22nd December 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಇಲಾಖೆಯಡಿ ಇರುವ NWDA ಡೈರೆಕ್ಟರ್ ಜನರಲ್ ರವರಾದ ಶ್ರೀ ಭೂಪಾಲ್ ಸಿಂಗ್ ರವರೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರ ಸರ್ಕಾರದ ನದಿ ಜೋಡಣೆ ಮತ್ತು ರಾಜ್ಯದ ನದಿ ಜೋಡಣೆ ಬಗ್ಗೆ ಸಮಾಲೋಚನೆ ನಡೆಸಿದರು.

ರಾಜ್ಯ ಸರ್ಕಾರ ಯಾವುದೇ ಯೋಜನೆ ಬಗ್ಗೆ ಸ್ಪಷ್ಟ ಅಭಿಪ್ರಾಯ ನೀಡದೇ ಇದ್ದಲ್ಲಿ ಕೇಂದ್ರ ಸರ್ಕಾರ ಯಾವುದೇ ದೃಢ ನಿರ್ಧಾರ ಕೈಗೊಳ್ಳಲು ಸಾಧ್ಯಾವಿಲ್ಲ ಎಂದು ಡೈರೆಕ್ಟರ್ ಜನರಲ್ ಖಡಕ್ ಆಗಿ ತಿಳಿಸಿದರು. ಕೇಂದ್ರ ಸರ್ಕಾರ ಪತ್ರ ಬರೆದರೆ ತಿಂಗಳುಗಳು ಕಳೆದರೂ ರಾಜ್ಯ ತನ್ನ ನಿಲುವನ್ನು ತಿಳಿಸುವುದಿಲ್ಲ. ನಾವು ಹೇಗೆ ನಿರ್ಧಾರ ಕೈಗೊಳ್ಳುವುದು ಎಂಬ ಧಾಟಿಯಲ್ಲಿ ಇತ್ತು ಅವರ ಅನಿಸಿಕೆ.

ಬಸವರಾಜ್ ರವರು ಕೇಂದ್ರ ಸರ್ಕಾರ ನದಿ ಜೋಡಣೆಯಲ್ಲಿ ನಮ್ಮ ರಾಜ್ಯದ ನೀರಿನ ಪಾಲಿನ ಹಂಚಿಕೆಯನ್ನು ಇದೂವರೆಗೂ ಏಕೆ ಸ್ಪಷ್ಟ ಪಡಿಸುತ್ತಿಲ್ಲ ಎಂದು ಅಷ್ಟೆ ಖಡಕ್ ಆಗಿ ಪ್ರಶ್ನೆ ಮಾಡುವ ಮೂಲಕ ಯೋಜನೆಯ ಮಹತ್ವದ ಬಗ್ಗೆ ಮತ್ತು ರಾಜ್ಯಕ್ಕೆ ಪದೇ, ಪದೇ ನೀರಾವರಿ ಯೋಜನೆಗಳಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಮನವರಿಕೆ ಮಾಡಿದರು.

ಒಂದು ರೀತಿಯಲ್ಲಿ ನ್ಯಾಯಾಲಯದಲ್ಲಿ ವಾದಿ- ಪ್ರತಿವಾದಿಗಳ ಚರ್ಚೆಯಂತೆ ಇತ್ತು. ಬಸವರಾಜ್ ರವರು ಬಹಳ ದಿನಗಳ ನಂತರ, ಬಹಳ ಮನ ನೊಂದು ಏರು ಧ್ವನಿಯಲ್ಲಿಯೇ ಪಾಯಿಂಟ್ ಟು ಪಾಯಿಂಟ್ ಚರ್ಚೆ ಮಾಡಿದ್ದು ಬಹಳ ಅದ್ಭುತವಾಗಿತ್ತು.

ಕೇಂದ್ರ ಜಲಶಕ್ತಿ ಸಚಿವಾಲಯದಿಂದ ಕರ್ನಾಟಕ ರಾಜ್ಯ ಹೆಚ್ಚಿಗೆ ಅನುದಾನ ಪಡೆಯುವ ಬಗ್ಗೆ ಸ್ಟ್ರಾಟಜಿ ಮಾಡುತ್ತಿರುವ ಶಕ್ತಿಪೀಠ ಫೌಂಡೇಷನ್ ಸಿಇಓ ಹಾಗೂ ಡಾಟಾ ವಿಜ್ಞಾನಿ ಕೆ.ಆರ್.ಸೋಹನ್, ಎಸ್.ಇ. ಶ್ರೀ ಮೋಹರ್, ಶ್ರೀ ಬಿಂದರ್ ಇದ್ದರು.

ಕೇಂದ್ರ ಸರ್ಕಾರದ ವಿವಿಧ ನದಿ ಜೋಡಣೆಯಿಂದ ರಾಜ್ಯಕ್ಕೆ ಆಗುವ ಪ್ರಯೋಜನ ಮತ್ತು ಅನಾನುಕೂಲದ ಬಗ್ಗೆ ಯೋಜನಾವಾರು ಚರ್ಚೆ ಮಾಡುವ ಅಗತ್ಯ ಇದೆ. ಸರಣೆ ಲೇಖನ ಮಾಡಲು ಪರಿಣಿತರಿಂದ ಮಾಹಿತಿ ಸಂಗ್ರಹ ಆರಂಭ ಮಾಡಲಾಗಿದೆ.

ನನ್ನ ಅನಿಸಿಕೆಗಿಂತ ರಾಜ್ಯ ಸರ್ಕಾರದ ಚಿಂತನೆಗೆ ಅನುಗುಣವಾಗಿ ಪ್ರತಿಪಾದಿಸುವುದು ಸೂಕ್ತವಾಗಿದೆ. ಚರ್ಚೆಯ ಎಲ್ಲಾ ಅಂಶಗಳ ಬಗ್ಗೆ ಬರೆಯುವುದು ರಾಜ್ಯದ ಹಿತದೃಷ್ಠಿಯಿಂದ ಒಳ್ಳೆಯದಲ್ಲ.