23rd April 2024
Share

TUMKURU:SHAKTHIPEETA FOUNDATION

ದಿನಾಂಕ:16.06.2022 ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಡೆಸಿದ, ಜಿಲ್ಲಾ ಜಲ ಸಂವಾದದಲ್ಲಿ ಮಹತ್ತರವಾದ ನಿರ್ಣಯ ಮಂಡಿಸಲಾಗಿದೆ. ನಿರ್ಣಯಗಳನ್ನು ಈ ಕೆಳಕಂಡಂತೆ ಸಿದ್ಧಪಡಿಸಿ, ಜಿಲ್ಲಾಡಳಿತದ ಮೂಲಕ, ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು ಸೂಕ್ತವಾಗಿದೆ, ಸರ್ಕಾರಗಳಿಗೆ ಸಲ್ಲಿಸುವ ಮೊದಲು ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸುವುದು ಅಗತ್ಯವಾಗಿದೆ.

ಜಲಸಂವಾದ ಘೋಷ್ಠಿಯ ನಿರ್ಣಯಗಳು ಮತ್ತು ವಿಶೇಷತೆಗಳು

 1. ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ನಿರ್ಣಯದ ಮೇರೆಗೆ ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಯನ್ನು ಪೈಲಟ್ ಯೋಜನೆಯಾಗಿ ತೆಗೆದುಕೊಳ್ಳಲು ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಬರೆದ ಪತ್ರದ ಹಿನ್ನಲೆಯಲ್ಲಿ ಕೂಡಲೇ ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು.
 2. ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆ ರೂಪಿಸಲು ಮತ್ತು ರಾಜ್ಯದ ನದಿ ಜೋಡಣೆಯ ವಿವರವಾದ ಯೋಜನೆ ರೂಪಿಸಲು ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ನೋಡೆಲ್ ಆಫೀಸರ್ ಆಗಿ ನೇಮಕ ಮಾಡಿದು,್ದ ಕೂಡಲೇ ಯೋಜನಾವರದಿ ಪೂರ್ಣಗೊಳಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ  ಸಲ್ಲಿಸುವುದು.
 3. ತುಮಕೂರು ಜಿಲ್ಲೆಯ ಕೆಲವು ಭಾಗಗಳ ಕೆರೆಗಳಿಗೆ ಮಾತ್ರ ನದಿ ನೀರಿನ ಅಲೋಕೇಷನ್ ಮಾಡಿ ಯೋಜನೆ ರೂಪಿಸಲಾಗುತ್ತಿದೆ. ಆದ್ದರಿಂದ ಜಿಲ್ಲೆಯ 10 ತಾಲ್ಲೋಕುಗಳ, ಪ್ರತಿಯೊಂದು ಗ್ರಾಮಗಳಿಗೂ ಹಾಲಿ ಇರುವ ನದಿ ನೀರಿನ ಅಲೋಕೇಷನ್‍ನಲ್ಲಿ  ಇಂತಿಷ್ಟು ಶೇಕಡವಾರು ಅಲೋಕೇಷನ್ ಮಾಡುವುದು, ಶೇ 100 ರಷ್ಟು ನೀರು ಹರಿಯುವ ಸಾಮಾಥ್ರ್ಯದ ಪೈಪ್‍ಲೈನ್ ಅಥವಾ ಕಾಲುವೆ ಮಾಡುವುದು, ಶೇ 100 ರಷ್ಟು ನೀರು ತುಂಬಲು ಅಗತ್ಯವಿರುವ ನದಿ ನೀರಿನ  ಯೋಜನೆ ರೂಪಿಸುವುದು. ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಕಾರಿಡಾರ್ ಯೋಜನೆಯಡಿಯಲ್ಲಿ, ಹೊಸ ನೀರಾವರಿ ಯೋಜನೆಗಳಿಗೂ ಅನುದಾನ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.
 4. ತುಮಕೂರು ಜಿಲ್ಲೆಯಲ್ಲಿ ಹುಟ್ಟುವ ನದಿಗಳಾದ ಜಯಮಂಗಲಿ, ಸುವರ್ಣಮುಖಿ, ಗರುಡಾಚಲ, ನಾಗಿಣಿ, ಶಿಂಷಾ ಮತ್ತು ಉತ್ತರ ಪೆನ್ನಾರ್ ನದಿಗಳ ಪುನಶ್ಚೇತನ ಯೋಜನೆ ಕೈಗೊಳ್ಳುವುದು.
