TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದಲ್ಲಿನ ನೀರಾವರಿ ಕಾಲುವೆಗಳ ಮೇಲೆ ಸೋಲಾರ್ ವಿದ್ಯುತ್ ಉತ್ಪಾದನೆಯ ಪಿಪಿಪಿ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರದ ವಸತಿ ಮತ್ತು ಮೂಲಭೂತ ಸೌಕರ್ಯ ಸಚಿವರಾದ ಶ್ರೀ ವಿ.ಸೋಮಣ್ಣನವರನವರೊಂದಿಗೆ ಕೇಂದ್ರ ಸರ್ಕಾರದ ಅಧಿಕಾರಿ ಶ್ರೀ ಆನಂದ್ ರಾವ್ ರವರು ಸಮಾಲೋಚನೆ ನಡೆಸಲಾಯಿತು.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ರಾಜ್ಯದ ಎಲ್ಲಾ ನೀರಾವರಿ ಕೆನಾಲ್ ಮೇಲೆ ಸೋಲಾರ್ ಯೋಜನೆ ರೂಪಿಸಿದರೆ ಎಷ್ಟು ಟಿಎಂಸಿ ಅಡಿ ನೀರು ಆವಿಯಾಗುವುದು ತಡೆಗಟ್ಟಲಿದೆ. ರಾಜ್ಯದ ಎಲ್ಲಾ ಲಿಪ್ಟ್ ಇರ್ರಿಗೇಷನ್ ಗಾಗಿ ಎಷ್ಟು ವಿದ್ಯುತ್ ಬಳಸಲಾಗುತ್ತಿದೆ. ಈ ಯೋಜನೆಯಿಂದ ಎಷ್ಟು ವಿದ್ಯುತ್ ಉತ್ಪಾದನೆ ಆಗಲಿದೆ ಎಂಬ ಡಾಟಾ ಸಿದ್ಧಪಡಿಸಲಾಗಿದೆಯೇ ಎಂಬ ಬಗ್ಗೆ ಗಮನ ಸೆಳೆದರು.
ರಾಜ್ಯ ಸರ್ಕಾರ ಕಾಲುವೆ ಮೇಲೆ ಅವಕಾಶ ಕೊಟ್ಟರೆ ಉಳಿದ ಯೋಜನೆಯ ವೆಚ್ಚವನ್ನು ಖಾಸಗಿ ಕಂಪನಿಗಳು ಹೂಡಿಕೆ ಮಾಡಲಿವೆ. ವಿದ್ಯುತ್ ಕೊಂಡುಕೊಳ್ಳುವ ಖಾತರಿಯನ್ನು ಸರ್ಕಾರಗಳು ನೀಡಬೇಕಾಗುತ್ತದೆ ಎಂಬ ಮಾಹಿತಿಯನ್ನು ಹಂಚಿಕೊಂಡರು.
ಪಾವಗಡ ಮಾದರಿಯಲ್ಲಿ ನೀರಾವರಿ ಇಲಾಖೆಗೆ/ಸರ್ಕಾರಕ್ಕೆ ಬಾಡಿಗೆ ನೀಡಲು ಅವಕಾಶದ ಬಗ್ಗೆಯೂ ಸಮಾಲೋಚನೆ ನಡೆಯಿತು. ತುಮಕೂರು ಜಿಲ್ಲೆಯ ಹೇಮಾವತಿ, ಎತ್ತಿನಹೊಳೆ ಮತ್ತು ಭಧ್ರಾಮೇಲ್ದಂಡೆ ಕಾಲುವೆಗಳ ಮೇಲೆ ಸೋಲಾರ್ ಪೆನಾಲ್ ಹಾಕುವ ಬಗ್ಗೆ ಒಂದು ಕಲ್ಪನಾವರದಿ/ ಪಿಪಿಟಿ ಸಿದ್ಧಪಡಿಸಿಕೊಂಡು ಬನ್ನಿ ಎಂಬ ಸಲಹೆ ನೀಡಿದರು.