18th December 2024
Share

TUMAKURU:SHAKTHIPEETA FOUNDATION

ಮಾರಶೆಟ್ಟಿಹಳ್ಳಿ ಗ್ರಾಮಪಂಚಾತಿಯಲ್ಲಿ ಮಾಹಿತಿ ಕಣಜ ವಿಶೇಷ ಗ್ರಾಮ ಸಭೆ.

ಗ್ರಾಮಪಂಚಾಯತ್ ಸದಸ್ಯರ ಒಕ್ಕೊರಿಲಿನ ಬೆಂಬಲ

ಗ್ರಾಮ ಪಂಚಾಯತ್ ಅಧ್ಯಕ್ಷ,ಉಪಾಧ್ಯಕ್ಷ ಮತ್ತು ಸದಸ್ಯರ ಕೂಗು:

ಮಾರಶೆಟ್ಟಿಹಳ್ಳಿ ಗ್ರಾಮಪಂಚಾತಿಯ ಗ್ರಾಮವರು ಮಾಹಿತಿ ಕಣಜದ ಪ್ರತ್ಯೇಕ ಮಾಹಿತಿ ನೀಡಿಸಾರ್.

ಮಾಹಿತಿ ಕಣಜದ ಯೋಜನಾ ನಿರ್ದೇಶP ಶ್ರೀವ್ಯಾಸ್ À- ನಿಮ್ಮ ಎಲ್ಲಾ ಸಲಹೆಗೆ ಸಹಕಾರದ ಭರವಸೆ.

ವಿಶೇಷ ಗ್ರಾಮಸಭೆಯ ಒಂದು ಕೈಪಿಡಿಯನ್ನೆ ಮಾಡೋಣ.

ಮಾರಶೆಟ್ಟಿಹಳ್ಳಿ ಡಿಜಿಟಲ್ ಡೈಲಾಗ್

ಜಿ.ಎಸ್.ಬಸವರಾಜ್ – ರೈತರಿಗೆ ಅನೂಕೂಲವಾಗುವ ಮಾಹಿತಿ ಕಣಜದ ಮಾಹಿತಿಗೆ ಒತ್ತು ನೀಡಿ.

ಮಾಹಿತಿ ಕಣಜದ ಯೋಜನಾ ನಿರ್ದೇಶಕ ಶ್ರೀವ್ಯಾಸ್ – ಇ-ಸಹಮತಿ ರೈತರಿಗೆ ವರದಾನ ಪ್ರಾಯೋಗಿಕವಾಗಿ ತಮ್ಮ ಜಿಲ್ಲೆಯಿಂದ ಆರಂಭಕ್ಕೆ ಸರ್ಕಾರದ ಚಿಂತನೆ ಇದೆ ಸಾರ್.

ಗ್ರಾಮಪಂಚಾಯತ್ ಸದಸ್ಯರ ಒಕ್ಕೊರಿಲಿನ ಬೆಂಬಲ

ಗ್ರಾಮವಾರು, ಕಾಲೋನಿವಾರು, ತಾಂಡಾವಾರು ವಿಷನ್ ಗ್ರೂಪ್ ರಚನೆ. ಮಾಹಿತಿ ಕಣಜದ ಪರಿಶೀಲನೆ ಮತ್ತು ಸಲಹೆಗೆ ರೂಪುರೇಷೆಗೆ ಸದಸ್ಯರ ನಿರ್ಧಾರ.

ಸಂಸದರ ಆದರ್ಶ ಗ್ರಾಮ ಬಿಸಿ ಬಿಸಿ ಚರ್ಚೆ.

ಗ್ರಾಮಪಂಚಾಯತ್ ಸದಸ್ಯರ ಒಕ್ಕೊರಿಲಿನ ಬೇಡಿಕೆ: ಮೂರು ಯಶಸ್ವಿ ಸಭೆ ಮಾಡಿದ್ದೇವೆ ಸಾರ್, ಸಂಸದರ ಅನುದಾನದ ಯೋಜನೆಯಡಿಯಲ್ಲಿ ಗ್ರಾಮವಾರು ಏನೇನು ಅಭಿವೃದ್ಧಿ ಆಗಿದೆ ಮತ್ತು ಮುಂದೆ ಆಗಲಿದೆ ತಿಳಿಸಿ ಸಾರ್.

ಜಿ.ಎಸ್.ಬಸವರಾಜ್ ರವರ ಸಲಹೆ:

ಇಲ್ಲಿ ಇಂದು ಕೇಳಿದ ಎಲ್ಲಾ ಯೋಜನೆಗಳ ಬಗ್ಗೆ,

ವಿಡಿಪಿ ಯೋಜನೆಗಳ ಬಗ್ಗೆ,

ಸಲಹಾಗಾರರಿಂದ ಜಿಐಎಸ್ ಆಧಾರಿತ ನಕ್ಷೆ ಸಿದ್ಧಪಡಿಸಿ,

ಪ್ರತಿಯೊಂದು ಇಲಾಖಾವಾರು ಯೋಜನೆಗಳ ಮಾಹಿತಿ ಸಿದ್ಧಪಡಿಸಿ.

