28th January 2026
Share

TUMAKURU:SHAKTHIPEETA FOUNDATION

ನಾನು ಈ ದಿನ ಬರೆದ ಆರ್ಟಿಕಲ್ ನೋಡಿದ ಶ್ರೀ ಕೆ.ಜೈಪ್ರಕಾಶ್ ರವರು ಕೆಂಡಾಮಂಡಲವಾಗಿದ್ದಾರೆ. ನಾನು ಇವರಿಗೆ ಈ ರೀತಿ ಸಿಟ್ಟು ಬರುತ್ತದೆ ಎಂದು ಗೊತ್ತಾಗಿದ್ದು ಈ ದಿನವೇ?

ನಮ್ಮ ತಂದೆ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ, ನಾನು ಡಾಕ್ಟರ್ ಆಗ ಬೇಕು ಎಂಬ ಕನಸು ಕಂಡಿದ್ದೆ. ಆದರೇ ಒಬ್ಬ ಇಂಜಿನಿಯರ್ ಆಗಿ ಉತ್ತಮ ಸೇವೆ ಸಲ್ಲಿಸಿದ ಹೆಮ್ಮೆ ನನಗಿದೆ.

ನನಗೂ ರಾಜಕೀಯಕ್ಕೂ ಭೂಮಿಗೂ- ಆಕಾಶಕ್ಕೂ ಇರುವಷ್ಟು ಅಂತರವಿದೆ. ನಾನು ಕನಸು ಮನಸ್ಸಿನಲ್ಲೂ ರಾಜಕೀಯದ ಬಗ್ಗೆ ಚಿಂತೆ ಮಾಡಿಲ್ಲ, ಇನ್ನೂ ಮುಂದೆಯೂ ಮಾಡಲ್ಲ. ನೀವೂ ಈ ರೀತಿ ಬರೆದಿರುವುದು ನನಗೆ ಬೇಸರ ಮತ್ತು ಸಿಟ್ಟು ತಂದಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ವಿದ್ಯಾರ್ಜನೆ ಮತ್ತು ತಾಂತ್ರಿಕತೆ ಬಗ್ಗೆ ಸಾಕಷ್ಟು ಕೆಲಸ ಮಾಡಬೇಕೆಂಬ ಆಸೆ ನನಗೆ ಇದೆ, ಬಗ್ಗೆ ಈಗಾಗಲೇ ನಾನು ಆಲೋಚನೆ ನಡೆಸುತ್ತಿದ್ದೇನೆ ಎಂಬ ಅಭಿಪ್ರಾಯ ಹಂಚಿಕೊಂಡರು.

ನಾನು ಇಂದಿನಿಂದ ವ್ಯಕ್ತಿಗತವಾಗಿ, ಯಾರೊಬ್ಬರ ಬಗ್ಗೆಯೂ ಬರೆಯ ಬಾರದೆಂಬ ದೃಢ ನಿರ್ಧಾರಕ್ಕೆ ಬರಬೇಕಾಯಿತು. ಅಭಿವೃದ್ಧಿ ವಿಚಾರ ಬಿಟ್ಟರೇ, ನನಗೇಕೆ ಈ ಉಸಾಬರಿ ಎನಿಸಿತು.ಸುಮ್ಮನೆ ಹಾದೀಲಿ ಹೋಗೊ ಮಾರಮ್ಮನನ್ನು ಮನೆಗೆ ಕರೆದ ಹಾಗಾಯಿತು, ಈ ನನ್ನ ಲೇಖನ. ಅವರು ಡಿಲೀಟ್ ಮಾಡಲು ಹೇಳಿದರೆ, ಆ ಲೇಖನವನ್ನೆ ಡಿಲೀಟ್ ಮಾಡುತ್ತೇನೆ.

ಜೊತೆಗೆ ಸುಖಾ ಸುಮ್ಮನೆ ಕೀಟಲೆ ಮಾಡುತ್ತಿರುವವರ ಬಾಯಿ ಮುಚ್ಚಿಸಿದ ಹಾಗಾಯಿತು.