25th July 2024
Share

TUMAKURU:SHAKTHIPEETA FOUNDATION

ದಿನಾಂಕ:04.05.2001 ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಜನ್ಮ ದಿನ, ಇಂದಿಗೆ 21 ವರ್ಷ ಪೂರೈಸಿದೆ.ಯಾವುದೇ ಹಗರಣ ಮಾಡದ, ಆಸ್ತಿ ಮಾಡದ, ಬ್ಯಾಂಕ್ ಬ್ಯಾಲೆನ್ಸ್ ಹೊಂದದ, ಸದಸ್ಯತ್ವ ಹಣ ಸ್ವೀಕರಿಸದ, ದೇಣಿಗೆ ಸಂಗ್ರಹ ಮಾಡದ, ಸರ್ಕಾರಿ ಅನುದಾನ ಪಡೆಯದ, ಸಭೆ ಸಮಾರಂಭ ಮಾಡದ, ಲಕ್ಷಾಂತರ ಜನರ ನಿದ್ದೆ ಗೆಡಿಸಿದ ಏಕೈಕ ಸಂಸ್ಥೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಎಂದರೆ ತಪ್ಪಾಗಲಾರದು.

ಸಾವಿರಾರು ಚಿಂತನಾ ಸಭೆಗಳು ನಡೆದಿವೆ, ನೂರಾರು ಪ್ರತಿಭಟನಾ ಸಭೆಗಳು ನಡೆದಿವೆ,ಹಲವಾರು ಸರ್ಕಾರಿ ಯೋಜನೆಗಳ ಸಾಧಕರಾಗಿರುವುದು ಹೆಮ್ಮೆ ತಂದಿದೆ.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಕೇಂದ್ರಕ್ಕೆ ಮಾತ್ರ, ತುಮಕೂರು ವಿಶ್ವವಿದ್ಯಾನಿಲಯಕ್ಕೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಪರವಾಗಿ ರೂ 50 ಲಕ್ಷ ಹಣವನ್ನು ಜಲಸಂಪನ್ಮೂಲ ಇಲಾಖೆ ಪಾವತಿಸಿದೆ. ಆದರೂ ವಿಶ್ವ ವಿದ್ಯಾಲಯ ಉಲ್ಟಾ ಹೊಡೆದು ಫೋರಂ ಸಹಭಾಗಿತ್ವ ಪಡೆಯದೆ ಇರುವುದು ಒಂದು ದೌರ್ಭಾಗ್ಯ. ನನಗಂತೂ ಬೇಸರವಿಲ್ಲ.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಜನ್ಮ ತಾಳಿದ್ದು ಒಂದು ಇತಿಹಾಸ, ಅಂದು ತುಮಕೂರು ಲೋಕಸಭಾ ಸದಸ್ಯರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ 60 ವರ್ಷ ತುಂಬಿದ ದಿನ, ಅವರ ಭಕ್ತರೆಲ್ಲಾ ಸೇರಿ ಬಹು ದೊಡ್ಡ ಸಮಾರಂಭ ಮಾಡಬೇಕು ಎಂದು ಆಲೋಚನೆ ನಡೆಸುತ್ತಿದ್ದರು.

ನಾನು ತುಮಕೂರಿನ ಉಧ್ಯಾನ ವನಗಳಿಗೆ ಗಿಡ ಹಾಕಬೇಕು ಎಂದು ಪರಿತಪಿಸುತ್ತಿದ್ದೆ. ಉಪ್ಪಾರಹಳ್ಳಿ ರೈಲ್ವೆ ಮೇಲು ಸೇತುವೆ ಮಾಡಬೇಕು ಎಂದು ಹೋರಾಟಗಳು ನಡೆದಿದ್ದವು. ತುಮಕೂರು ನಗರಸಭೆ ಸಂಸದರಿಗೆ ಸ್ಪಂಧಿಸದ ರೀತಿ ಅಂದು ಇತ್ತು. ನನಗೆ ರೋಸಿ ಹೋಗಿ, ಇಂಥಹ ಆಡಳಿತದ ವಿರುದ್ಧ ಒಂದು ಪ್ರಭಲವಾದ ಹೋರಾಟ ಸಂಸ್ಥೆ ಕಟ್ಟಬೇಕೆನ್ನುವ ಪರಿಕಲ್ಪನೆಯೇ ಫೋರಂ ಉದಯವಾಯಿತು.

ನಾಚಿಕೆ ಎಂದರೆ ಅಂದಿನಿಂದ 21 ವರ್ಷ ನಿರಂತರವಾಗಿ ಶ್ರಮಿಸುತ್ತಿದ್ದರೂ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಉಧ್ಯಾನವನಗಳ ಜಿಐಎಸ್ ಲೇಯರ್ ಮಾಡಲು ಇನ್ನೂ ಸಾಧ್ಯಾವಾಗಿಲ್ಲ.

