27th July 2024
Share

  ವಿಧಾನಸಭಾ ಕ್ಷೇತ್ರವಾರು ನೀರಿನ ಮೌಲ್ಯ ಮಾಪನ

TUMKURU:SHAKTHIPEETA FOUNDATION

ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಾರಿಗೊಳಿಸಿ ಡಿಸ್ಟ್ರಿಕ್ಟ್ ಇರ್ರಿಗೇಷನ್ ಪ್ಲಾನ್ ಮಾಡಿದೆ. ಅಟಲ್ ಭೂಜಲ್ ಜಾರಿಗೊಳಿಸಿ ವಾಟರ್ ಬಡ್ಜೆಟ್, ವಾಟರ್ ಆಡಿಟ್ ಮತ್ತು ವಾಟರ್ ಸ್ಟ್ರಾಟಜಿ ಮಾಡಲು ಯೋಜನೆ ರೂಪಿಸಿದೆ,

  ಕರ್ನಾಟಕ ಸರ್ಕಾರ ಜಲಾಮೃತ ಯೋಜನೆ ರೂಪಿಸಿ ವಾಟರ್ ಬಡ್ಜೆಟ್, ವಾಟರ್ ಆಡಿಟ್ ಮತ್ತು ವಾಟರ್ ಸ್ಟ್ರಾಟಜಿ ಮಾಡಲು ಯೋಜನೆ ರೂಪಿಸಿದೆ,

ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಜಾರಿಗೊಳಿಸಿ ಮನೆ ಮನೆಗೆ ನಲ್ಲಿ ಸಂಪರ್ಕ ನೀಡಲು ವಿಲೇಜ್ ಆಕ್ಷನ್ ಪ್ಲಾನ್ ಮಾಡಲು ಸೂಚಿಸಿದೆ.

ಕುಡಿಯುವ ನೀರಿನಲ್ಲಿ, ನದಿ ನೀರು ಬಳಕೆಯಲ್ಲಿ ಸಾಮಾಜಿಕ ನ್ಯಾಯದಡಿ 31 ಜಿಲ್ಲಾವಾರು, 224 ವಿಧಾನಸಭಾ ಕ್ಷೇತ್ರವಾರು ನೀರಿನ ಮತ್ತು ನೀರಾವರಿಗೆ ಸಂಬಂಧಿಸಿದ ಯೋಜನೆಗಳ ಮೌಲ್ಯ ಮಾಪನ ಮಾಡುವುದು ಅಗತ್ಯವಾಗಿದೆ. ಈ ಬಗ್ಗೆ ವಿಧಾನಸಭಾ ಕ್ಷೇತ್ರವಾರು Ranking ನೀಡುವುದು ಸೂಕ್ತವಾಗಿದೆ.

ಮೇಕೆದಾಟು ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಈ ಬಗ್ಗೆ ತಮ್ಮ ಪಕ್ಷದ ನಿಲುವು ವ್ಯಕ್ತಪಡಿಸುವುದೇ ಕಾದು ನೋಡಬೇಕಿದೆ.

ರಾಜ್ಯದ ಪರಿಣಿತರು ಮತ್ತು ಸಲಹಾಗಾರರ ವಿಷನ್ ಗ್ರೂಪ್ ರಚಿಸಲು ಚಿಂತನೆ ನಡೆಸಿದೆ. ಡಾ.ಡಿ.ಎಂ ನಂಜುಂಡಪ್ಪ ವರದಿಯಲ್ಲಿ ಈ ಬಗ್ಗೆ ಹಲವಾರು ಯೋಜನೆಗಳ ಪ್ರಸ್ತಾಪ ತಾಲ್ಲೋಕುವಾರು ಇದೆ. ಯೋಜನೆ ಜಾರಿಯಾದ ಮೇಲೆ ಎಷ್ಟು ಬದಲಾವಣೆ ಆಗಿದೆ. ಎಂಬ ಬಗ್ಗೆ ರಾಜ್ಯ ಸರ್ಕಾರದ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗಳ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ರವರ ಜೊತೆ ಸಮಾಲೋಚನೆ ನಡೆಸಲಾಯಿತು.

ಡಾ.ಡಿ.ಎಂ ನಂಜುಂಡಪ್ಪ ವರದಿಯಲ್ಲಿನ ಯೋಜನೆಗಳ ಅನುಷ್ಠಾನ ಎಷ್ಟರ ಮಟ್ಟಿಗೆ ಆಗಿದೆ ನೋಡೋಣ. 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅಥವಾ ಜಿಲ್ಲಾವಾರು ಜಲಜೀವನ್ ಮಿಷನ್ ಯೋಜನೆ ಸಮರ್ಪಕ ಜಾರಿಗೆ ಕನಿಷ್ಟ ಒಂದಾದರೂ ವಾಟರ್ ಬ್ಯಾಂಕ್ ಇರಲೇ ಬೇಕಿದೆ.

ಶಕ್ತಿಪೀಠ ಫೌಂಡೇಷನ್, ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಲ್ಲಿರುವ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಇಂದಿನಿಂದಲೇ ಆರಂಭಿಸಲಿದೆ.

ಕರ್ನಾಟಕ ರಾಜ್ಯದ ಅಭಾವ ಪೀಡಿತ ಪ್ರದೇಶಗಳ ನೀರಾವರಿ ಅಭಿವೃದ್ಧಿ ಸಲಹಾ ಸಮಿತಿ(ಅಪ್ನಾಸ್) ಗೆ 25 ವರ್ಷ ತುಂಬಿದ ಈ ದಿನ(07.01.1997 – 07.01.2022) ಆರಂಭಿಸಿ, ಶಕ್ತಿಪೀಠ ಕ್ಯಾಂಪಸ್ ಉದ್ಘಾಟನೆ ವೇಳೆಗೆ ಮೌಲ್ಯಮಾಪನ ವರದಿ ಬಿಡುಗಡೆ ಮಾಡುವ ಚಿಂತನೆ ಇದೆ.

ಆಸಕ್ತರು ಸಹಕರಿಸಲು ಮನವಿ.