 5. ತುಮಕೂರು ಜಿಲ್ಲೆಯ ವಿವಿಧ ವರ್ಗದ ಜಲಸಂಗ್ರಹಾಗಾರಗಳ ಜೊತೆಗೆ, ತಲಪುರಿಕೆ, ಬುಗ್ಗೆಗಳ, ರಾಜಕಾಲುವೆಗಳ ಮತ್ತು ಕರಾಬುಹಳ್ಳಗಳ ಪುನಶ್ಚೇತನ ಯೋಜನೆ ಕೈಗೊಳ್ಳುವುದು. ಈ ಸಂಬಂದ 11 ವಿಧಾನಸಭಾ ಕ್ಷೇತ್ರಗಳಲ್ಲೂ ಸಭೆ ನಡೆಸಿ, ವಿವಿಧ ವರ್ಗದವರ ಸಲಹೆ ಮಾರ್ಗದರ್ಶನ ಪಡೆಯುವುದು.
 6. ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ನೀರಾವರಿ ಮೌಲ್ಯಮಾಪನ ವರದಿ ಸಿದ್ಧಪಡಿಸಿ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ದೊರಕಿಸಲು ಮತ್ತು ಕೇಂದ್ರ ಸರ್ಕಾರದಿಂದ ಪಡೆಯಬಹುದಾದ ಅನುದಾನಗಳ ಸ್ಟ್ರಾಟಜಿ ಸಿದ್ಧಪಡಿಸಲು, ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು, ಸಂಬಂಧಿಸಿದ ಇಲಾಖೆಗಳು ‘ಮಾಹಿತಿ ಕಣಜಕ್ಕೆ ಅಪ್ ಡೇಟ್ ಮಾಡಲು ಮತ್ತು ಜಿಐಎಸ್ ಲೇಯರ್ ಗಳನ್ನು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಗೆ ಅಫ್ ಲೋಡ್’ ಮಾಡಲು ಕಾಲ ಮಿತಿ ನಿಗಧಿಗೊಳಿಸುವುದು. 
 7. ರಾಜ್ಯದಲ್ಲಿ ಒತ್ತುವರಿ ಆಗಿರುವ ಜಮೀನುಗಳನ್ನು ನಿಯಾಮುನುಸಾರ ಹರಾಜು ಹಾಕಿ, ಬರುವ ಹಣದ ಜೊತೆಗೆ, ಕೇಂದ್ರ ಸರ್ಕಾರದ ಅನುದಾನದ ಪಾಲು ಪಡೆದು, ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಯೋಜನೆ ರೂಪಿಸಲು ಸಾಧ್ಯಾ- ಸಾಧ್ಯತೆ ಅಧ್ಯಯನ ಮಾಡುವುದು.
 8. ಅಟಲ್ ಭೂಜಲ್ ಯೋಜನೆ, ಅಂತರ್ಜಲ ಮರುಪೂರಣ ಮತ್ತು ಜಲಶಕ್ತಿ ಅಭಿಯಾನ ಯೋಜನೆಗೆ ರೂಪುರೇಷೆ ನಿರ್ಧರಿಸಲು, ಕೇಂದ್ರ ಜಲಶಕ್ತಿ ಸಚಿವಾಲಯದ  CONSULTATIVE COMMITTEE FOR THE MINISTRY OF JAL SHAKTHI ಸಮಿತಿಯ ಸಭೆಯು ದಿನಾಂಕ:30.06.2022 ಮತ್ತು 01.07.2022 ರಂದು ಬೆಂಗಳೂರು/ಮೈಸೂರಿನಲ್ಲಿ  ನಡೆಯುವ ಹಿನ್ನಲೆಯಲ್ಲಿ, ಕೇಂದ್ರ ಜಲಶಕ್ತಿ ಸಚಿವರ ಜೊತೆ ರಾಜ್ಯದ ಸಮಗ್ರ ನೀರಾವರಿ ಅಭಿವೃದ್ಧಿ ಬಗ್ಗೆ ಸಮಾಲೋಚನೆ ನಡೆಸಲು ಮತ್ತು ಜಲಶಕ್ತಿ ಅಭಿಯಾನಕ್ಕೆ ಅಂದಿನಿಂದಲೇ ಚಾಲನೇ ನೀಡಲು ತುಮಕೂರು ಜಿಲ್ಲೆಯ ನಿಯೋಗಕ್ಕೆ ಸಮಯಾವಕಾಶ ನೀಡಲು ಅಗತ್ಯ ಕ್ರಮ ಕೈಗೊಳ್ಳುವುದು.