ಗುಬ್ಬಿಯ, ತುಮಕೂರಿನ, ಬೆಂಗಳೂರಿನ ಮತ್ತು ದೆಹಲಿಯ ಯಾವ ಕಚೇರಿಯಲ್ಲಿ ಕಡತ ಬಾಕಿ ಇದೆ, ಅಲ್ಲಿಗೆ ಕುಂದರನಹಳ್ಳಿ ರಮೇಶ್ ಜೊತೆ ಭೇಟಿ ನೀಡಿ ನಿಮ್ಮ ಕೆಲಸ ಮಾಡಿಸುತ್ತೇನೆ. ನನ್ನನ್ನು ಉಪಯೋಗಿಸಿಕೊಳ್ಳಿ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕನಸಿನ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಮಾದರಿಯಾಗಿ ಮಾಡಿ.

ಮಾರಶೆಟ್ಟಿ ಗ್ರಾಮ ಪಂಚಾಯತ್ ಟೀಮ್, ಶಕ್ತಿಪೀಠ ಫಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಲಹೆ ನೀಡುವ ಎಲ್ಲಾ ಯೋಜನೆಗಳ ಮಂಜೂರಾತಿಗೆ ನನ್ನ ಬೆಂಬಲ ಸದಾ ಇರುತ್ತದೆ.

ಗ್ರಾಮಪಂಚಾಯತ್ ಸದಸ್ಯರ ಒಕ್ಕೊರಿಲಿನ ಸಹಕಾರ:  ಯಾವುದೇ ಪಕ್ಷ ರಾಜಕಾರಣ ಮಾಡದೆ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಬೆಂಬಲಿಸುತ್ತೇವೆ.

ಸಾರ್ವಜನಿಕ ಪ್ರಶ್ನೆ

ಮುಂದಿನ ಸಭೆಗೆ ಅನುಪಾಲನಾವರದಿಯನ್ನು ಮುಂಚೆಯೇ ಹಂಚಿ ಸಭೆ ಕರೆಯಿರಿ.

ಪಿಡಿಓ: ಹೌದು ಖಂಡಿತಾ ನಿಮ್ಮ ಸಲಹೆ ಸ್ವೀಕರಿಸುತ್ತೇವೆ.

ಅಧಿಕಾರಿಗಳ ಸಹಕಾರ

ಜಿಲ್ಲಾ ಪಂಚಾಯತ್ ನಿಂದ ಎಲ್ಲಾ ರೀತಿಯ ಸಹಕಾರ- ಡಾ.ಕೆ.ವಿದ್ಯಾಕುಮಾರಿ, ಸಿಇಓ ಜಿಪಂ.

ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ಕನಸಿಗೂ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ- ಶ್ರೀ ಅಜಯ್ ಕುಮಾರ್‍ರವರು. ಉಪವಿಭಾಗಾಧಿಕಾರಿ.

ತಾಲ್ಲೋಕು ಆಡಳಿತದಿಂದ ಎಲ್ಲಾ ರೀತಿಯ ಸಹಕಾರ- ಶ್ರೀಮತಿ ಆರತಿರವರು, ತಹಶೀಲ್ಧಾರ್ ಮತ್ತು ಶ್ರೀ ನರಸಿಂಹಯ್ಯನವರು ಇ.ಓ.

ವಿವಿಧ ಇಲಾಖೆಯ ಅಧಿಕಾರಿಗಳು ಸದಾ ಬೆಂಬಲ ನೀಡುವುದಾಗಿ ಘೋಷಣೆ.

