27th July 2024
Share

ಆತ್ಮಾವಾಲೋಕನ

TUMAKURU:SHAKTHIPEETA FOUNDATION

ಪ್ರತಿಯೊಬ್ಬ ಮನುಷ್ಯನು, ತಾನು ಮುಂದೆ ಎಷ್ಟು ಸಂಪಾದಿಸಬೇಕು, ನನ್ನ ಕುಟುಂಬದವರ ಭವಿಷ್ಯ ಹೇಗಿರಬೇಕು. ನಾನು ಮುಂದೆ ಯಾವ ಹುದ್ದೆ ಅಲಂಕರಿಸಬೇಕು ಎಂಬ ಬಗ್ಗೆ ಸದಾ ಚಿಂತೆ ಮಾಡುತ್ತಾನಂತೆ.

ನಾನು ಏಕೆ ಹುಟ್ಟಿದೆ,

ನನ್ನ ಕರ್ತವ್ಯ ಏನು?

ನಾನು ಏನು ಮಾಡಬೇಕಿತ್ತು,

ಏನು ಮಾಡುತ್ತಿದ್ದೇನೆ.

ಮುಂದೆ ಉಳಿದ ಅವಧಿಯಲ್ಲಿ ಏನು ಮಾಡಬೇಕು?

ನನಗೆ ಬುದ್ದಿ ಬಂದಾಗಿನಿಂದ ಯಾವ ರೀತಿಯ ಜೀವನ ನಡೆಸಿದ್ದೇನೆ. ನನಗೆ ಬುದ್ದಿ ಬರುವುದಕ್ಕೆ ಮೊದಲು ಕುಟುಂಬದವರು ಹೇಳುವ ಹಾಗೆ ಯಾವ ರೀತಿ ಸಾಗಿದ್ದೇನೆ.

ಮುಂದಿನ ನನ್ನ ಜೀವನದ ಅವಧಿ ಹೇಗಿರಬೇಕು ಎನ್ನುವುದೇ ಆತ್ಮಾವಲೋಕನ.

ಸ್ಮಶಾನ ವೈರಾಗ್ಯ, ಜೀವನದಲ್ಲಿ ಕಷ್ಟ ಬಂದಾಗ, ಮನುಷ್ಯ ಕಾಯಿಲೆ ಬಿದ್ದು ಬದುಕುವುದಿಲ್ಲಾ ಎಂಬ ಮನವರಿಕೆ ಆದಾಗ, ಆತ್ಮಾವಲೋಕನ ಮಾಡಿಕೊಂಡರೂ ಜೀವನದ ಸಾರ್ಥಕತೆ ಆಗಬಹುದು ಎನ್ನುತ್ತಾರೆ ಕೆಲವರು.

ನಾನು ಈಗ ಆತ್ಮಾವಲೋಕನ ಮಾಡಿಕೊಳ್ಳುತ್ತಿರುವುದು, ನಾನು ಏಕೆ ಶಕ್ತಿಪೀಠ ಕ್ಯಾಂಪಸ್ ಆರಂಭಿಸಿದೆ.ಇದಕ್ಕೂ ನನಗೂ ಏಕೆ ಇಷ್ಟು  ಅವಿನಾಭಾವ ಸಂಭಂದ, ನಾನು ಹುಟ್ಟಿದ ದಿನದಿಂದ ನಡೆದು ಬಂದ ದಾರಿ, ಜೀವನದ ಕೊನೆಯ ಅವತಾರ, ಕ್ಯಾಂಪಸ್‍ನಲ್ಲಿ ಏನೇನು, ಎಲ್ಲೆಲ್ಲಿ ಇರಬೇಕು, ಅಂದಾಜು ಎಷ್ಟು ಖರ್ಚು ಬರಬಹುದು ಎಂಬ ಬಗ್ಗೆ ಲೈನ್ ಎಷ್ಟಿಮೇಟ್ ಮಾಡಿ, ಈ ಹಣವನ್ನು ಹೇಗೆ ಹೊಂದಿ¸ ಬಹುದು ಎಂಬ ಬಗ್ಗೆ ಕೊರೋನಾ ಪಾಸಿಟೀವ್ ಬಂದ ದಿನ, ಅಂದರೆ ದಿನಾಂಕ:14.01.2022 ರಿಂದ ದಿನಾಂಕ:26.01.2022 ರವರೆಗೂ ಆಲೋಚನೆ ಮಾಡಿ ಬರವಣಿಗೆ ಮಾಡಿದ್ದೇನೆ.

ಮೊದಲು ನನ್ನ ಧರ್ಮಪತ್ನಿ ಶ್ರೀ ಬಿ.ಸುಜಾತಕುಮಾರಿರವರಿಗೆ ಓದಲು ಕೊಟ್ಟೆ, ಅವರ ನಂತರ ಶ್ರೀ ಟಿ.ಆರ್.ರಘೊತ್ತಮರಾವ್ ಅವರಿಗೆ ಕೊಟ್ಟೆ, ಅವರಿಬ್ಬರ ಸಲಹೆ, ಅಭಿಪ್ರಾಯದೊಂದಿಗೆ  ಶಕ್ತಿಪೀಠ ಕ್ಯಾಂಪಸ್ ವಿಷನ್ ಗ್ರೂಪ್ ಜೊತೆ ಸಮಾಲೋಚನೆ ನಡೆಸಲು ಚಿಂತನೆ ನಡೆಸಿದ್ದೇನೆ.

