27th July 2024
Share

TUMAKURU:SHAKTHIPEETA FOUNDATION

ಹೌದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಈಗಾಗಲೇ ‘ಹಸಿರು ತುಮಕೂರು-1 ಮತ್ತು ಹಸಿರು ತುಮಕೂರು-2 ರ ಘೋಷಣೆ ಅಡಿಯಲ್ಲಿ ಸಿದ್ಧಗಂಗಾ ಶ್ರೀಗಳ 100 ನೇ ಜನ್ಮ ದಿನೋತ್ಸವದ ಅಂಗವಾಗಿ ತುಮಕೂರು ನಗರದಲ್ಲಿ ಸುಮಾರು 36500 ಗಿಡಗಳನ್ನು ಹಾಕಿಸಿದ್ದಾರೆ. ಅವುಗಳಲ್ಲಿ ಬಹುತೇಕ ಗಿಡಗಳು ತುಮಕೂರು ನಗರದಲ್ಲಿ ಹಸಿರು ತಾಂಡಾವಾಡುತ್ತಿದೆ ಎಂದರೆ ತಪ್ಪಾಗಲಾರದು.

ಈಗ ಮತ್ತೆ ಸಂಸದರು ‘ಹಸಿರು ತುಮಕೂರುತಂಪು ತುಮಕೂರು ಎಂಬ ಘೋಷಣೆಯಡಿ, ನಗರಾಧ್ಯಾಂತ ಗಿಡ ಹಾಕುವುದು ಮತ್ತು ನಗರದ ಎಲ್ಲಾ ಕೆರೆ-ಕಟ್ಟೆಗಳಿಗೆ ನದಿ ನೀರು ಮತ್ತು ಮಳೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ.ಅವರೊಂದಿಗೆ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸಹಕರಿಸುತ್ತಿದ್ದಾರೆ.

ದಿನಾಂಕ:18.06.2022ನೇ ಶನಿವಾರ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಅಧ್ಯಕ್ಷತೆಯಲ್ಲಿ ನಗರ ಎಂಪ್ರೆಸ್ ಕಾಲೇಜಿನ ಆವರಣದಲ್ಲಿರುವ  ಸಭಾಂಗಣದಲ್ಲಿ ಪೂರ್ವ ಭಾವಿ ಸಭೆ ನಡೆಸಲು ಶಾಸಕರು ಮತ್ತು ಸಂಸದರು ಚಿಂತನೆ ನಡೆಸಿದ್ದಾರೆ.

ನಗರದ ಪ್ರಾಥಮಿಕ ಶಾಲೆಯ ಮಕ್ಕಳಿಂದ ಆರಂಭಿಸಿ, ಪೋಸ್ಟ್ ಗ್ರಾಜುಯೇಟ್ ವಿಧ್ಯಾರ್ಥಿಗಳು ಮತ್ತು ಶಿಕ್ಷಕರು, ಉಪನ್ಯಾಸಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ಪಿಪಿಪಿ ಮಾದರಿ’ ಯಲ್ಲಿ ಗಿಡಹಾಕಲು, ಡಿಜಿಟಲ್ ಗಣತಿ ಮಾಡಲು, ನೀಡ್ ಬೇಸ್ಡ್ ಡಿಜಿಟಲ್ ಗಣತಿ ಮಾಡಲು, ಟ್ರಿಮ್ ಮಾಡಲು, ನೀರು ಹಾಕಲು, ಮುಳ್ಳು ಕಟ್ಟಲು, ಗಿಡಗಳು ಬದುಕಿವಯೇ ಎಂಬ ಬಗ್ಗೆ ಮೂರು ತಿಂಗಳಿಗೊಮ್ಮೆ ತಪಾಸಣೆ ಮಾಡಲು ವ್ಯವಸ್ಥಿತವಾಗಿ ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರ ನೇತೃತ್ವದಲ್ಲಿ ಯೋಜನೆ ರೂಪಿಸಲು ಈಗಾಗಲೇ ಬಯೋ ಡೈವರ್ಸಿಟಿ ಮ್ಯಾನೇಜ್ ಕಮಿಟಿಯ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.

ಈ ಹಿನ್ನಲೆಯಲ್ಲಿ ನಗರದ ಎಂಪ್ರೆಸ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಷಣ್ಮುಕಪ್ಪನವರು, ಶ್ರೀ ಸದಾಶಿವಯ್ಯನವರು, ಶ್ರೀ ನರಸಿಂಹಮೂರ್ತಿರವರು ಮತ್ತು ಶ್ರೀ ರಾಜಪ್ಪನವರೊಂದಿಗೆ ಸಮಾಲೋಚನೆ ನಡೆಸಲಾಯಿತು.

ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನವರು ಹಾಕಿರುವ ಹಾಳಾಗಿರುವ ಗಿಡಗಳ ವೀಕ್ಷಣೆ ಮಾಡಲಾಯಿತು.