22nd December 2024
Share

TUMKURU:SHAKTHIPEETA FOUNDATION

ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ದಿನಾಂಕ:10.11.2017 ರಂದು ಹೊರತಂದಿದ್ದ ‘ಜನತೆಯ ವಿಷನ್ ಡಾಕ್ಯುಮೆಂಟ್-2025 ರಲ್ಲಿ ವಿಲೇಜ್-1 ಯೋಜನೆ ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹ ಮಾಡಲಾಗಿತ್ತು.

ಮಾಜಿಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಆಯವ್ಯಯಪತ್ರದಲ್ಲಿ ಮಂಡಿಸಿ ಪ್ರಾಯೋಗಿಕವಾಗಿ ಚಾಲನೆ ನೀಡಿದ್ದರು.

ಈಗಿನ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಜನವರಿ 26 ರಿಂದ ರಾಜ್ಯದ 12 ಜಿಲ್ಲೆಗಳಲ್ಲಿ ಗ್ರಾಮ-1 ಯೋಜನೆ ಹೆಸರಿನಲ್ಲಿ  ಆರಂಭ ಮಾಡಲಿದ್ದಾರೆ. ಇದರಲ್ಲಿ ತುಮಕೂರು ಜಿಲ್ಲೆಯೂ ಸೇರ್ಪಡೆ ಆಗಿದೆ. ಬೊಮ್ಮಾಯಿರವರು ಮತ್ತು ಅವರ ಸರ್ಕಾರಕ್ಕೆ ಧನ್ಯವಾದಗಳು.

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಹಲವಾರು ಸಭೆಗಳಲ್ಲಿ ಚರ್ಚಿಸಲಾಗಿತ್ತು.

ನಿಜಕ್ಕೂ ಈ ಯೋಜನೆ ಯಶಸ್ವಿಯಾದರೆ, ಮನೆ ಬಾಗಿಲಿಗೆ ಸರ್ಕಾರ ಪದಕ್ಕೆ ನಿಜವಾದ ಅರ್ಥ ಬರುತ್ತದೆ.