24th April 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮುಕ್ತ ಡಾಟಾ ಪಾಲಿಸಿ ಜಾರಿಗೊಳಿಸಿದೆ. ಪ್ರತಿಯೊಂದು ಇಲಾಖೆಯೂ ನಿಖರವಾದ ಮಾಹಿತಿಯನ್ನು ‘ಮಾಹಿತಿ ಕಣಜ ಪೋರ್ಟಲ್’ ಗೆ ಅಪ್ ಲೋಡ್ ಮಾಡಬೇಕು ಮತ್ತು ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಗೆ ‘ಇತಿಹಾಸ ಸಹಿತ ಜಿಐಎಸ್ ಲೇಯರ್ ಅಫ್ ಲೋಡ್ ಮಾಡಲೇ ಬೇಕು’ ಇದು ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಮತ್ತು ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರ ಆದೇಶ.

ತುಮಕೂರು ಜಿಲ್ಲೆಯನ್ನು ಮಾಹಿತಿ ಕಣಜ ಜಿಲ್ಲೆಯಾಗಿ ಘೋಶಿಸಲು ಸೆಂಟರ್ ಫಾರ್ ಇ ಗೌರ್ವನೆನ್ಸ್ ಚಿಂತನೆ ನಡೆಸುತ್ತಿದೆ. ಪೂರಕವಾಗಿ ಫೈಲಟ್ ಯೋಜನೆಯಾಗಿ ಕೇಂದ್ರ ಜಲಶಕ್ತಿ ಸಚಿವಾಲಯದ ಯೋಜನೆಗಳ ಮಾಹಿತಿಯನ್ನು ಅಫ್ ಲೋಡ್ ಮಾಡಿಸಲು ಶಕ್ತಿಪೀಠ ಫೌಂಡೇಷನ್ ರಾಜ್ಯಾಧ್ಯಾಂತ ಜಲಶಕ್ತಿ ಅಭಿಯಾನ ಆರಂಭಿಸಿದೆ.

 ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ಮಾಡಲು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ‘ರಾಜಕೀಯ ಇಚ್ಚಾ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ನೀರಾವರಿ ತಜ್ಞ ಹಾಗೂ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ರಾಜ್ಯದಲ್ಲಿ ಜಲಕ್ರಾಂತಿ ಮಾಡಲು ಚಿಂತನೆ ನಡೆಸುತ್ತಿದ್ದಾರೆ.

ಮೌನ ಮುರಿಯಿರಿ, ಮಾಹಿತಿ ಅಫ್ ಲೋಡ್ ಮಾಡಲು ಕೇಂದ್ರ ಜಲಶಕ್ತಿ ಸಚಿವಾಲಯದ ಯೋಜನೆಗಳ ಜಾರಿಗೆ ಸಂಭಂಧಿಸಿದ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಮುಂದಾಗಿ, ಜಿ.ಎಸ್.ಬಸವರಾಜ್ ರವರು ನಿಮ್ಮ ಕಚೇರಿಗೆ ಬಂದು ಡಾಟಾ ಅಫ್ ಲೋಡ್ ಏಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಅವಕಾಶ ಕಲ್ಪಿಸ ಬೇಡಿ.

ಡಾಟಾ ಯಾರಪ್ಪನ ಸ್ವತ್ತು ಅಲ್ಲ ಆಂದೋಲನ ಡಿಜಿಟಲ್ ರೂಪದಲ್ಲಿ ಆರಂಭವಾಗಿದೆ.