TUMAKURU:SHAKTHIPEETA FOUNDATION
ನಾನು ಈ ದಿನ ಬರೆದ ಆರ್ಟಿಕಲ್ ನೋಡಿದ ಶ್ರೀ ಕೆ.ಜೈಪ್ರಕಾಶ್ ರವರು ಕೆಂಡಾಮಂಡಲವಾಗಿದ್ದಾರೆ. ನಾನು ಇವರಿಗೆ ಈ ರೀತಿ ಸಿಟ್ಟು ಬರುತ್ತದೆ ಎಂದು ಗೊತ್ತಾಗಿದ್ದು ಈ ದಿನವೇ?
ನಮ್ಮ ತಂದೆ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ, ನಾನು ಡಾಕ್ಟರ್ ಆಗ ಬೇಕು ಎಂಬ ಕನಸು ಕಂಡಿದ್ದೆ. ಆದರೇ ಒಬ್ಬ ಇಂಜಿನಿಯರ್ ಆಗಿ ಉತ್ತಮ ಸೇವೆ ಸಲ್ಲಿಸಿದ ಹೆಮ್ಮೆ ನನಗಿದೆ.
ನನಗೂ ರಾಜಕೀಯಕ್ಕೂ ಭೂಮಿಗೂ- ಆಕಾಶಕ್ಕೂ ಇರುವಷ್ಟು ಅಂತರವಿದೆ. ನಾನು ಕನಸು ಮನಸ್ಸಿನಲ್ಲೂ ರಾಜಕೀಯದ ಬಗ್ಗೆ ಚಿಂತೆ ಮಾಡಿಲ್ಲ, ಇನ್ನೂ ಮುಂದೆಯೂ ಮಾಡಲ್ಲ. ನೀವೂ ಈ ರೀತಿ ಬರೆದಿರುವುದು ನನಗೆ ಬೇಸರ ಮತ್ತು ಸಿಟ್ಟು ತಂದಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
‘ವಿದ್ಯಾರ್ಜನೆ ಮತ್ತು ತಾಂತ್ರಿಕತೆ ಬಗ್ಗೆ ಸಾಕಷ್ಟು ಕೆಲಸ ಮಾಡಬೇಕೆಂಬ ಆಸೆ ನನಗೆ ಇದೆ, ಈ ಬಗ್ಗೆ ಈಗಾಗಲೇ ನಾನು ಆಲೋಚನೆ ನಡೆಸುತ್ತಿದ್ದೇನೆ ಎಂಬ ಅಭಿಪ್ರಾಯ ಹಂಚಿಕೊಂಡರು’.
ನಾನು ಇಂದಿನಿಂದ ವ್ಯಕ್ತಿಗತವಾಗಿ, ಯಾರೊಬ್ಬರ ಬಗ್ಗೆಯೂ ಬರೆಯ ಬಾರದೆಂಬ ದೃಢ ನಿರ್ಧಾರಕ್ಕೆ ಬರಬೇಕಾಯಿತು. ಅಭಿವೃದ್ಧಿ ವಿಚಾರ ಬಿಟ್ಟರೇ, ನನಗೇಕೆ ಈ ಉಸಾಬರಿ ಎನಿಸಿತು.ಸುಮ್ಮನೆ ಹಾದೀಲಿ ಹೋಗೊ ಮಾರಮ್ಮನನ್ನು ಮನೆಗೆ ಕರೆದ ಹಾಗಾಯಿತು, ಈ ನನ್ನ ಲೇಖನ. ಅವರು ಡಿಲೀಟ್ ಮಾಡಲು ಹೇಳಿದರೆ, ಆ ಲೇಖನವನ್ನೆ ಡಿಲೀಟ್ ಮಾಡುತ್ತೇನೆ.
ಜೊತೆಗೆ ಸುಖಾ ಸುಮ್ಮನೆ ಕೀಟಲೆ ಮಾಡುತ್ತಿರುವವರ ಬಾಯಿ ಮುಚ್ಚಿಸಿದ ಹಾಗಾಯಿತು.