3rd December 2022
Share

TUMAKURU:SHAKTHIPEETA FOUNDATION

ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದೊಡ್ಡ ಬಸವರಾಜು ರವರೊಂದಿಗೆ ರಾಜ್ಯದಲ್ಲಿ ಎಫ್.ಡಿ.ಐ ಹೂಡಿಕೆ ಬಗ್ಗೆ ಮತ್ತು ದೆಹಲಿಯಲ್ಲಿರುವ ಉದ್ಯೋಗ ಮಿತ್ರ ಕಚೇರಿಯ ಕಾರ್ಯವೈಖರಿ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಉಪನಿದೇಶಕರುಗಳಾದ ಶ್ರೀಮತಿ ಮಂಜುಳರವರು ಮತ್ತು ಶ್ರೀ ಮಧುರವರೊಂದಿಗೂ ಚರ್ಚೆ ನಡೆಸಲಾಯಿತು. ಕರ್ನಾಟಕ ರಾಜ್ಯದಲ್ಲಿ ಆರಂಭದಿಂದ ಇಲ್ಲಿಯವರೆಗೂ ಜಿಲ್ಲಾವಾರು ಎಫ್.ಡಿ.ಐ ಮಂಜೂರಾತಿ ಮತ್ತು ಹೂಡಿಕೆ ಬಗ್ಗೆ ಹಾಲಿ ಇರುವ ಮಾಹಿತಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ಇನ್ವೆಸ್ಟ್ ಫೋರಂ ಮತ್ತು ನಮ್ಮ ಬಳಿ ಬೆರಳ ತುದಿಯಲ್ಲಿ ಮಾಹಿತಿ ಇರಬೇಕು.ಕೇಂದ್ರ ಸರ್ಕಾರದ ವೆಬ್‍ಸೈಟ್ ನೋಡಿ ಎನ್ನುವ ಉತ್ತರ ಸರಿಯಲ್ಲ. ಆದ್ದರಿಂದ ಎಲ್ಲಾ ಮಾಹಿತಿಗಳನ್ನು ಒಂದೆಡೆ ಸಂಗ್ರಹ ಮಾಡಲು ಎಂಡಿಯವರು ಸಲಹೆ ನೀಡಿದರು.