13th June 2024
Share

HAL# VANDITHA SHARMA IAS – ಮುಖ್ಯ ಕಾರ್ಯದರ್ಶಿ # TUMAKURU AIRPORT

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿರುವ ಶ್ರೀಮತಿ ವಂದಿತಾ ಶರ್ಮರವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೋಕಿನ ಹೆಚ್.ಎ.ಎಲ್ ಘಟಕದ ಮಂಜೂರಾತಿಗೆ ಶ್ರಮಿಸಿದವರು. ಅವರು ಮೂಲಭೂತ ಸೌಕರ್ಯ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯಾಗಿದ್ದಾಗ ಅವರಿಗೆ ಈ ಅವಕಾಶ ಸಿಕ್ಕಿತ್ತು.

ಆಗ ತುಮಕೂರು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯಾಗಿದ್ದ ಶ್ರೀಮತಿ ಶಾಲಿನಿ ರಜನೀಶ್ ರವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೋಕಿನ ಹೆಚ್.ಎ.ಎಲ್ ಘಟಕದ ಮಂಜೂರಾತಿಗೆ ಶ್ರಮಿಸಿದವರು.

ಆಗ ದೆಹಲಿಯಲ್ಲಿ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಆಗಿದ್ದ ಶ್ರೀಮತಿ ವಂದನಾ ಗುರ್ನಾನಿಯವರು ದೆಹಲಿ ಮಟ್ಟದಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೋಕಿನ ಹೆಚ್.ಎ.ಎಲ್ ಘಟಕದ ಮಂಜೂರಾತಿಗೆ ಶ್ರಮಿಸಿದವರು.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು 2014 ರ ಚುನಾವಣೆಯಲ್ಲಿ ಸೋತರು. ಕೇಂದ್ರ ರಕ್ಷಣಾ ಸಚಿವರಾದ ಶ್ರೀ ಮನೋಹರ್ ಪರಿಕ್ಕರ್ ರವರು ಗುಬ್ಬಿ ತಾಲ್ಲೋಕಿನ ಹೆಚ್.ಎ.ಎಲ್  ಘಟಕವನ್ನು ಗೋವಾಕ್ಕೆ ಶಿಪ್ಟ್ ಮಾಡುವ ಸುದ್ದಿ ಹರಡಿತ್ತು.

ಇಲ್ಲೇ ಘಟಕ ಉಳಿಸಿಕೊಳ್ಳಲು ದೆಹಲಿಯಲ್ಲಿ ಲಾಭಿ ಮಾಡಲು ಜಿ.ಎಸ್.ಬಿ ರವರನ್ನು ಕರೆದಾಗ ಅವರು, ಆಗ ತಾನೆ ಸೋತಿದ್ದ ಕಹಿ ನೆನಪು ನಾನು ಬರುವುದಿಲ್ಲಾ ಎಂದು ಖಡಕ್ ಆಗಿ ಹೇಳಿದರು.

ವಿಧಿ ಇಲ್ಲದೆ ನಾನೇ ದೆಹಲಿಯಲ್ಲಿ 15 ದಿವಸ  ಕ್ಯಾಂಪ್ ಹಾಕಿ, ರಾಜ್ಯದ 28 ಜನ ಲೋಕಸಭಾ ಸದಸ್ಯರು ಮತ್ತು 12 ಜನ ರಾಜ್ಯಸಭಾ ಸದಸ್ಯರಿಂದ ಪತ್ರ ಬರೆಸಲು ಚಿಂತನೆ ನಡೆಸಿದೆ. ಆಗ ನನ್ನ ಸಹಾಯಕ್ಕೆ ಬಂದವರು ಈ ಮೂರು ಜನ ಮಹಿಳಾ ಐಎಎಸ್ ಅಧಿಕಾರಿಗಳು. ಅವರವರ ಹಂತದಲ್ಲಿ ಸಂಪೂರ್ಣ ಸಹಕರಿಸಿದವರು. ಇವರ ಜೊತೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿರವರು ಮತ್ತು ಶ್ರೀ ಗಂಗಾಧರಯ್ಯನವರ ಸಹಕಾರ ಸ್ಮರಣೀಯ.

