13th June 2024
Share

TUMAKURU:SHAKTHIPEETA FOUNDATION

ಕಳೆದ 34 ವರ್ಷಗಳ ಸಾಮಾಜಿಕ ಜೀವನದಲ್ಲಿ 25 ವರ್ಷಗಳ ನೀರಾವರಿ ಜಂಜಾಟ ಪ್ರಮುಖವಾಗಿದೆ. ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಮತ್ತು ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರನ್ನು  ಮೇಕೆದಾಟು ಪಾದಯಾತ್ರೆ ಆರಂಭಿಸಿರುವುದಕ್ಕೆ ನಾನು ಅಭಿನಂದಿಸುತ್ತೇನೆ.

ಹಾಗೆಯೇ ಡಿಕೆಶಿ, ಸಿದ್ಧು ಮೇಕೆದಾಟು ಒಂದೇ ಸಾಕೇ ? ಉಳಿದ ನೀರಾವರಿ ಯೋಜನೆಗಳು ಬೇಡವೇ? ಎಂದು ಪ್ರಶ್ನೆಯನ್ನು ಮಾಡುತ್ತಿದ್ಧೆನೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರ ಜಲಶಕ್ತಿ ಸಚಿವಾಲಯದ ಕನ್ಸಲ್ಟೆಂಟೀವ್ ಕಮಿಟಿ ಸದಸ್ಯರಾಗಿದ್ದಾರೆ. ಅವರ ಜೊತೆ ನಿರಂತರವಾಗಿ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಸಂಪರ್ಕ ಇರುವುದರಿಂದ ಮಾತನಾಡಲೇ ಬೇಕಿದೆ.

ತುಮಕೂರು ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರು ಇಡೀ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿ ಸಭೆ ನಡವಳಿಕೆ ಮಾಡಿಸಿದ್ದಾರೆ. ಚರ್ಚೆ ಮಾಡಿ ನಿರ್ಣಯ ಮಾಡಿ ಸುಮ್ಮನೆ ಕೂರಲಿಲ್ಲ.ರಾಜ್ಯ ಜಲಸಂಪನ್ಮೂಲ ಸಚಿವಾಲಯದ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಆ ಸಭೆಗೆ ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ಅವರನ್ನು ಆಹ್ವಾಹಿಸಿ, ಕೇಂದ್ರ ಸರ್ಕಾರದ ನ್ಯಾಷನಲ್ ಇನ್ಪಾಸ್ಟ್ರಚ್ಚರ್ ಯೋಜನೆಯಡಿ ಸುಮಾರು 2.5 ಲಕ್ಷ ಕೋಟಿ ಯೋಜನೆಯನ್ನು ಅಫ್ ಲೋಡ್ ಮಾಡಿಸಿದ್ದಾರೆ.

ಅಷ್ಟಕ್ಕೂ ಸುಮ್ಮನಾಗಲಿಲ್ಲ ಆಗಿನ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಂದ ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೂ ಪತ್ರ ಬರೆಸಿ ಯೋಜನೆಯನ್ನು ಕೈಗೊಳ್ಳಲು ಮನವಿ ಮಾಡಿಸಿದ್ದಾರೆ.

ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿಯವರು ನಿರಂತರವಾಗಿ ಕೇಂದ್ರದ ಮೇಲೆ ಹಲವಾರು ನೀರಾವರಿ ಯೋಜನೆಗಳ ಬಗ್ಗೆ ಒತ್ತಡ ಹಾಕುತ್ತಿದ್ದಾರೆ.

ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಸಹ ರಾಜ್ಯದ ಹಲವಾರು ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಜಿ.ಎಸ್.ಬಸವರಾಜ್ ರವರು ಮುಖ್ಯ ಮಂತ್ರಿಯವರ ಪತ್ರ,, ಸಣ್ಣ ನೀರಾವರಿ ಸಚಿವರ ಪ್ರಸ್ತಾವನೆ, ಅಪರ ಮುಖ್ಯ ಕಾರ್ಯದರ್ಶಿಯವರ ಪತ್ರ ಹಿಡಿದು ಕೊಂಡು ಕೇಂದ್ರ ಜಲಶಕ್ತಿ ಸಚಿವಾಯದಲ್ಲಿ ನಿರಂತರವಾಗಿ ಚರ್ಚೆ ಮಾಡುತ್ತಿದ್ದಾರೆ.

