2nd November 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ  ಜಲಗ್ರಂಥ ರಚಿಸುವ ಹಿನ್ನಲೆಯಲ್ಲಿ, ಎಲ್ಲಾ ಪಕ್ಷಗಳ ಆಸಕ್ತ ಲೀಡರ್ ವೈಸ್, ನೀರಾವರಿ ಸ್ಕೀಮ್ ವೈಸ್ ಮತ್ತು ಸಂಶೋಧಕರ ವೈಸ್ ಪ್ರತ್ಯೇಕ ಅವರ ಅನುಭವ ಮತ್ತು ಅವರ ಮುಂದಿನ ದೂರದೃಷ್ಠಿಯ ಯೋಜನೆಗಳ ಬಗ್ಗೆ, ಜಲ ಸಂವಾದ ಏರ್ಪಡಿಸಲು ಚಿಂತನೆ ನಡೆಸಲಾಗಿದೆ.

ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನಡೆದ ಜಲ ಸಂವಾದದ ಅನುಭವದ ಹಿನ್ನಲೆಯಲ್ಲಿ ಈ ಚಿಂತನೆ ನಡೆಸಲಾಗಿದೆ. ಈ ಮಾದರಿಯ ಜಲ ಸಂವಾದವನ್ನು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ, ಯಾವುದೇ ಆಸಕ್ತ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಸಲಾಗುವುದು.

ಇಲ್ಲಿ ಜನರ ಸಂಖ್ಯೆಗಿಂತ, ವಿಚಾರ ವಾದಿಗಳ, ಚಿಂತಕರ ಅನುಭವ, ಸಂಶೋಧಕರ ಅನುಭವ ಸಂಗ್ರಹ ಬಹಳ ಮುಖ್ಯ. ನೀರಾವರಿ ಯೋಜನೆಗಳ ಎಲ್ಲಾ ರೀತಿಯ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ನಾಯಕರಿಗೆ ಅನೂಕೂಲವಾಗಲಿದೆ.

  1. ಮಾಜಿ ಲೋಕಸಭಾ ಡೆಪ್ಯೂಟಿ ಸ್ಪೀಕರ್ ರವರಾದ  ದಿ.ಎಸ್. ಮಲ್ಲಿಕಾರ್ಜುನಯ್ಯನವರ ನೀರಾವರಿ ಯೋಜನೆಗಳ ಕಾಳಜಿ ಬಗ್ಗೆ ಶ್ರೀ ನಿರಂಜನ್ ರವರ ಅನಿಸಿಕೆಯಂತೆ ಜಲಸಂವಾದವನ್ನು ನಡೆಸಲಾಗುವುದು.
  2. ತುಮಕೂರು ಜಿಲ್ಲೆಯ ತಲಪುರಿಕೆಗಳ ಪುನಶ್ಚೇತನ, ಇತಿಹಾಸ ಮತ್ತು ಜಿಲ್ಲೆಯ ಎಲ್ಲಾ ತಲಪುರಿಕೆಗಳ ಜಿಯೋ ಟ್ಯಾಗಿಂಗ್ ಜಲ ಸಂವಾದವನ್ನು ಶ್ರೀ ಡಾ. ಹೊಲತಾಳು ಸಿದ್ದಗಂಗಯ್ಯನವರ ಅನಿಸಿಕೆಯಂತೆ, ಒಂದು ತಲಪುರಿಕೆಯ ಸ್ಥಳದಲ್ಲಿ ಸಂವಾದ ನಡೆಸಲಾಗುವುದು.
  3. ತುಮಕೂರು ಜಿಲ್ಲೆಯಲ್ಲಿ ಹುಟ್ಟುವ ನದಿಗಳ ಪುನಶ್ಚೇತನ, ಇತಿಹಾಸ ಮತ್ತು ಜಿಯೋಟ್ಯಾಗಿಂಗ್  ಬಗ್ಗೆ ಜಯಮಂಗಲಿ ಮತ್ತು ಸುವರ್ಣ ಮುಖಿ ಹೋರಾಟ ಸಮಿತಿಯ ಶ್ರೀ ವೆಂಕಟಾಚಲಯ್ಯನವರ ತಂಡದ ಅನಿಸಿಕೆಯಂತೆ ಜಲಸಂವಾದವನ್ನು ನಡೆಸಲಾಗುವುದು.
  4. ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ನೀರಾವರಿ ಯೋಜನೆಗಳ ಬಗ್ಗೆ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಇಕ್ಬಾಲ್ ರವರ ಅನಿಸಿಕೆಯಂತೆ ಜಲಸಂವಾದವನ್ನು ನಡೆಸಲಾಗುವುದು.

 ಜಿಲ್ಲಾಧ್ಯಾಂತ ರೀತಿಯ ಜಲಸಂವಾದ ನಡೆಸಲು ಆಸಕ್ತಿ ಇರುವವರು ಸಂಪರ್ಕಿಸ ಬಹುದು. ಪ್ರತಿ ಜಲ ಸಂವಾದದ ದಿನಾಂಕ ಮತ್ತು ಸಮಯವನ್ನು ಶೀಘ್ರವಾಗಿ ಪ್ರಕಟಿಸಲಾಗುವುದು