23rd June 2024
Share

TUMKURU:SHAKTHIPEETA FOUNDATION

ತುಮಕೂರಿÀನಲ್ಲಿ ಕೇಂದ್ರ ಅಂತರ್ಜಲ ಅಭಿವೃದ್ಧಿ ಮಂಡಳಿಯವರು ಮತ್ತು ರಾಜ್ಯ ಸರ್ಕಾರದ ಸಣ್ಣ ನೀರಾವರಿ ಇಲಾಖೆಯವರು 75 ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಒಂದು ಕಾರ್ಯಕ್ರಮ ಆಯೋಜಿಸಿದ್ದರು.

ನಾನು ಅಂದು ಪ್ರಶ್ನೆ ಮಾಡಿದ ಪ್ರಮುಖ ಅಂಶ OBSERVATURY BORE WELL  ಜಿಲ್ಲೆಗೋ, ತಾಲ್ಲೋಕಿಗೋ ಒಂದು ಇದ್ದರೆ ಏನು ಪ್ರಯೋಜನ, ಭೂಮಿ ಹಜ್ಜೆಗೆ ಒಂದು ಅಂಗ, ಹಳ್ಳಿ ರೈತನೇ ಹೇಳುತ್ತಾನೆ ನಮ್ಮೂರಿನಲ್ಲಿ ಈ ರೀತಿ ಬಂಡೆ ಈ ಭಾಗದಲ್ಲಿ ಇದೆ ಎಂದು.

ಅವರಿಗೆ ಬೋರ್ ವೆಲ್ ಕೊರೆಸಿ, ಕೊರೆಸಿ ಅನುಭವವಾಗಿದೆ. ಊರಿನಲ್ಲಿ ಹಲವಾರು ಬೋರ್ ವೆಲ್ ಒಣಗಿವೆ, ನೂರಾರು ಬೋರ್ ವೆಲ್ ಗಳು ಇವೆ. ಆ ಗ್ರಾಮದ ಭೂಮಿಯ ಬಂಡೆಗಳಿಗೆ ಅನುಗುಣವಾಗಿ OBSERVATURY BORE WELL  ಆಯ್ಕೆಮಾಡಬೇಕು ಎಂದು ಪ್ರತಿಪಾದಿಸಿದ್ದೆ.

ನಿಜಕ್ಕೂ ಅಟಲ್ ಭೂಜಲ್ ಯೋಜನೆಯಲ್ಲಿ ಊರಿಗೊಂದು ಫೇಲ್ ಭೋರ್ ವೆಲ್ ಅನ್ನು OBSERVATURY BORE WELL  ಆಯ್ಕೆ ಮಾಡಲು ಸಿದ್ಧತೆ ನಡೆಸಿರುವುದು ಸ್ವಾಗಾತಾರ್ಹ. ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಮತ್ತು ಕಾರ್ಯದರ್ಶಿ ಶ್ರೀ ಮೃತ್ಯುಂಜಯ ಸ್ವಾಮಿರವರಿಗೆ ಕೋಟಿ ನಮನಗಳು.

ಆದರೇ ಡಾಟಾ ಸಂಗ್ರಹಿಸಲು ಎನ್.ಜಿ.ಓ ಗಳಿಗೆ ನೀಡುವ ಬದಲು ಆ ಬೋರ್ ವೆಲ್ ಮಾಲೀಕರಿಗೆ  ಅಥವಾ ಆಯಾ ಊರಿನ ನರೇಗಾ ಜಾಬ್ ಕಾರ್ಡ್ ಇರುವವರಿಗೆ ನೀಡಿ, ಊರಿಗೊಬ್ಬ ಬೋರ್ ವೆಲ್ ಮಿತ್ರ ಆಯ್ಕೆ ಮಾಡಿ, ಅವರಿಗೆ ಉದ್ಯೋಗ ನೀಡಿದಂತಾಗುತ್ತದೆ. ಜೊತೆಗೆ ಆ ಊರಿನಲ್ಲಿ ಅಂತರ್ಜಲ ಯಾವ ಆಟ ಆಡುತ್ತದೆ ಎಂದು ಮನವರಿಕೆ ಆಗುತ್ತದೆ.

ಅಂಗನವಾಡಿ ಆಯಾಗಳು ಕೇಂದ್ರ ಸರ್ಕಾರ ನೀಡಿರುವ  ಮೊಬೈಲ್ ಹೇಗೆ ಬಳಸುತ್ತಿದ್ದಾರೆ ನೋಡಿ. ಇದೊಂದು ರೈತರ ಸಹಬಾಗಿತ್ವದ ಯೋಜನೆ ಮಾಡಿ ಎಂದು ಅಟಲ್ ಭೂ ಜಲ್ ಯೋಜನಾ ನಿರ್ದೇಶಕರಿಗೆ ಸಲಹೆ ನೀಡಲಾಗಿದೆ.