 ಶ್ರೀಮತಿ ಶಾಲಿನಿರಜನೀಶ್ ಅವರು ಅಂದು ನನಗೆ ನೀಡಿದ ಸಹಕಾರವನ್ನು ನಾನು ಜೀವನ ಪೂರ್ತಿ ಮರೆಯಲಾರೆ. ಈಗ ಶ್ರೀಮತಿ ವಂದಿತಾ ಶರ್ಮರವರು ತುಮಕೂರು ಏರ್ ಪೋರ್ಟ್ ಸ್ಥಾಪನೆಗೆ ಅದೇ ರೀತಿ ಸಹಕಾರ ನೀಡಲು ಈ ಮೂಲಕ ಬಹಿರಂಗ ಮನವಿ.

ನಾನು ದೆಹಲಿಯಲ್ಲಿ ಪ್ರತಿ ದಿನ ಹಲವಾರು ಕೇಂದ್ರ ಸಚಿವರ ಮನೆಗೆ ಬೇಟಿ ನೀಡಿ, ಫೋಟೋ ಕಳುಹಿಸಿದಾಗ ಶ್ರೀ ಅಯ್ಯರ್ ರವರು ಮತ್ತು ಶ್ರೀ ವಿಶ್ವನಾಥ್ ರವರು ತುಮಕೂರಿÀನ ಮಾಧ್ಯಮಗಳಲ್ಲಿ ಸುದ್ಧಿ ಬರುವಂತೆÀ ಸಹಕಾರ ನೀಡುತ್ತಿದ್ದರು.

ಶ್ರೀ ಜಿ.ಎಸ್.ಬಸವರಾಜ್ ರವರು ಸಾಯಿ ಗುರುಸಿದ್ಧಪ್ಪನವರಿಗೆ ಮತ್ತು ದೆಹಲಿಯಲ್ಲಿರುವ ಶ್ರೀ ಮುರುಳೀಧರ್ ನಾಯಕ್ ರವರೊಂದಿಗೆ ಮಾತನಾಡಿ,  ಅವನು ಜಮೀನು ಮಾರಿಕೊಂಡಾನೂ ಉಷಾರು ಅಂತ ಹೇಳ್ರಿ, ಇಷ್ಟು ಸಾರಿ ದೆಹಲಿಗೆ ಓಡಾಡಲು ಮತ್ತು ಅಲ್ಲಿ ವಾರಗಟ್ಟಲೆ ತಂಗಲು ಕಡಿಮೆ ಖರ್ಚು ಬರುತ್ತದಾ ಎಂದು ಹೇಳುತ್ತಿದ್ದರಂತೆ.

ಆದರೆ ನನಗೆ ಇದೇ ಒಂದು ಜೂಜಾಟದಂತೆ ತಲೆ ಕೆಟ್ಟಿತ್ತು. ನನ್ನ ಧರ್ಮಪತ್ನಿ ಶ್ರೀಮತಿ ಬಿ.ಸುಜಾತಕುಮಾರಿ, ನನ್ನ ಮಗ ಚಿ.ಕೆ.ಆರ್.ಸೋಹನ್, ಮಗಳು ಶ್ರೀಮತಿ ಇಂಚರ ನೀನು ಮನೆಯಲ್ಲಿ ಕೊರಗುವುದು ನೋಡಲು ಸಾಧ್ಯಾವಿಲ್ಲ. ಎಷ್ಟೇ ಖರ್ಚಾಗಲಿ ನಿನಗೆ ತಿಳಿದಿದ್ದು ಮಾಡಿ, ಶಕ್ತಿದೇವತೆ ಇದ್ದಾಳೆ ಎಂದು ಬೆನ್ನು ತಟ್ಟುತ್ತಿದ್ದ ಸಮಯ ನೆನಸಿ ಕೊಂಡರೆ ಬೆಲೆ ಕಟ್ಟಲು ಸಾಧ್ಯಾವಿಲ್ಲ.

ಶ್ರೀ ಟಿ.ಆರ್.ರಘೋತ್ತಮರಾವ್ ರವರು ಮತ್ತು ಶ್ರೀ ಬಸವರಾಜ್‍ರವರಿಗೆ ಪ್ರತಿದಿನ ಯಾರು ಯಾರನ್ನು ಭೇಟಿ ಮಾಡಿದೆ ಎಂಬ ವರದಿ ನೀಡಬೇಕಾಗಿತ್ತು. ನಿಜಕ್ಕೂ ಆ ಹೆಚ್.ಎ.ಎಲ್ ಹೋರಾಟ ವರ್ಣನೆ ಮಾಡಲು ಸಾಧ್ಯಾವಿಲ್ಲ.