TUMAKURU:SHAKTHIPEETA FOUNDATION
ತುಮಕೂರಿನ ಶಕ್ತಿಪೀಠ ಫೌಂಡೇಷನ್ ಕರ್ನಾಟಕ ರಾಜ್ಯದ ಜಲಗ್ರಂಥ ರಚಿಸಲು ಸಿದ್ಧತೆ ನಡೆಸುತ್ತಿದೆ. ಫೈಲಟ್ ಯೋಜನೆಯಾಗಿ ತುಮಕೂರು ಜಿಲ್ಲೆಯ ಜಲಗ್ರಂಥ ರಚಿಸಿ, ಸಂಭಂಧಿಸಿದ ಎಲ್ಲಾ ಇಲಾಖೆಗಳ ಅಧಿಕೃತ ಸಹಿಯೊಂದಿಗಿನ ಮಾಹಿತಿಯನ್ನು, ಕರ್ನಾಟಕ ರಾಜ್ಯ ಸರ್ಕಾರದ ‘ಮಾಹಿತಿ ಕಣಜ’ಕ್ಕೆ ಮತ್ತು ‘ಜಿಐಎಸ್ ಆಧಾರಿತ ನಕ್ಷೆಯನ್ನು ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಗೆ ಅಫ್ ಲೋಡ್’ ಮಾಡಿಸಿದ, ನಂತರ ನಿಖರವಾದ ಡಾಟಾ ಮೌಲ್ಯ ಮಾಪನ ವರದಿ ನಡೆಯಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಇಂಜಿನಿಯರ್‍ಗಳು, ನಿವೃತ್ತ ಇಂಜಿನಿಯರ್‍ಗಳು, ಡಾಟಾ ವಿಜ್ಞಾನಿ ಚಿ.ಕೆ.ಆರ್.ಸೋಹನ್, ಜಿಐಎಸ್ ತಜ್ಞ ಶ್ರೀ ಬಸವರಾಜ್ ಸುರಣಗಿ, ಇನ್ನೂ ಅಧಿಕೃತವಾಗಿ ಶಕ್ತಿಪೀಠ ಫೌಂಡೇಷನ್ ಯಾರೊಂದಿಗೂ ಎಂ.ಓ.ಯು ಮಾಡಿಕೊಂಡಿಲ್ಲ. ಈ ವಾರದಲ್ಲಿ ಎಂ.ಓ.ಯು ಮಾಡಿಕೊಳ್ಳಲಿದೆ.
ಆದರೆ ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ, ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕನಾಗಿ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಪ್ರತಿಯೊಂದು ಇಲಾಖೆಯ ಯೋಜನೆಗಳ, ಉಚಿತವಾಗಿ ಮೌಲ್ಯ ಮಾಪನ ಮಾಡಲು ಸರ್ಕಾರದ ಜೊತೆ ಎಂ.ಓ.ಯು ಮಾಡಿಕೊಳ್ಳಲಾಗಿದೆ.
ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ನಿರ್ಣಯ ಕೈಗೊಂಡ 30 ದಿವಸದೊಳಗೆ ಅನುಷ್ಠಾನ ಮಾಡಲು ಅಧಿಕಾರಿಗಳು ಯೋಜನೆ ರೂಪುರೇಷೆ ಮಾಡಬೇಕಿದೆ.
