13th November 2024
Share

TUMAKURU:SHAKTHI PEETA FOUNDATION

ಕೇಂದ್ರ ಸರ್ಕಾರದ ಇಂಧನ ಇಲಾಖೆ ದೇಶಾಧ್ಯಾಂತ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ  DISTRICT ELECTRICITY COMMITTEE(DEC) ಯನ್ನು ರಚಿಸಲು  ಸೂಚಿಸಿದೆ.

ದಿನಾಂಕ:16.09.2021 ರಂದೇ DISTRICT ELECTRICITY COMMITTEE(DEC) ಗೆ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಿ, ದೇಶದ ಎಲ್ಲಾ ರಾಜ್ಯಗಳ ಅಧಿಕಾರಿಗಳಿಗೆ ಪತ್ರ ಬರೆದಿದೆ.

ಮತ್ತೆ ದಿನಾಂಕ:02.03.2022 ರಂದು DISTRICT ELECTRICITY COMMITTEE(DEC) ಗೆ ಪರಿಷ್ಕøತ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಿ, ದೇಶದ ಎಲ್ಲಾ ರಾಜ್ಯಗಳ ಅಧಿಕಾರಿಗಳಿಗೆ ಪತ್ರ ಬರೆದಿದೆ.

ದಿನಾಂಕ:31.05.2022 ರಂದು ಈ ಬಗ್ಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೂ ಪತ್ರ ಬರೆದಿದ್ದಾರೆ. ಬಹುತೇಕ ದೇಶದ ಎಲ್ಲಾ ಸಂಸದರಿಗೂ ಇದೇ ರೀತಿ ಪತ್ರ ಬರೆದಿದ್ದಾರೆ.

ಒಂದು ನಾಚಿಕೆಗೇಡಿನ ಸಂಗತಿ ಎಂದರೆ, ಈ ಬಗ್ಗೆ ಇದೂವರೆಗೂ ಯಾವುದೇ ಅಧಿಕಾರಿ, ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರ ಬಳಿ ಬಂದು ಈ ಬಗ್ಗೆ ಚರ್ಚೆ ಮಾಡಿಲ್ಲ.ಬಹುತೇಕ ರಾಜ್ಯದ ಎಲ್ಲಾ ಸಂಸದರ ಅನುಭವವೂ ಇದೇ ಆಗಿರಬಹುದು?

ಈ ಬಗ್ಗೆ ರಾಜ್ಯದ 28 ಜನ ಲೋಕಸಭಾ ಸದಸ್ಯರು ಮತ್ತು 12 ಜನ ರಾಜ್ಯಸಭಾ ಸದಸ್ಯರು ರಾಜ್ಯದ ಜನತೆ ಮುಂದೆ ಸ್ಪಷ್ಟಪಡಿಸುವುದು ಅಗತ್ಯವಾಗಿದೆ.

ಮಾನ್ಯ ಇಂಧನ ಸಚಿವರಾದ ಶ್ರೀ ಸುನಿಲ್ ಕುಮಾರ್ ರವರೇ, ಕೇಂದ್ರದಲ್ಲಿರುವ ನಿಮ್ಮದೇ ಸರ್ಕಾರದ ಆದೇಶವನ್ನು ಎಷ್ಟರ ಮಟ್ಟಿಗೆ ರಾಜ್ಯದಲ್ಲಿ ಜಾರಿಗೆ ತರಲಾಗಿದೆ, ಬಹಿರಂಗವಾಗಿ ಸ್ಪಷ್ಟಪಡಿಸಲು ಡಿಜಿಟಲ್ ಮನವಿ.

ಈ ಆದೇಶ ಜಾರಿಗೊಳಿಸಿದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೂ ಮತ್ತು ಇಂಧನ ಸಚಿವರಾದ ಶ್ರೀ ಆರ್.ಕೆ.ಸಿಂಗ್ ರವರಿಗೂ ದೇಶದ ಜನತೆಯ ಪರವಾಗಿ ಅಭಿನಂದನೆಗಳು.

ಆದೇಶವನ್ನು ಇದೂವರೆಗೂ ಸಂಸದರ ಗಮನಕ್ಕೆ ತರದ ಅಧಿಕಾರಿಗಳಿಗೂ ದೇವರು ಒಳ್ಳೆಯ ಬುದ್ಧಿ ಕೊಡಲಿ?

ತುಮಕೂರು ಜಿಲ್ಲಾ ವಿದ್ಯುತ್ ಸಮಿತಿ ರಚಿಸಲು ಶ್ರೀ.ಜಿ.ಎಸ್.ಬಸವರಾಜ್ ರವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.