 9. ರಾಜ್ಯದ ಜಲಸಂಪನ್ಮೂಲ ಇಲಾಖೆ, ರಾಜ್ಯ ಮಟ್ಟದ ದಿಶಾ ಸಮಿತಿ, ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರ ಮತ್ತು ಶಕ್ತಿಪೀಠ ಫೌಂಡೇಷನ್ ಸಹಬಾಗಿತ್ವದಲ್ಲಿ ಸಿದ್ಧಪಡಿಸುವ, ರಾಜ್ಯದ ಜಲಗ್ರಂಥ ಮತ್ತು ಮೌಲ್ಯ ಮಾಪನ ವರದಿಗೆ ಪೂರಕವಾಗಿ, ತುಮಕೂರು ಜಿಲ್ಲೆಯ ಪೈಲಟ್ ಯೋಜನಾ ವರದಿಯನ್ನು ಸರ್ಕಾರಗಳಿಗೆ ಸಲ್ಲಿಸುವ, ರಾಜ್ಯ ಮಟ್ಟದ ಸಮಾವೇಶವನ್ನು ತುಮಕೂರಿನಲ್ಲಿ ನಡೆಸಲು  ಅಗತ್ಯ ಕ್ರಮ ಕೈಗೊಳ್ಳುವುದು.

ಜಲಸಂವಾದದಲ್ಲಿನ ವಿಶೇಷತೆಗಳು

 1. ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇತಿಹಾಸದಲ್ಲಿ ಸುಮಾರು 7 ಗಂಟೆಗಳ ಕಾಲ ಸುಧೀರ್ಘ ಜಿಲ್ಲಾ ಜಲ ಸಂವಾದ ನಡೆಸಿರುವುದು ದಾಖಲೆಯಂತೆ. ಶ್ರೀ ಕೆ.ಎಸ್.ಸಿದ್ಧಲಿಂಗಪ್ಪನವರಿಗೆ, ಶ್ರೀ ಕವಿತಾ ಕೃಷ್ಣಾರವರಿಗೆ, ಶ್ರೀ ಯೋಗೀಶ್ ರವರಿಗೆ, ಶ್ರೀ ಉಮಾಮಹೇಶ್‍ರವರಿಗೆ, ಶ್ರೀ ಕೆ.ಸಿ.ಮಹೇಂದ್ರವರವರಿಗೆ ಜನರು ಪ್ರತಿ ತಾಲ್ಲೋಕಿನಲ್ಲೂ ಈ ರೀತಿ ಚರ್ಚೆ ನಡೆಸಲು ಸಲಹೆ ನೀಡಿದರಂತೆ. 
 2. ಸುಮಾರು 7 ಗಂಟೆಗಳ ಕಾಲ ನಡೆದ ಜಿಲ್ಲಾ ಜಲ ಸಂವಾದದಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಶಾಲಾ ವಿದ್ಯಾರ್ಥಿಗಳಂತೆ ಮುಂದೆ ಕುಳಿತು ಎಲ್ಲರ ಸಲಹೆಗಳನ್ನು ಸ್ವೀಕರಿಸಿರುವುದು ಒಂದು ದಾಖಲೆಂiÀiಂತೆ.
 3. ಮಾಜಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರವರವರು ಪಕ್ಷಬೇಧ ಮರೆತು ಎಲ್ಲಾ ಪಕ್ಷಗಳ ರಾಜಕಾರಣಿಗಳು ಸಹ ಈ ಅಂದೋಲನದಲ್ಲಿ ಸಹಕರಿಸೋಣ, ಬಸವರಾಜ್ ರವರ ಈ ಕಾಳಜಿಗೆ ಪಕ್ಷದ ರಾಜಕಾರಣ ಬದಿಗಿಟ್ಟು ಅಭಿನಂದನೆ ಸಲ್ಲಿಸಲೇ ಬೇಕು. ಮೊದಲೇ ವಿಷಯ ಗೊತ್ತಿದ್ದರೆ, ನಾನು ಬೆಳಿಗ್ಗೆಯಿಂದ ನಿಮ್ಮ ಜೊತೆ ಇರುತ್ತಿದ್ದೆ, ಇನ್ನೂ ಮುಂದೆ ನಡೆಸುವ ಸಭೆಗೆ ಮೋದಲೆ ವಿಷಯ ತಿಳಿಸಿ ಎಂದು ಸಂಘಟಕರಿಗೆ ತಿಳಿಸಿದರಂತೆ.
