22nd December 2024
Share

TUMAKURU: SHAKTHIPEETA  FOUNDATION

ವಿಶ್ವ ಪರಿಸರ ದಿನಾಚರಣೆ ದಿವಸ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಗಿಡಗಳನ್ನು ಹಾಕಿಸಿ, ಡಿಡಿಪಿಐ ಶ್ರೀ ನಂಜಪ್ಪನವರು ಪೋಟೋ ಕಳುಹಿಸಿದ್ದಾರೆ, ಇವರಿಗೊಂದು ಹಸಿರು ಸಲಾಂ.

ತಾವು ಹಲವಾರು ಶಾಲೆಗಳಲ್ಲಿ ಗಿಡ ಹಾಕಿಸಿ, ಫೋಟೋ ಕಳುಹಿಸಿದ್ದೀರಿ ಧನ್ಯವಾದಗಳು. ತುಮಕೂರು ತಾಲ್ಲೋಕು ಹೆಗ್ಗೆರೆ ಶಾಲೆಯ ‘ಇಂಚರ ಹಸಿರು ಪಡೆ ತಂಡಕ್ಕೂ ಹಸರು ಜೈ.

ಒಂದು ಹಸಿರು ಆಪ್ ಈಗಾಗಲೇ ಸಿದ್ಧವಾಗಿದೆ. ಜಿಲ್ಲೆಯ ಪ್ರತಿ ಶಾಲಾ ಆವರಣದಲ್ಲಿ, ಎಷ್ಟು ಮರಗಿಡಗಳಿವೆ ಎಂಬ ಬಗ್ಗೆ ಡಿಜಿಟಲ್ ಡಾಟಾ ವನ್ನು ಮಕ್ಕಳಿಂದ ಮಾಡಿಸಿ, ಈ ಹಸಿರು ಆಪ್ ನಲ್ಲಿ ಮಕ್ಕಳ ಫೋಟೋ ಸಹಿತ ಗಿಡಗಳನ್ನು ಡಿಜಿಟಲ್ ಗಣತಿ’ ಮಾಡಬಹುದು. ಈ ಮಾಹಿತಿಯನ್ನು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಮತ್ತು ಮಾಹಿತಿ ಕಣಜದ ಪೋರ್ಟಲ್ ನಲ್ಲಿ ಅಫ್ ಲೋಡ್ ಮಾಡಿಸಲು ಪ್ರಯತ್ನಸಿ ಸಾರ್.

ನಾನು ಜಿಲ್ಲೆಯ ವಿವಿಧ ಇಲಾಖಾ ಅಧಿಕಾರಿಗಳಿಂದ ನೀರಿಕ್ಷೆ ಮಾಡುವುದು ಇಷ್ಟೆ, ತುಮಕೂರು ಜಿಲ್ಲೆಯನ್ನು ಡಾಟಾ ಜಿಲ್ಲೆ ಯಾಗಿ ಘೋಶಿಸಲು ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯ ಕೈಗೊಂಡಿರುವದರಿಂದ ಪಕ್ಕಾ ಮಾಹಿತಿ ಮೌಲ್ಯ ಮಾಪನ ಮಾಡಿಸಿ. ಈಗ ಈ ಹೆಸರನ್ನು ಮಾಹಿತಿ ಕಣಜ ಜಿಲ್ಲೆ: ತುಮಕೂರು ಎಂದು ಬದಲಾಯಿಸ  ಬೇಕೇನೋ, ಈ ಹೆಸರು ವಿಷಯವನ್ನು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರಿಗೆ ಬಿಡೋಣ.

ತುಮಕೂರು ಜಿಲ್ಲೆಯವರೇ ಆದ, ಪ್ರಾಥಮಿಕ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ್ ರವರು ಗ್ರಾಮ ಪಂಚಾಯಿತಿಗೊಂದು ಹೈಟೆಕ್ ಶಾಲೆ ಯೋಜನೆ ಜಾರಿ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.

 ಈ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ಮಾರಶೆಟ್ಟಿಹಳ್ಳಿಯಲ್ಲಿ ದಿನಾಂಕ:14.06.2022 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಡಿಜಿಟಲ್ ಡೈಲಾಗ್ ಕಾರ್ಯಕ್ರಮದಲ್ಲಿ, ಮಾರಶೆಟ್ಟಿಹಳಿಗ್ರಾಮ ಪಂಚಾಯಿತಿಯ ಎಲ್ಲಾ ಶಾಲೆಗಳ ರಿಯಲ್ ಟೈಮ್ ಡಾಟಾ ಸಂಗ್ರಹ ಮಾಡಿ, ಮಾಹಿತಿ ಕಣಜದಲ್ಲಿ ಅಪ್ ಲೋಡ್ ಮಾಡಿ, ಗ್ರಾಮ ಪಂಚಾಯಿತಿಗೊಂದು ಹೈಟೆಕ್ ಶಾಲೆ   ಸ್ಥಾಪಿಸುವ ಮೌಲ್ಯಮಾಪನ ವರದಿಯನ್ನು ಸರ್ಕಾರಕ್ಕೆ ಮಕ್ಕಳಿಂದಲೇ ಶಿಫಾರಸ್ಸು ಮಾಡಿಸೋಣ.

ಡಿಜಿಟಲ್ ಡೈಲಾಗ್ ಕಾರ್ಯ ಕ್ರಮ ಎಂದರೆ, ಪಲಿತಾಂಶವೂ ಇರಬೇಕಲ್ಲವೇ. ಇದೊಂದು ವಿನೂತನ ಬೆಳವಣಿಯಾಗಲಿ ಸಾರ್.