TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯಲ್ಲಿ
- ಜಯಮಂಗಲಿ.
- ನಾಗಿಣಿ
- ಸುವರ್ಣಮುಖಿ.
- ಗರುಡಾಚಲ.
- ಶಿಂಷಾ
- ಉತ್ತರ ಪಿನಾಕಿನಿ
ನದಿಗಳು ಹೆಸರಿಗೆ ಮಾತ್ರ ಇದ್ದು, ಸದಾ ಹರಿಯುವುದಿಲ್ಲ, ಎಂಬ ಮಾಹಿತಿಯನ್ನು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ದಿನಾಂಕ:16.06.2022 ರಂದು ನಡೆಸುವ ‘ಜಿಲ್ಲಾ ಜಲ ಸಂವಾದ’ ಕರಪತ್ರದಲ್ಲಿ ಹಂಚಿಕೊಂಡಿದ್ದಾರೆ.
ಈ ನದಿಗಳ ಬಗ್ಗೆ ಯಾರಾದರೂ ಅಧ್ಯಯನ ಮಾಡಿದ್ದರೆ, ಈ ನದಿಗಳು ಎಲ್ಲಿ ಹುಟ್ಟುತ್ತವೆ, ಎಷ್ಟು ದೂರ ಹರಿಯುತ್ತವೆ, ಕ್ಯಾಚ್ ಮೆಂಟ್ ಏರಿಯಾ ಎಷ್ಟು ಇದೆ, ತುಮಕೂರು ಜಿಲ್ಲೆಯಲ್ಲಿ ಉಗಮವಾಗುವ ನದಿಗಳ ಇತಿಹಾಸ ಏನು ಎಂಬ ಬಗ್ಗೆ ಸಂಶೋಧನಾ ವರದಿಗಳು, ನಕ್ಷೆಗಳು, ಕರಾರು ವಕ್ಕಾದ ಮಾಹಿತಿಗಳಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಲು ಈ ಮೂಲಕ ಬಹಿರಂಗ ಮನವಿ.