21st January 2025
Share

TUMAKURU:SHAKTHIPEETA FOUNDATION

ಇನ್ನೂ ಮುಂದೆ ಕರಾರು ವಕ್ಕಾದ ಮಾಹಿತಿಗಳನ್ನು ಒಂದೇ ಕಡೆ ಸಂಗ್ರಹ ಮಾಡುವುದೇ ನಮ್ಮ ಪ್ರಮುಖ ಬಂಡವಾಳ ಸಂಗ್ರಹಿಸಿದ ಮಾಹಿತಿ ಮೌಲ್ಯ ಮಾಪನ ಮಾಡುವ ಮೂಲಕ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ, ಪಾರದರ್ಶಕತೆ, ಅವಶ್ಯಕತೆ ಇರುವ ಯಾವ ಪಲಾನುಭವಿಯೂ ವಂಚಿತರಾಗಬಾರದು ಎಂಬ ದೃಢ ನಿರ್ಧಾರದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ರವರು ಮಾಹಿತಿ ಕಣಜ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಅವರು ದಿನಾಂಕ:04.06.2022 ರಂದು ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತುಮಕೂರು ಜಿಲ್ಲೆಯ ಮಾಹಿತಿ ಕಣಜದ ಜಿಲ್ಲಾ ಮಟ್ಟದ ಯೋಜನೆ ಮತ್ತು ಸಮನ್ವಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಭೆಯಲ್ಲಿ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಬಾಗವಹಿಸಿರುವುದೇ ಯೋಜನೆಯ ಮಹತ್ವ ಅರಿವಾಗಲಿದೆ. ತುಮಕೂರು ಜಿಲ್ಲೆ ದೇಶದ ಗಮನ ಸೆಳೆಯುವ ಕೆಲಸ ಮಾಡಲು ನಾವೆಲ್ಲಾ ಸಜ್ಜಾಗೋಣ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಇನ್ನೂ ಮುಂದೆ ಮಾಹಿತಿ ಹಕ್ಕು ಯೋಜನೆಗೆ ಅರ್ಜಿ ಹಾಕುವ ಪ್ರಮೇಯವೇ ಇಲ್ಲ, ಎಲ್ಲಾ ಮಾಹಿತಿಯೂ ಮಾಹಿತಿ ಕಣಜದಲ್ಲಿ ದೊರೆಯಲಿದೆ. ಅಧಿಕಾರಿಗಳ ಸಮಯವೂ ಸಾಕಷ್ಟು ಉಳಿಯಲಿದೆ. ಬೆರಳ ತುದಿಯಲ್ಲಿ ಪ್ರತಿ ಗ್ರಾಮದ ಮಾಹಿತಿ ದೊರೆಯಲಿದೆ , ಇದೊಂದು ಮಹತ್ತರವಾದ ಬದಲಾವಣೆ ಎಂದರು.

ಮಾಹಿತಿ ಕಣಜ ಯೋಜನೆಯ ಬಗ್ಗೆ ಪಿಪಿಟಿ ಪ್ರದರ್ಶನ ಮಾಡುವ ಮೂಲಕ ಯೋಜನೆಯ ಬಗ್ಗೆ ಮಾಹಿತಿ ಕಣಜ ಇ ಆಡಳಿತ ಕೇಂದ್ರದ ಯೋಜನಾ ನಿರ್ದೇಶಕರಾದ ಶ್ರೀವ್ಯಾಸ್ ರವರು ಎಳೆ,ಎಳೆಯಾಗಿ ಯೋಜನೆಯ ಬಗ್ಗೆ ಮನವರಿಕೆ ಮಾಡಿದರು.

ಕರ್ನಾಟಕ ರಾಜ್ಯದಲ್ಲಿ ಚಿಕ್ಕಬಳ್ಳಾಪುರ, ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಆಯ್ದ ಗ್ರಾಮ ಪಂಚಾಯಿತಿಗಳನ್ನು ಫೈಲಟ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಗುಬ್ಬಿ ತಾಲ್ಲೋಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡು,   ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಡಿಜಿಟೈಲ್ ಡೈಲಾಗ್ ಕಾರ್ಯ ಕ್ರಮವನ್ನು ದಿನಾಂಕ:14.06.2022 ರಂದು ನಡೆಸುವ ಮೂಲಕ ಜನತೆಯ ಮನೆ ಬಾಗಿಲಿಗೆ ಮಾಹಿತಿ ಕಣಜ ಯೋಜನೆಯನ್ನು  ಕೊಂಡೊಯ್ಯುವ ಚಿಂತನೆ ನಮ್ಮದಾಗಿದೆ ಎಂದು ವಿವರಿಸಿದರು.

