12th October 2024
Share

TUMAKURU:SHAKTHIPEETA FOUNDATION

ಒಬ್ಬ ವ್ಯಕ್ತಿ ಕರೆ ಮಾಡಿ, ತುಮಕೂರು ಜಿಲ್ಲೆಯ ಬುಗ್ಗೆಗಳ ಮಾಹಿತಿ ನೀಡುವಿರಾ ಸಾರ್ ಎಂದು ಕೇಳಿದಾಗ. ನನಗೆ ಆಶ್ಚರ್ಯ ಆಯಿತು. ನಾನು ಅವರೊಂದಿಗೆ ಬುಗ್ಗೆ ಎಂದರೆ ಏನು ಸ್ವಾಮಿ, ನನಗೆ ಈ ಬಗ್ಗೆ ನಿಖರವಾದ ಮಾಹಿತಿ ಇಲ್ಲ ಎಂದಾಗ ಅವರು ಹೇಳಿದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ನೀರು ತನ್ನಷ್ಟಕ್ಕೆ ತಾನೇ ಉಕ್ಕಿ ಹರಿಯುವುದಕ್ಕೆ ನಾವು ಬುಗ್ಗೆ ಎನ್ನುತ್ತೇವೆ, ಸಾರ್ ಹಿಂದಿನ ಕಾಲದಲ್ಲಿ ಈ ರೀತಿ ಹರಿಯುವ ನೀರಿನಿಂದ ವ್ಯವಸಾಯ ಮಾಡಲು ಬಳಸಿಕೊಳ್ಳುತ್ತಿದ್ದರಂತೆ. ಈಗ ಅವೆಲ್ಲಾ ಬತ್ತಿ ಹೋಗಿವೆಯಂತೆ. ಈ ಬಗ್ಗೆ ನಾನು ಪಿ.ಎಚ್.ಡಿ ಮಾಡುತ್ತಿದ್ದೇನೆ, ದಯವಿಟ್ಟು ನಿಮ್ಮಲ್ಲಿರುವ ಮಾಹಿತಿ ನೀಡಿ ಸಾರ್ ಎಂದರು.

ಗುರುಗಳೇ ನನ್ನ ಬಳಿ ಈ ಬಗ್ಗೆ ಮಾಹಿತಿ ಇಲ್ಲ. ಯಾರಾದರೂ ನೀಡಿದರೆ ಅಥವಾ ಯಾವುದಾದರೂ ಇಲಾಖೆಯಲ್ಲಿ ದೊರೆತರೆ ನಿಮಗೆ ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದ್ದೇನೆ.

ಅವರು ಕೇಳಿದ ಬುಗ್ಗೆಗಳ ಬಗ್ಗೆ ಯಾರಾದರೂ ಅಧ್ಯಯನ ಮಾಡಿದ್ದರೆ, ದಯವಿಟ್ಟು ಮಾಹಿತಿ ಹಂಚಿಕೊಳ್ಳಲು ಈ ಮೂಲಕ ಬಹಿರಂಗ ಮನವಿ.