22nd December 2024
Share

TUMAKURU:SHAKTHIPEETA FOUNDATION

ನನ್ನ ರಾಜಕೀಯ ಗುರು ಮಾಜಿ ಲೋಕಸಭಾ ಸದಸ್ಯ ದಿ. ಕೆ.ಲಕ್ಕಪ್ಪನವರು ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ವಿಚಾರ ವಿನಿಮಯ ಮಾಡಿಕೊಂಡರು.

ಅವರು ದಿನಾಂಕ:01.06.2022 ರಂದು ತುಮಕೂರು ಸಾಯಿಬಾಬಾ ದೇವಾಲಯದಲ್ಲಿ ನಡೆದ ಜಿ.ಎಸ್.ಬಸವರಾಜ್ ರವರ ಅಭಿನಂದನಾ ಗ್ರಂಥದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜಿ.ಎಸ್.ಬಸವರಾಜ್ ರವರ ಅಭಿನಂದನಾ ಗ್ರಂಥz ಸಂಪಾದಕ ಮಂಡಳಿಯನ್ನು ವಿದ್ಯಾವಾಚಸ್ಪತಿ ಶ್ರೀ ಕವಿತಾ ಕೃಷ್ಣಾರವರ ಅಧ್ಯಕ್ಷತೆಯಲ್ಲಿ ರಚಿಸಲು ಸಭೆಯಲ್ಲಿ ಭಾಗವಹಿಸಿದ್ದವರು ಸರ್ವಾನುಮತದಿಂದ ತೀರ್ಮಾನಿಸಿದರು.

ಶ್ರೀ ಕವಿತಾ ಕೃಷ್ಣಾರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕುಂದರನಹಳ್ಳಿ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಬಾಪೂಜಿ ಬಸವಯ್ಯನವರು, ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಪ್ಪನವರು,ಮಾಜಿ ಶಾಸಕರಾದ ಶ್ರೀ ಗಂಗಹನುಮಯ್ಯನವರು, ಶ್ರೀ ಟಿ.ಆರ್.ರಘೋತ್ತಮರಾವ್ ರವರು, ಬಿಜೆಪಿ ನಾಯಕರಾದ ಶ್ರೀ ಶಿವಪ್ರಸಾದ್ ರವರು, ಬೇವಿನ ಮರದ ಸಿದ್ಧಪ್ಪನವರು, ಶ್ರೀ ಪರಮಶಿವಯ್ಯನವರು ಮಾತನಾಡಿದರು. ಸಾಯಿ ಶ್ರೀ ಗುರುಸಿದ್ಧಪ್ಪನವರು ವಂದಿಸಿದರು. ಜಿಲ್ಲಾಧ್ಯಂತ ಹಲವಾರು ಪ್ರಮುಖರು ಭಾಗವಹಿಸಿದ್ದರು.

  1. ಜಿ.ಎಸ್.ಬಸವರಾಜ್ ರವರ ಅಭಿನಂದನಾ ಗ್ರಂಥ ಸಂಪಾದಕ ಮಂಡಳಿ
  2. ಅಭಿವೃದ್ಧಿ ಡಿಜಿಟಲ್ ಗ್ರಂಥಾಲಯ ಉಪ ಸಮಿತಿ
  3. ಅಭಿವೃದ್ಧಿ ಗ್ರಂಥಾಲಯ ಉಪಸಮಿತಿ
  4. ಯೂಟ್ಯೂಬ್ ಚಾನಲ್ ಉಪಸಮಿತಿ
  5. ಜಿ.ಎಸ್.ಬಸವರಾಜ್ ರವರ ಅಭಿನಂದನಾ ಸಮಾರಂಭ ಸಮಿತಿ
  6. ಸಮಾರಂಭದ ವಿವಿಧ ಉಪಸಮಿತಿಗಳು.
  7. ವಿವಿಧ ಯೋಜನಾವಾರು ಸಂವಾದ ಸಮಿತಿ.
  8. ಸಂಸದರ ಮ್ಯೂಸಿಯಂ ಸಮಿತಿ.
  9. ಜಲಗ್ರಂಥ ರಥ ಸಮಿತಿ

ಈ ಮೇಲ್ಕಂಡ ವಿವಿಧ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸುವವರು, ಸಾಯಿಬಾಬಾ ಸಮಿತಿಯ ಶ್ರೀ ಗುರುಸಿದ್ಧಪ್ಪನವರು, ಸಂಸದರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಉಮಾಶಂಕರ್, ಶ್ರೀ ಲೋಕೇಶ್, ಶ್ರೀ ವಿಶ್ವನಾಥ್, ಶ್ರೀ ಹರೀಶ್, ರವರಲ್ಲಿ ತಮ್ಮ ಹೆಸರು, ವಿಳಾಸ, ಕಾರ್ಯನಿರ್ವಹಿಸಲು ಆಸಕ್ತಿ ಇರುವ ಸಮಿತಿ ಮತ್ತು ತಮ್ಮ ಇತ್ತೀಚಿನ ಫೋಟೋದೊಂದಿಗೆ ಆಸಕ್ತರು ದಿನಾಂಕ:30.06.2022 ರೊಳಗೆ ನೊಂದಾಯಿಸಿಕೊಳ್ಳಲು ಮನವಿ.

ಜಿ.ಎಸ್.ಬಸವರಾಜ್ ರವರ ಅಭಿಮಾನಿಗಳು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಸೇವೆ ಸಲ್ಲಿಸಲು ನೊಂದಾಯಿಸಿಕೊಳ್ಳಬಹುದು.