15th September 2024
Share

TUMAKURU:SHAKTHIPEETA FOUNDATION

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಕನಸಿನ ಯೋಜನೆ ಅನುಷ್ಠಾನ ಅವರ ಆತ್ಮೀಯ ಬಳಗದ  ಜೀವನದ ಗುರಿ.

ಅವರು ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ  ಅಭಿವೃದ್ದಿ ಕನಸು ಕಂಡವರು.

ಆರಂಭದಿಂದ ಅಂದರೆ ಕಳೆದ 32 ವರ್ಷಗಳಿಂದ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಬೆಂಬಲ ನೀಡುತ್ತಾ ಬಂದಿದ್ದಾರೆ.

ತುಮಕೂರಿನ ಅಪ್ನಾಸ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ. ಜೊತೆಗೆ ರಾಜ್ಯದ ಹಲವಾರು ಸಂಘಟನೆಗಳು ಶ್ರಮಿಸಿವೆ.

ಊರಿಗೊಂದು ಕೆರೆ ಕೆರೆ ನದಿ ನೀರು ಇದು ನಮ್ಮ ಘೋಷಣೆ, ಯಾರೇ ಅನ್ಯಾಯ ಮಾಡಿದರೂ ನೀರಾವರಿ ಜಗಳ ಗ್ಯಾರಂಟಿ.

ತುಮಕೂರು ಜಿಲ್ಲೆಗೆ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಚರ್ಚೆ, ಇದೊಂದು ನೀರಿನ ದಾಯಾದಿಗಳಾದÀ ರಾಜ್ಯ-ರಾಜ್ಯಗಳ, ಜಿಲ್ಲೆ-ಜಿಲ್ಲೆಗಳ, ಗ್ರಾಮ-ಗ್ರಾಮಗಳ ಜಗಳವಂತೂ ಸತ್ಯ.

ಎಲ್ಲಾ ವರ್ಗದ ಪರಿಣಿತರ ಚರ್ಚೆಗೆ ಅವಕಾಶ ಕಲ್ಪಿಸಿರುವ ತುಮಕೂರು ಜಿಲ್ಲಾ ಸಾಹಿತ್ಯ ಪರಿಷತ್ ಅದ್ಯಕ್ಷರಾದ ಶ್ರೀ ಸಿದ್ಧಲಿಂಗಪ್ಪನವರ ತಂಡಕ್ಕೆ ಅಭಿನಂದನೆ.

ಇದು ರಾಜ್ಯದ ಉಳಿದ 30 ಜಿಲ್ಲೆಗಳಿಗೂ ಮಾದರಿ ಸಭೆ ಆಗಲಿದೆ ಎಂಬ ಆಶಾಭಾವನೆ ನನ್ನದು.