ದೇಶದಲ್ಲಿ ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಮಾತ್ರ ಮಾಹಿತಿ ಕಣಜ ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ರವರು ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಬಗ್ಗೆ ಮೌಲ್ಯ ಮಾಪನ ಮಾಡಲು ಮುಂದಾಗಿದ್ದಾರೆ.

 ಅವರು ಕೈಗೊಂಡಿರುವ ಕೇಂದ್ರ ಜಲಶಕ್ತಿಯೋಜನೆ ಗಳ ಮಾಹಿತಿಯನ್ನು ರಾಜ್ಯಾಧ್ಯಾಂತ ಫೈಲಟ್ ಯೋಜನೆಯಾಗಿ ಶೇ 100 ಮಾಹಿತಿ ಸಂಗ್ರಹ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ನಾವು ಕಳೆದ 3 ವರ್ಷದಿಂದ ದಿಶಾ ಸಮಿತಿ ಸಭೆಯಲ್ಲಿ ಜಿಐಎಸ್ ಲೇಯರ್, ರಿಯಲ್ ಟೈಮ್ ಡಾಟಾ ಸಂಗ್ರಹದ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವು.

ಈಗ ಸರ್ಕಾರವೇ ರಾಜ್ಯ ಮಟ್ಟದಲ್ಲಿ ಈ ಯೋಜನೆ ಜಾರಿಗೆ ತಂದಿರುವುದು ಹೆಮ್ಮೆಯ ವಿಚಾರ. ದುಡಿಯುವುದರ ಜೊತೆಗೆ ಗಳಿಸಿದ ಹಣದ ಮಿತ ಬಳಕೆ ಬಹಳ ಮುಖ್ಯ. ನಾವು ಸರಿಯಾದ ಡಾಟಾ ಸಂಗ್ರಹ ಮಾಡುವುದರಿಂದ, ರಾಜಕೀಯ ಒತ್ತಡಗಳಿಗೆ ಸಿಕ್ಕಿ ಅಧಿಕಾರಿಗಳು ಅನಗತ್ಯ ಕೋಟಿಗಟ್ಟಲೇ ಖರ್ಚು ಮಾಡುವ ಪ್ರಮೇಯಕ್ಕೆ ನಾಂದಿ ಆಡಲಿದೆ. ಇದರಿಂದ ಬಹುದೊಡ್ಡ ಪ್ರಯೋಜನವಾಗಲಿದೆ ಎಂದರು.

ಇಡೀ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ನದಿ ನೀರಿನ ಮೌಲ್ಯ ಮಾಪನ ಮಾಡಲು ಡಾಟಾ ಪ್ರಮುಖ ಅಸ್ತ್ರ ಎಂದು ವಿವರಿಸಿದರು.

ಜಿಲ್ಲಾ ಪಂಚಾಯತ್ ಸಿಇಓ ಶ್ರೀಮತಿ ವಿದ್ಯಾಕುಮಾರಿರವರು ಮಾತನಾಡಿ, ನಾವು ಈಗಾಗಲೇ ತುಮಕೂರು ಜಿಐಎಸ್ ಪೋರ್ಟಲ್ ಆರಂಭಿಸಿದ್ದೇವೆ, ಎನ್.ಆರ್.ಡಿ.ಎಂ.ಎಸ್ ಮೂಲಕ ರಾಜ್ಯದಲ್ಲಿ ಹೆಚ್ಚಿಗೆ ಜಿಐಎಸ್ ಲೇಯರ್ ಮಾಹಿತಿ ಸಂಗ್ರಹ ಮಾಡಿದ್ದೇವೆ.