 4. ಬಸವರಾಜ್ ರವರು ನೀರಾವರಿಗೆ ತೊಂದರೆ ಮಾಡಿದ್ದ ರಾಜಕಾರಣಿಗಳ ಬಗ್ಗೆ ಮಾತು ಆರಂಭಿಸಿದಾಗ, ಯಾವುದೇ ರಾಜಕೀಯ ಮಾತು ಇಲ್ಲಿ ಬೇಡ ಸಾರ್ ಎಂಬ ಮನವಿಯನ್ನು ಕುಂದರನಹಳ್ಳಿ ರಮೇಶ್ ಬಹಿರಂಗವಾಗಿಯೇ ಮಾಡುವ ಮೂಲಕ, ಸಂವಾದದಲ್ಲಿ ಭಾಗವಹಿಸಿದ್ದ ಯಾರೊಬ್ಬರೂ ರಾಜಕಾರಣ ಮಾತನಾಡಲು ಕಡಿವಾಣ ಹಾಕಿದಂತೆ ಆಯಿತಂತೆ.
 5. ಸುಮಾರು 2 ಗಂಟೆಗಳಿಗೂ ಹೆಚ್ಚು ಅವಧಿಯ ಪಿಪಿಟಿ ಯನ್ನು ಭಾಗವಹಿಸಿದ ಜನ ಕೇಳುವ ತಾಳ್ಮೆ ನಗುಮೊಗದಿಂದಲೇ ಇತ್ತಂತೆ. ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಕುಂದರನಹಳ್ಳಿ ರಮೇಶ್ ರವರಿಗೆ ಒತ್ತಾಯ ಹಾಕಿದರಂತೆ.
 6. ಕೊರಟಗರೆ ಮತ್ತು ಮಧುಗಿರಿ ತಾಲ್ಲೋಕಿನ ಜನರು ನಮ್ಮ ಕೆರೆಗಳಿಗೆ ನದಿ ನೀರಿನ ಅಲೋಕೇಷನ್ ಮಾಡದೇ ಇದ್ದಲ್ಲಿ ಬೀದಿಗೀಳಿಯುವುದಾಗಿ ಘೋಷಣೆ ಮಾಡಿದರಂತೆ.
 7. ರಾಜ್ಯದ ಪ್ರತಿಯೊಂದು ಗ್ರಾಮಗಳಿಗೂ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದಡಿ ನದಿ ನೀರಿನ ಅಲೋಕೇಷನ್ ಗಾಗಿ ಯೋಜನೆ ಪ್ರಸ್ತಾವನೆ ಸಿದ್ಧಪಡಿಸದಿದ್ದಲ್ಲಿ, ನಾನೇ ಬೀದಿಗಿಳಿಯುತ್ತೇನೆ, ಪ್ರಸ್ತಾವನೆ ಸಲ್ಲಿಸಿದರೇ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಖಂಡೀತಾ ಅನುದಾನ ನೀಡಲಿದ್ದಾರೆ. ನಾನು ಕಡತದ ಅನುಸರಣೆ ಮಾಡಲು ಸಿದ್ಧವಾಗಿದ್ದೇನೆ. ಇದು ನನ್ನ ಜೀವನದ ಕೊನೆಯ ಆಸೆ ಎಂದು ಜಿ.ಎಸ್.ಬಸವರಾಜ್ ರವರು ಬಹಿರಂಗವಾಗಿ ಘೋಷಣೆ ಮಾಡಿದರಂತೆ.
 8. ಎತ್ತಿನಹೊಳೆ ಯೋಜನೆಯಡಿ ಬೈರಗೊಂಡ್ಲು ಡ್ಯಾಂ ಬಗ್ಗೆ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಲು ಒಕ್ಕೊರಿಲಿನ ಸಹಮತ ವ್ಯಕ್ತವಾಯಿತಂತೆ.