ಬೆರಳ ತುದಿಯಲ್ಲಿ ಎಲ್ಲಾ ಮಾಹಿತಿ ನೀಡುವ ಭರವಸೆ: ಶ್ರೀಮತಿ ತನುಜ ಬೇನಕಟ್ಟೆ

ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಈಗಾಗಲೇ ಬಿದರೆಹಳ್ಳ ಕಾವಲ್ ನಲ್ಲಿ ಹೆಚ್.ಎ.ಎಲ್ ಘಟಕ ಆರಂಭಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಈಗ ಸಂದರ ಆದರ್ಶ ಗ್ರಾಮ ಮತ್ತು ಮಾಹಿತಿ ಕಣಜದ ಮೂಲಕ ದೇಶದ ಗಮನ ಸೆಳೆಯಲಿದ್ದಾರೆ. ಅವರ, ಗ್ರಾಮ ಪಂಚಾಯತ್ ಟೀಮ್ ನ ಮತ್ತು ಜನತೆಯ ಶೇ 100 ರಷ್ಟು ಬೇಡಿಕೆಗೆ, ಎಲ್ಲಾ ಹಂತದ ಅಧಿಕಾರಿಗಳ ಸಹಕಾರದೊಂದಿಗೆ ನಿರಂತರವಾಗಿ ಶ್ರಮ ಹಾಕುವ ಮೂಲಕ ನಿಮ್ಮ ಅನಿಸಿಕೆಗಳಿಗೆ ಶಕ್ತಿಪೀಠ ಫಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಹಾಗೂ ರಾಜ್ಯ ದಿಶಾ ಸಮಿತಿಯ ಬೆಂಬಲ ಇರಲಿದೆ, ಇದು ಶ್ರೀ ಜಿ.ಎಸ್. ಬಸವರಾಜ್ ರವರ ಚಿಂತನೆಯ ಜೊತೆಗೆ  ನನ್ನ ಕನಸಿನ ಯೋಜನೆಯೂ ಹೌದು- ಕುಂದರನಹಳ್ಳಿ ರಮೇಶ್.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಿದ್ಧರಾಮೇಗೌಡ,ಉಪಾಧ್ಯಕ್ಷರಾದ ಶ್ರೀಮತಿ ರಾಧಾಮಣಿ, ಸದಸ್ಯರುಗಳಾದ ಶ್ರೀ ನಯನ, ಶ್ರೀ ಚಂದ್ರಯ್ಯ, ಶ್ರೀ ತಿಮ್ಮಯ್ಯ, ಶ್ರೀ ಯೋಗೀಶ್, ಶ್ರೀಮತಿ ಕಲಾವತಿ, ಶ್ರೀಮತಿ ಯೋಗಿತಾ, ಶ್ರೀಮತಿ ವಿಜಯ, ಶ್ರೀಮತಿ ವಿಜಯ, ಶ್ರೀ ಎ.ಬಿ.ಶಿವಸ್ವಾಮಿ,ಶ್ರೀ ಮುನೇಶ್, ಶ್ರೀಮತಿ ಗಂಗಮ್ಮ, ಶ್ರೀ ನಾಗರಾಜ್, ಶ್ರೀ ಬಸವರಾಜ್, ಶ್ರೀಮತಿ ವನಿತಾ, ಶ್ರೀಮತಿ ಮಂಗಳಗೌರಮ್ಮ, ಶ್ರೀಮತಿ ಅನೂಸೂಯದೇವಿ, ಶ್ರೀ ಮೋಹನ್ ಕುಮಾರ್, ಶ್ರೀ ಪ್ರಸಾದ್, ಶ್ರೀಮತಿ ಜಯಮ್ಮ ನವರು ಸೇರಿದಂತೆ ಸಾರ್ವಜನಿಕರ ತಂಡ, ನೌಕರರ ತಂಡ ಯಶಸ್ವಿ ಸಭೆ ನಡೆಸಿದ್ದಕ್ಕೆ ಅಭಿನಂದನೆ.

ಶ್ರೀ ಟಿ.ಆರ್.ರಘೋತ್ತಮ ರಾವ್, ಶ್ರೀವೇದಾನಂದ ಮೂರ್ತಿ, ಶ್ರೀ ಸತ್ಯಾನಂದ್, ಶ್ರೀ ಬಸವರಾಜ್ ಸುರಣಗಿ, ಶ್ರೀ ಶಶಿಕುಮಾರ್, ಶ್ರೀ ಉಮಾಶಂಕರ್, ಪಿಪಿಪಿ ಮಾದರಿಯ ಅತ್ಯುತ್ತಮವಾದ ಮಾಸ್ಟರ್ ಪ್ಲಾನ್ ನೀಡುವ ಭರವಸೆ.

ಮಾಧ್ಯಮದವರು ಮೌಲ್ಯ ಮಾಪನ ವರದಿ ಮಾಡುವ ಮೂಲಕ ಸಾರ್ವಜನಿಕರಿಗೆ ಬೆಂಬಲ ನೀಡುವುದಾಗಿ ಸಲಹೆ.

ಮೋದಿಯವರ ಕನಸಿನ ಸಂಸದರ ಆದರ್ಶ ಗ್ರಾಮ ಯೋಜನೆಗೆ ನಮ್ಮ ಬೆಂಬಲವಿದೆ ಎಂದು ಮೋದಿ ಟೀಮ್ ಹರ್ಷ ವ್ಯಕ್ತ ಪಡಿಸಿದ್ದಾರೆ.