ಮಾಡದ ಅಧಿಕಾರಿಗಳ ಎಸ್‌ಆರ್‌ನಲ್ಲಿ ನಮೂದಿಸುವುದನ್ನು ಕಡ್ಡಾಯ ಮಾಡುವುದು. ಇದನ್ನು ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ಗಮನಕ್ಕೆ ತರುವುದು ಕಡ್ಡಾಯ ಮಾಡುವುದು.
- ನಿಗದಿತ ಸಮಯದಲ್ಲಿ ಕೇಂದ್ರ ಸರ್ಕಾರದ ಅನುದಾನ ಬಳಕೆ ಮಾಡಿದ ಅಧಿಕಾರಿಗಳ ಎಸ್‌ಆರ್‌ನಲ್ಲಿ ನಮೂದಿಸಿ ರ್‍ಯಾಂಕಿಂಗ್ ನೀಡುವುದು. ಇದನ್ನು ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯಲ್ಲಿ ನಡವಳಿಕೆ ಮಾಡುವುದು ಕಡ್ಡಾಯ.
ಈ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳು ಹಾಗೂ ಇನ್ನೂ ಯಾವುದಾದರೂ ಅಂಶಗಳನ್ನು ಸೇರ್ಪಡೆ ಮಾಡುವುದು ಅಗತ್ಯವಿದ್ದಲ್ಲಿ ಸಲಹೆ ನೀಡಲು ಓದುಗರಲ್ಲಿ ಮನವಿ ಮಾಡಲಾಗಿದೆ.
-ಕುಂದರನಹಳ್ಳಿ ರಮೇಶ್.
ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.