ಬಸವರಾಜ್ ರವರು  5 ಭಾರಿ ಸಂಸದರಾಗಿದ್ದಾರೆ, ಅವರ ಮಗ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಒಂದು ಭಾರಿ ಶಾಸಕರಾಗಿದ್ದಾರೆ. 21 ವರ್ಷಗಳ ಹೋರಾಟಕ್ಕೆ ಮುಂದಿನ ತಿಂಗಳು 5 ನೇ ತಾರೀಖು ನಡೆಯುವ ವಿಶ್ವ ಪರಿಸರ ದಿನ ಇವರಿಬ್ಬರ ನಾಯಕತ್ವದಲ್ಲಿ ಮೂಹೂರ್ತ ನಿಗದಿಯಾಗಿದೆ.

ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕರವರಿಗೆ ಸಂಸದರ ಎದುರೇ ಹೇಳಿದ್ದೇನೆ, ತುಮಕೂರು ನಗರದ ಉಧ್ಯಾನವನಗಳ ಇತಿಹಾಸ ಸಹಿತ ಜಿ.ಐ.ಎಸ್ ಲೇಯರ್ ಪೂರ್ಣಗೊಳಿಸಿದರೆ, ದಿನಾಂಕ:05.06.2022 ರಂದು ನಡೆಯುವ ವಿಶ್ವಪರಿಸರ ದಿವಸ ಶ್ರಮಿಸಿದವರಿಗೆಲ್ಲಾ ಸನ್ಮಾನ.

ಇಲ್ಲವಾದರೆ ಅಪಮಾನದ ಜೊತೆಗೆ ಜಿಐಎಸ್ ಲೇಯರ್ ಪೂರ್ಣಗೊಳ್ಳವವರಿಗೂ ನಿರಂತರ ಅಪಮಾನದ ಸಭೆಗಳು ನಡೆಯಲಿವೆ, ಎಂದು ಮನವರಿಕೆ ಮಾಡಿದ್ದೇನೆ, ಸಂಸದರು ಮತ್ತು ಶಾಸಕರು ಇಬ್ಬರೂ ಸಹ ಖಡಕ್ ಆಗಿ ಸೂಚನೆ ನೀಡಿದ್ದಾರೆ.

ಉದ್ಯಾನವನಗಳಿಗೆ ಗಿಡಹಾಕಿ, ತಂತಿ ಬೇಲಿಹಾಕಲು ಅಂದಾಜು ಪಟ್ಟಿ ಸಿದ್ಧಪಡಿಸಲು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ಸೂಚಿಸಿದ್ದಾರೆ, ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ನಿರ್ಣಯವೂ ಆಗಿದೆ.

ಕಾದು ನೋಡೋಣ?

ಬಹುಷಃ ಅಂದೇ ಫೋರಂ ನಿಂದ ನಾನು ನಿರ್ಗಮಿಸಲು ನಿರ್ಣಯ ಮಾಡಿದ್ದೇನೆ. ಬಹಳ ಸಲ ಯೋಚಿಸಿದ್ದರೂ ವಿಧಿ ಇಲ್ಲದೆ ಫೋರಂ ನಲ್ಲಿ ಮುಂದುವರೆದಿದ್ದೇನೆ. ಶಕ್ತಿಪೀಠ ಫೌಂಡೇಷನ್ ಕಾರ್ಯಕ್ರಮಗಳ ಒತ್ತಡದಿಂದ ಬೇರೆ ಯಾವೊಂದೂ ಸಂಸ್ಥೆಯಲ್ಲಿಯೂ ಕಾರ್ಯ ನಿರ್ವಹಿಸದಿರಲು ಚಿಂತನೆಯಿದೆ.

ಶಕ್ತಿಪೀಠ ಫೌಂಡೇಷನ್ ಗೆ ದೇಣಿಗೆ ಸಂಗ್ರಹಿಸುವುದು ಒಂದು ಕಡೆಯಾದರೆ, ವಿಶ್ವದ 7 ದೇಶಗಳಲ್ಲೂ ಪ್ರವಾಸ, ರಾಜ್ಯದ 31 ಜಿಲ್ಲೆಗಳಲ್ಲೂ ಪ್ರವಾಸ, ದೇಶದ 37 ರಾಜ್ಯಗಳಲ್ಲೂ ಪ್ರವಾಸ ನನಗೆ ಸಮಯದ ಆಭಾವ ಸೃಷ್ಠಿಸಿದೆ.

ಪಲಿತಾಂಶ ಏನೇ ಆಗಲಿ, ಶಕ್ತಿಪೀಠ ಕ್ಯಾಂಪಸ್ ಒಂದು ಬಹುದೊಡ್ಡ ಸವಾಲಾಗಿದೆ ಎಂದರೆ ತಪ್ಪಾಗಲಾರದು.