 9. ಕೈಗಾರಿಕೆಗಳಿಗೆ ನೀರು ಬೇಕು, ಆದರೇ ಕೈಗಾರಿಕೋಧ್ಯಮಿಗಳು ಸಭೆಗಳಲ್ಲಿ ಭಾಗವಹಿಸಲು ಹಾಗೂ  ಸಿ.ಎಸ್.ಆರ್ ಫಂಡ್ ಮೂಲಕ ಜಲ ಯೋಜನೆಗಳಿಗೆ ಏಕೆ ಸಹಕಾರ ನೀಡಬಾರದು ಎಂದು ರೈತರು ಕಿಡಿಕಾರಿದರಂತೆ.

  ಸಭೆಯಲ್ಲಿ ಶ್ರೀ ಸಿದ್ದಲಿಂಗಪ್ಪನವರು, ಪ್ರಜಾಪ್ರಗತಿಯ ಶ್ರೀ ನಾಗಣ್ಣನವರು, ಶ್ರೀ ಕವಿತಾ ಕೃಷ್ಣರವರು, ಡಾ,ಶ್ರೀ ಯೋಗಿಶ್ ರವರು, ಶ್ರೀ ಮಹದೇವಪ್ಪನವರು, ಶ್ರೀ ಮುರುಳೀಧರ್ ಹಾಲಪ್ಪನವರು, ಶ್ರೀ ಉಮಾಮಹೇಶ್‍ ರವರು, ಶ್ರೀ ಕೆ.ಸಿ.ಮಹೇಂದ್ರ ರವರು, ಶ್ರೀ ನಾಗಭೂಷನ್ ರೆಡ್ಡಿರವರು, ಶ್ರೀ ನಿರಂಜನ್ ರವರು,  ಶ್ರೀ ಜಯರಾಮಯ್ಯನವರು, ಶ್ರೀ ಶಂಕರಪ್ಪನವರು, ಶ್ರೀ ರಾಮಕೃಷ್ಣರವರು, ಶ್ರೀ ಸುಬ್ರಮಣ್ಯರವರು,ಶ್ರೀಮತಿ ಚಂದ್ರಕಲಾರವರು, ಶ್ರೀ ವೆಂಕಟಾಚಲಿಯವರು, ಶ್ರೀ ಲೋಕೇಶ್ ರವರು, ಶ್ರೀ ಶಿವರುದ್ರಯ್ಯನವರು, ಶ್ರೀ ಗುರುಸಿದ್ಧಪ್ಪನವರು, ಶ್ರೀ ಶಿವಯ್ಯನವರು,ಶ್ರೀಮತಿ ರಾಣಿ ಚಂದ್ರ ಶೇಖರ್‍ರವರು,  ಶ್ರೀ ಬಸವರಾಜ್ ಸುರಣಗಿಯವರು, ಶ್ರೀ ವೇದಾನಂದಮೂರ್ತಿಯವರು, ಶ್ರೀ ಸತ್ಯಾನಂದ್ ರವರು, ಶ್ರೀ ಹೊಲತಾಳು ಸಿದ್ದಗಂಗಪ್ಪನವರು, ಶ್ರೀ ರಕ್ಷಿತ್ ರವರು, ಶ್ರೀ ಚಿಕ್ಕರಾಜ್ ರವರು, ಶ್ರೀ ದೇವಾನಂದ್ ರವರು, ಸೇರಿದಂತೆ ಹಲವಾರು ಜನರು ತುಮಕೂರು ಜಿಲ್ಲಾ ಜಲ ಗ್ರಂಥಕ್ಕೆ ವಿವಿಧ ಸಲಹೆ ನೀಡಿದರು ಇದೊಂದು ಒಳ್ಳೆಯ ಅರ್ಥ ಪೂರ್ಣ ಸಭೆ ಆಗಿತ್ತು.

ಪ್ರಗತಿ ಟಿವಿಯವರು ದಿನದ ಪೂರ್ಣ ಸಂವಾದದ ವಿಡಿಯೋ ಮಾಡಿಕೊಂಡು, ಜಿಲ್ಲಾ ಜಲಗ್ರಂಥದ ಅರ್ಥಪೂರ್ಣ ಚರ್ಚೆ ನಡೆಸಲು ಸನ್ನದಾರಾಗಿದ್ದು ಸಭೆಯ ಒಂದು ವಿಶೇಷವಾಗಿತ್ತು.