ತುಮಕೂರು ಎನ್.ಐ.ಸಿ ಯಲ್ಲಿ ಇದೇ ರೀತಿ ಪೋರ್ಟಲ್ ಮಾಡಿ, ಮಾಹತಿ ಸಂಗ್ರಹಿಸುವ ಕಾರ್ಯ ಮಾಡಲು ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವಕ್ಕೆ ರಾಜ್ಯ ಸರ್ಕಾರದ ಯೋಜನೆಯ ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತು.

ಈಗ ಸರ್ಕಾರದ ಹಂತದಲ್ಲಿ ಯೋಜನೆ ಜಾರಿ ನಮಗೆ ಪೂರಕವಾಗಿದೆ. ದೇಶದಲ್ಲಿಯೇ ಮಾದರಿ ಯಾಗಿ ಈ ಯೋಜನೆಯನ್ನು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೈಗೊಳ್ಳಲು ಎಲ್ಲಾ ಇಲಾಖಾ ಅಧಿಕಾರಿಗಳ  ಒಂದು ತಂಡವಾಗಿ ಕಾರ್ಯ ನಿರ್ವಹಿಸುವ ಬಗ್ಗೆ ವಿವರಿಸಿದರು.

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಹಾಗೂ ಶಕ್ತಿಪೀಠ ಫೌಂಡೇಷನ್ ನ ಕುಂದರನಹಳ್ಳಿ ರಮೇಶ್ ಮಾತನಾಡಿ, ರೋಗಿ ಬಯಸಿದ್ದು ಹಾಲು ಅನ್ನವೈಧ್ಯರು ಹೇಳಿದ್ದು ಹಾಲು ಅನ್ನ ಎಂಬ ಗಾದೆ ನನಗೆ ನನೆಪಿಗೆ ಬರುತ್ತದೆ. ನನUಂತೂ ಈ ಯೋಜನೆಯ ಮಹತ್ವ ಬಹಳ ಖುಷಿ ತಂದಿದೆ ಎಂದರು.

ಸುಮಾರು 34 ವರ್ಷಗಳಿಂದ ಅಭಿವೃದ್ಧಿ ಸಂಶೋಧನಾ ಆಂದೋಲನದಲ್ಲಿ ಸಕ್ರೀಯವಾಗಿ ಶ್ರಮಿಸುತ್ತಿದ್ದೇನೆ, ಈ ಮಾಹಿತಿ ಕಣಜ ಯೋಜನೆ ಮತ್ತು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಮುಖಾಂತರ ಜಿಐಎಸ್ ಲೇಯರ್ ಕಡ್ಡಾಯ ಗೊಳಿಸಿದರೆ ವಾರ್ಷಿಕವಾಗಿ ಸರ್ಕಾಕ್ಕೆ ಕೋಟಿಗಟ್ಟಲೇ ಹಣ ಉಳಿತಾಯ ವಾಗಲಿದೆ ಎಂಬ ರಹಸ್ಯದ ಬಗ್ಗೆ ವಿವರಿಸಿದರು. 

ಮಾಹಿತಿ ಕಣಜದ ಪ್ರಯೋಜವನ್ನು ತುಮಕೂರು ಜಿಲ್ಲೆ ಇಡೀ ರಾಷ್ಟ್ರಕ್ಕೆ  ಮಾದರಿಯಾಗಿ ಕೊಂಡೊಯ್ಯುವ ಕೆಲಸವನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಈ ಸಮತಿ ಮಾಡಲಿದೆ ಎಂಬ ಆಶಯ ವ್ಯಕ್ತ ಪಡಿಸಿದರು.

ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀ ಸಿದ್ಧರಾಮೇಗೌಡರವರು, ಭಾಗವಹಿಸಿದ್ದ ಸದಸ್ಯರು, ಗುಬ್ಬಿ ಇಓ ಶ್ರೀ ನರಸಿಂಹಯ್ಯನವರು ಮತ್ತು ಮಾರಶೆಟ್ಟಿಹಳ್ಳಿ ಪಿಡಿಓ ಶ್ರೀಮತಿ ತನುಜರವರು ಎಲ್ಲಾ ರೀತಿಯ ಸಹಕಾರ ನೀಡುವ ಮೂಲಕ ಮಾಹಿತಿ ಕಣಜ ಯೋಜನೆಯ ಯಶೋಗಾಧೆಗೆ ಶ್ರಮಿಸುವುದಾಗಿ ಘೋಶಿಸಿದರು.