22nd December 2024
Share

TUMAKURU:SHAKTHIPEETA FOUNDATION

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಕನಸಿನ ಸಂಸದರ ಆದರ್ಶ ಗ್ರಾಮ ಯೋಜನೆ ಯಡಿ, ಭಾರತ ದೇಶದ ಇತಿಹಾಸದಲ್ಲಿ ಇದೂವರೆಗೂ ಯಾವೊಬ್ಬ ಸಂಸದರು ತುಮಕೂರು ಲೋಕಸಭಾ ಕ್ಷೇತ್ರದ ರೀತಿಯಲ್ಲಿ 5 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು, ಶ್ರಮಿಸಿದ ಉದಾಹರಣೆಗಳು ಇಲ್ಲ ಎಂದು ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರು ತಿಳಿಸಿದರು.

ಅವರು ದಿನಾಂಕ:04.06.2022 ರಂದು ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಂಸದರ ಆದರ್ಶ ಗ್ರಾಮ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಭೆಯ

 ರಾಜ್ಯದಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿ ಸುತ್ತಿರುವ  ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ತುಮಕೂರು ಮಂಚೂಣಿಯಲ್ಲಿದೆ. ಶ್ರೀ ಜಿ.ಎಸ್.ಬಸವರಾಜ್ ರವರು ಇನ್ನೂ ಮುಂದೆ ಹೋಗಿ ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಸಭೆ ನಡೆಸಿ, 5 ಗ್ರಾಮ ಪಂಚಾಯತ್ ಗಳ

  1. ಸಂಸದರ ಆದರ್ಶ ಗ್ರಾಮದ ನೋಡೆಲ್ ಆಫೀಸರ್
  2. ತಾಲ್ಲೋಕು ಪಂಚಾಯತ್ ಇಓ
  3. ಪಿಡಿಓ
  4. ಗ್ರಾಮ ಪಂಚಾಯತ್ ಸದಸ್ಯರು.
  5. ಲೈನ್ ಡಿಪಾರ್ಟ್ ಮೆಂಟ್

ಗಳಿಗೆ RANKING ನೀಡಲು ಮುಂದಾಗಿದ್ದಾರೆ.

ಗ್ರಾಮ ಪಂಚಾಯಿತಿಯವಾರುÀ ಮಾಹಿತಿ ಕಣಜ ಮತ್ತು ಜಿಐಎಸ್ ಲೇಯರ್ ವಾರು ಮೌಲ್ಯ ಮಾಪನ ಮಾಡುವ ಮೂಲಕ, ಮಾಹಿತಿ ಕಣಜದ ಅಧಿಕಾರಿಗಳು ಮತ್ತು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಅಧಿಕಾರಿಗಳು ರ್ಯಾಂಕಿಂಗ್ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು ಸಂಸದರು ಸೂಚಿಸಿದ್ದಾರೆ.

ಸಂಸದರ ಆದರ್ಶ ಗ್ರಾಮ ಯೋಜನೆ ಮಾರ್ಗದರ್ಶಿ ಸೂತ್ರದಂತೆ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಂಡ ಯೋಜನೆಗಳಿಗೆ, ಎಲ್ಲಾ ಇಲಾಖೆಗಳ ಸಮನ್ವಯತೆ ಸಾಧಿಸಿಕೊಂಡು ಯೋಜನೆಗಳ ಮಂಜೂರಾತಿಗೆ ಶ್ರಮಿಸಲು ಜಿಲ್ಲಾಧಿಕಾರಿಯವರಾದ  ಶ್ರೀ ವೈ.ಎಸ್.ಪಾಟೀಲ್ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಿಇಓ ಶ್ರೀಮತಿ ವಿದ್ಯಾಕುಮಾರಿರವರು ಮುಂದಿನ ಸಭೆ ವೇಳೆಗೆ ಯಾವ, ಯಾವ ಯೋಜನೆಗಳನ್ನು ಕೈಗೊಳ್ಳ ಬೇಕು ಎಂಬ ಪಟ್ಟಿ ಮಾಡಿಸುವ ಮೂಲಕ ಪ್ರತಿ ಸಭೆಗೂ ಟಾರ್ಗೆಟ್ ನೀಡಿದ್ದಾರೆ.

ಮಾಹಿತಿ ಕಣಜದ ಯೋಜನಾ ನಿರ್ದೇಶಕರಾದ ಶ್ರೀವ್ಯಾಸ್ ರವರು ಮಾತನಾಡಿ, ಈ ಐದು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲಾ ಮಾಹಿತಿಯನ್ನು ಅಫ್‍ಡೇಟ್ ಮಾಡುವ ಮೂಲಕ ಮಾದರಿ ಯೋಜನೆಗೆ ಸಹಕರಿಸುವುದಾಗಿ ತಿಳಿಸಿದರು.ನಮಗೆ ವಿವಿಧ ಇಲಾಖೆಗಳ ಪೋರ್ಟಲ್ ನಿಂದ ದೊರೆಯದ ಮಾಹಿತಿಗಳನ್ನು ಅಪ್ ಲೋಡ್ ಮಾಡುವುದರ ಜೊತೆಗೆ, ಹಾಲಿ ಅಪ್ ಲೋಡ್ ಮಾಡಿರುವ ಡಾಟಾಗಳು ಸರಿ ಇವೆಯೇ ಎಂಬುದಾಗಿ ಆಯಾ ಇಲಾಖೆಗಳು ಡೃಡೀüಕರಿಸ ಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯ ಮೇಲೆ ನಿಲ್ಲಿಸಿ 5 ಗ್ರಾಮಪಂಚಾಯತ್‍ಗಳ ನೋಡೆಲ್ ಆಫೀಸರ್, ಪಿಡಿಓ ಗಳು ಪ್ರತಿಜ್ಞೆ ಮಾಡುವ ಮೂಲಕ ದೇಶದಲ್ಲಿಯೇ ಮಾದರಿ ಆದರ್ಶ ಗ್ರಾಮ ಪಂಚಾಯಿತಿ ಮಾಡುವ ಪ್ರಯತ್ನಕ್ಕೆ ಚಾಲನೇ ನೀಡಿದ್ದಾರೆ.

ಸೇವಾ ಮನೋ ಭಾವದಿಂದ ಸೇವೆ ಸಲ್ಲಿಸುವ ಗ್ರಾಮ ಪಂಚಾಯಿತಿವಾರು ಸಂಘ ಸಂಸ್ಥೆಗಳ, ಪರಿಣಿತರು ಮತ್ತು ಜ್ಞಾನಿಗಳನ್ನು ಯೋಜನೆಯ ಯಶಸ್ಸಿಗೆ ಶ್ರಮಿಸಲು ಅವಕಾಶ ನೀಡಲು ಮಾರ್ಗದರ್ಶಿ ಸೂತ್ರದಲ್ಲಿ ಇರುವುದರಿಂದ ಅವರ ಸೇವೆ ಪಡೆಯಲು ಕುಂದರನಹಳ್ಳಿ ರಮೇಶ್ ಸಲಹೆ ನೀಡಿದ್ದಾರೆ.

  ವಿವಿಧ ಮಟ್ಟದ ಅಧಿಕಾರಿಗಳು ಹಾಜರಿದ್ದರು.