ವಿಧ್ಯಾರ್ಥಿ ಕೆ.ಆರ್.ಸೋಹನ್ ರವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಸಮಾಲೋಚನೆ ಮಾಡಿ, ಈ ಬಗ್ಗೆ ಒಂದು ಪ್ರಾಜೆಕ್ಟ್ ವರ್ಕ್ ಅನ್ನು ಸಿದ್ಧಪಡಿಸಿ, ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಮತ್ತು ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಗೆ ಸಲ್ಲಿಸಲಿದ್ದಾರೆ.

ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಅತಿ ಹೆಚ್ಚು ಅನುದಾನ ಪಡೆದ ರಾಜ್ಯಾವಾಗಬೇಕು ಎಂಬುದು ನಮ್ಮ ಕ್ಯಾಂಪಸ್ ನಿರ್ಧಿಷ್ಟ ಗುರಿ ಆಗಿರುವುದರಿಂದ ಸರ್ಕಾರ ಮತ್ತು ಸರ್ವಪಕ್ಷಗಳ ಅಭಿಪ್ರಾಯದ ಜೊತೆಗೆ ಹಲವಾರು ಪರಿಣಿತ ತಜ್ಞರ ಸಲಹೆಗಳನ್ನು ಪಡೆಯುವುದು ಸೂಕ್ತವಾಗಿದೆ.

ಸುಮಾರು 1800 ಕ್ಕೂ ಹೆಚ್ಚಿನ ಯೋಜನೆಗಳ ಮೌಲ್ಯಮಾಪನ ಮಾಡುವುದು ಅಷ್ಟೇನು ಸುಲಭವಲ್ಲ. ಯೋಜನಾವಾರು ತಜ್ಞರ ವಿಷನ್ ಗ್ರೂಪ್ ರಚಿಸುವುದು ಸರ್ಕಾರಗಳ ಚಿಂತನೆಯಾಗಬೇಕು.

ಈ ಮಧ್ಯೆ ರಾಜ್ಯ ಸರ್ಕಾರದ ಮೂಲಕ, ಕೇಂದ್ರ ಸರ್ಕಾರದ ನೀತಿ ಆಯೋಗಕ್ಕೂ ಒಂದು ಪ್ರಸ್ತಾವನೆ ಸಲ್ಲಿಸುವ ಆಲೋಚನೆಯಿದೆ.

ಸರ್ಕಾರಗಳು ಒಪ್ಪಿದರೇ ಒಂದು ರೀತಿ ಶಕ್ತಿಪೀಠ ಕ್ಯಾಂಪಸ್, ಸರ್ಕಾರಗಳು ಒಪ್ಪದೇ ಇದ್ದಲ್ಲಿ ಇನ್ನೊಂದು ರೀತಿ ಶಕ್ತಿಪೀಠ ಕ್ಯಾಂಪಸ್ ಎರಡು ಪರಿಕಲ್ಪನಾ ವರದಿ ಗಳನ್ನು ಏಕಕಾಲದಲ್ಲಿ ಸಿದ್ಧಪಡಿಸಲು ಚಿಂತನೆಯಿದೆ.

ನಮ್ಮ ಪ್ರಾಜೆಕ್ಟ್ ರಿಯಲ್ ಟೈಮ್/ಲೈವ್ ಪ್ರಾಜೆಕ್ಟ್ ಆಗಿರುವುದರಿಂದ  108 ಶಕ್ತಿಪೀಠಗಳ, 12 ಜ್ಯೀತಿರ್ಲಿಂಗಗಳ ಮತ್ತು 3 ಸಾಯಿಬಾಬಾ ಪೂಜಿಸಿ, ಅವರ ಸಮ್ಮುಖದಲ್ಲಿ ನನ್ನ ಆತ್ಮಾವಲೋಕನ ಹೀಗಿದೆ ನೋಡಿ.

ಸೂಕ್ತ ಸಲಹೆಗೆ ಸದಾ ಆಹ್ವಾನವಿದೆ. ನಿಜಕ್ಕೂ ರಾಜ್ಯದ, ದೇಶದ ಮತ್ತು ವಿಶ್ವದ ಮೂಲೆ ಮೂಲೆಗಳಿಂದ   ಹಲವಾರು ಜನರ ಸಲಹೆ, ಅಭಿಪ್ರಾಯ ನನಗೆ ಸ್ಪೂರ್ತಿ ತರುತ್ತಿದೆ. ಪಾರದರ್ಶಕತೆಗೆ ಒತ್ತು ನೀಡುವುದು ಒಂದು ಪ್ರಮುಖ ಉದ್ದೇಶ.