TUMAKURU:SHAKTHIPEETA FOUNDATION
ತಾವೂ ತುಮಕೂರು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ.
ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ.
ನಿಮ್ಮಿಂದ ನಾವೂ ಸಾಮಾಜಿಕ ನ್ಯಾಯ ನೀರಿಕ್ಷೆ ಮಾಡುವುದು ತಪ್ಪೆ?
ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರನ್ನು ಹಂಚಿಕೆ ಮಾಡಲು ಇನ್ನೂ ಸಿದ್ಧತೆ ಮಾಡಿಕೊಂಡಿಲ್ಲ.
ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕೆ.ಐ.ಡಿ.ಬಿ ಕೈಗಾರಿಕಾ ವಲಯಕ್ಕೆ ಅಗತ್ಯವಿರುವ ನೀರಿನ ಮಾಹಿತಿ ಸಿದ್ಧಪಡಿಸಿಕೊಂಡಿದೆ. ನೆನಪಿರಲಿ. ವಸಂತನರಾಸಪುರದ ಕೇಂದ್ರ ಸರ್ಕಾರದ ಇಂಡಸ್ಟ್ರಿಯಲ್ ನೋಡ್ ಗೆ ನೀರು ಅಲೋಕೇಷನ್ ಮಾಡಿಲ್ಲ.
ನಗರ ಪ್ರದೇಶಗಳಿಗೆ ಅಗತ್ಯವಿರುವ ನೀರಿನ ಮಾಹಿತಿಯನ್ನು ನಗರ ನೀರು ಸರಬರಾಜು ಇಲಾಖೆ ಸಿದ್ಧಮಾಡಿಕೊಂಡಿದ್ದಾರೆ.
ಸಣ್ಣ ನೀರಾವರಿ ಇಲಾಖೆ ಅವರಿಗೆ ಬೇಕಾದ ಕೆರೆಗಳಿಗೆ ನೀರು ನೀಡುತ್ತೇವೆ ಎಂದು ಹೊರಟಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯದ ಕಾಳಜಿ ಇರುವ ಹಾಗಿಲ್ಲ.ತುಮಕೂರು ಜಿಲ್ಲೆ ಒಂದು ಯೂನಿಟ್ ಎಂದು ಯೋಜನೆ ರೂಪಿಸುವ ತಾಳ್ಮೆ ಇಲ್ಲ ಎನಿಸುತ್ತಿದೆ.
ತಾವೂ ಮತ್ತು ಯೋಜನಾ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರು ಸಭೆ ನಡೆಸಿ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯಡಿ, ತುಮಕೂರು ಜಿಲ್ಲೆಯನ್ನು ಪೈಲಟ್ ಜಿಲ್ಲೆಯಾಗಿ ಮಾಡುತ್ತೇವೆ, ಎಂದು ಮಾನ್ಯ ಮುಖ್ಯ ಮಂತ್ರಿಯವರಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಂದ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಪತ್ರ ಬರೆಸಿದ್ದೀರಿ, ತಮಗೆ ನನೆಪಿರಲಿ.
ಹೇಮಾವತಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಮೈಕ್ರೋ ಇರ್ರಿಗೇಷನ್ ಮಾಡಿ ಉಳಿಯುವ ನೀರನ್ನು ಕೆರೆಗಳಿಗೆ ಅಲೋಕೇಷನ್ ಮಾಡುತ್ತೇವೆ ಎಂದು ತಾವೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೀರಿ.
ಭಧ್ರಾ ಮೇಲ್ದಂಡೆ, ಎತ್ತಿನಹೊಳೆ ಮತ್ತು ಹೇಮಾವತಿ ನೀರಿನಿಂದ ತುಮಕೂರು ಜಿಲ್ಲೆಯ ಪ್ರತಿ ಗ್ರಾಮದ ಕೆರೆಗಳಿಗೆ ಅಲೋಕೇಷನ್ ಮಾಡಿ, ಈ ಮೂರು ಮೂಲದ ನೀರು ಕಡಿಮೆ ಆದಾಗ ಕುಮಾರಧಾರ ನೀರು ಯೋಜನೆ ರೂಪಿಸಿದಾಗ ಇಷ್ಟು ಕೆರೆಗಳಿಗೆ ನೀರು ನೀಡುತ್ತೇವೆ ಎಂಬ ಮಾಹಿತಿಯನ್ನು ಜಿಲ್ಲೆಯ ಜನತೆ ನೀಡಿ.
ಇದು ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ, ದಯವಿಟ್ಟು ತಪ್ಪು ಮಾಡಬೇಡಿ.
ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿರುವುದೇ ಇದೆ. ನೀವೂ ಹೇಗೆ ಇದಕ್ಕೆ ವಿರುದ್ಧವಾಗಿ ಮಾಡುತ್ತೀರಿ? ದಿಶಾ ಸಮಿತಿ ನಿರ್ಣಯಕ್ಕೆ ಬೆಲೆ ಇಲ್ಲವೇ ?