2019 ರಿಂದ ಸುಮಾರು 10 ದಿಶಾ ಸಭೆಗಳಲ್ಲಿಯೂ ಚರ್ಚಿಸಿದ ವಿಷಯಗಳ ಅನುಷ್ಠಾನದ ಬಗ್ಗೆ ಕೆಲವು ಅಧಿಕಾರಿಗಳು ಮೌನವಾಗಿದ್ದಾರೆ. ಈ ನಡವಳಿಕೆಯನ್ನು ‘ದೇಶ ದ್ರೋಹ’ ಎಂದರೆ ತಪ್ಪಾಗಲಾರದು. ಕೆಲವು ಇಲಾಖೆಯ ಅಧಿಕಾರಿಗಳು ಸ್ಪಂಧಿಸಿದ್ದರೂ, ಸರ್ಕಾರಿ ಹಣ ಕಬಳಿಸಿ, ನಿಖರವಾದ ಡಾಟಾ ಕೊಡದೆ ಹಲವಾರು ಸಲಹಾಗಾರರ ಸಂಸ್ಥೆಗಳು ವಿಫಲವಾಗಿರುವುದರಿಂದ ಸಾರ್ ದಯವಿಟ್ಟು ಕ್ಷಮಿಸಿ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ.
ಇವರ ವಿರುದ್ಧ ಸಮರ ಸಾರುವ ಕಾಲ ಸನ್ನಿಹಿತವಾಗಿದೆ. ‘ಡಾಟಾ ಯಾರಪ್ಪನ ಸ್ವತ್ತು ಅಲ್ಲ. ಇದು ಸರ್ಕಾರಿ ಆಸ್ತಿ. ಸಾರ್ವಜನಿPರÀ ಆಸ್ತಿ,’ ಕೇಂದ್ರ ಮತ್ತು ರಾಜ್ಯ ಸರ್ಕಾರ ‘ಮುಕ್ತ ಡಾಟಾ ಪಾಲಿಸಿ’ ಘೋಷಣೆ ಮಾಡಿದೆ. ಕೋಟಿಗಟ್ಟಲೇ ಹಣ ಖರ್ಚು ಮಾಡಿದೆ.
ಈ ಹಿನ್ನಲೆಯಲ್ಲಿ ಡಾಟಾ ನೀಡದೆ ಇರುವ ಸಲಹಾಗಾರರ ಸಂಸ್ಥೆಗಳ ವಿರುದ್ಧ ಮತ್ತು ಡಾಟಾ ಸಂಗ್ರಹ ಮಾಡಿಕೊಳ್ಳದೇ ಇರುವ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳ ಬೇಕು ಎಂಬ ಬಗ್ಗೆಯೂ ಒಂದು ಗಟ್ಟಿ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆ ಬಂದಿದೆ.
ಇಂದಿನ ‘ತುಮಕೂರು ಜಲ್ಲಾ ಸಂವಾದ’ ಸಭೆಯಲ್ಲಿ ಸಾರ್ವಜನಿಕರ ಮುಂದೆ ಈ ವಿಷಯ ಮಂಡಿಸಲು ಚಿಂತನೆ ನಡೆಸಿದ್ದೇನೆ.
‘ಊರಿಗೊಂದು ಕೆರೆ– ಆ ಕೆರೆಗೆ ನದಿ ನೀರು’ ಯೋಜನೆಗೆ, ಸರ್ಕಾರ ಅನುಮೋದನೆ ನೀಡುವವರೆಗೂ ‘ಜಲ ಡಾಟಾ ಯುದ್ಧ’ ನಡೆಯಲಿದೆ.
ನ್ಯಾಯಾಲಯದ ಮೊರೆ ಹೋಗಲು ಸಹ, ಇಂದಿನ ಸಭೆಯಲ್ಲಿ ಚರ್ಚೆ ಮಾಡಿ ಸಲಹೆ ಪಡೆಯುವ ಆಲೋಚನೆಯೂ ಇದೆ.
ತುಮಕೂರು ಅಮಾನಿಕೆರೆ ರಸ್ತೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ, ಇಂದು(16.06.2022)ಬೆಳಿಗ್ಗೆ 10 ಗಂಟೆಗೆ ನಡೆಯುವ ‘ತುಮಕೂರು ಜಲ್ಲಾ ಸಂವಾದ’ ಕಾರ್ಯಕ್ರಮಕ್ಕೆ ತಾವೂ ಆಗಮಿಸಿ. ಉತ್ತಮ ಸಲಹೆ ನೀಡುವಿರಾ?