ಅಷ್ಟೆ ಅಲ್ಲ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಮತ್ತು ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳರವರು ಆನೇಕ ಯೋಜನೆಗಳ ಅಧ್ಯಯನ ಆರಂಭಿಸಿದ್ದಾರೆ. ಈ ಎಲ್ಲಾ ಯೋಜನೆಗಳಿಗೂ ಕೇಂದ್ರ ಸರ್ಕಾರದ ಅನುಮತಿ ಮತ್ತು ಅನುದಾನ ಬೇಕೇಬೇಕು.

ಎಲ್ಲವನ್ನೂ ಬಿಟ್ಟು ಕೇವಲ ಮೇಕೆದಾಟು ಒಂದೇ ಯೋಜನೆಗೆ ಹೋರಾಟ ಸರಿಯೇ ಸ್ವಾಮಿ. ಜಿ.ಎಸ್.ಬಸವರಾಜ್ ರವರ ಜೊತೆ ಶ್ರೀ ಹೆಚ್.ಕೆ.ಪಾಟೀಲ್ ರವರ ಮನೆಗೆ ನಾನು ಹೋದಾಗ ಇಡಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ  ಚರ್ಚೆ ಮಾಡಿದ್ದೆ. ಅವರು ಸಹ ಶೀಘ್ರವಾಗಿ ಈ ಬಗ್ಗೆ ಪಕ್ಷಾತೀತವಾಗಿ ಚರ್ಚೆ ಆರಂಭ ಮಾಡುವ ಭರವಸೆ ನೀಡಿದ್ದರು.

ರಾಜ್ಯದ ಹಿತದೃಷ್ಟಿಯಿಂದ ಎಲ್ಲಾ ಪಕ್ಷಗಳು ಒಟ್ಟಾಗಿ ರಾಜ್ಯದ ಸಮಗ್ರ ನೀರಾವರಿ ಯೋಜನೆ ರೂಪಿಸಿ, ಹೋರಾಟವನ್ನು ನಿಮ್ಮ ಇಷ್ಟ ಬಂದತೆ ಮಾಡಿ, ಅದು ನಿಮ್ಮ ಹಕ್ಕು.

ಕಾಂಗ್ರೆಸ್ ನವರು ಯೋಜನೆಗೆ ಚಾಲನೆ ನೀಡಿದ್ದರೆ,ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿಯವರು ಮುಂದುವರಿಸಿದ್ದಾರೆ.

ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆ ಅಧ್ಯಯನ ಮಾಡಲು ಅನುಮತಿ ಕೊಡಬಹುದಿತ್ತು,ಕೇಂದ್ರ ಸರ್ಕಾರ ಅನುಮತಿ ನೀಡದೇ ಇದ್ದಲ್ಲಿ ವಿರೋಧಪಕ್ಷಗಳು ಬೀದಿಗಿಳಿಯಲೇ ಬೇಕು.

ಆಡಳಿತಾರೂಢ ಪಕ್ಷ ಕೇಂದ್ರದಲ್ಲಿಯೂ ಅಧಿಕಾರದಲ್ಲಿರುವುದರಿಂದ ಅವರು ಬೀದಿಗಿಳಿಯಲು ಸಾಧ್ಯವೇ

ರಾಜ್ಯದ ಮುಖ್ಯ ಮಂತ್ರಿಯವರು,ಜಲಸಂಪನ್ಮೂಲ ಸಚಿವ ರು ಸೇರಿದಂತೆ ಸರ್ಕಾರದ ಅಧಿಕಾರಿಗಳು ಬಹಳಷ್ಟು ಪ್ರಯತ್ನ ಪಡುತ್ತಿದ್ದಾರೆ, ಡಾ.ಶ್ರೀಮತಿ ತೇಜಸ್ವಿನಿಗೌಡರವರಿಗೆ ಕೊಟ್ಟಿರುವ ಉತ್ತರದಲ್ಲಿ ಸ್ಪಷ್ಟವಾಗಿದೆ.