TUMAKURU:SHAKTHIPEETA FOUNDATION
ಬೆಂಗಳೂರಿನಲ್ಲಿ/ ಮೈಸೂರಿನಲ್ಲಿ ನಡೆಯುವ ಜಲಶಕ್ತಿ ಸಚಿವಾಲಯದ ಸಭೆಗೆ ಆಗಮಿಸುವ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರಿಗೆ ತುಮಕೂರು ಜಿಲ್ಲಾ ಸಮಗ್ರ ನೀರಾವರಿ ಯೋಜನೆ ಪ್ರಸ್ತಾವನೆ ಸಲ್ಲಿಸಲು ಭರದಿಂದ ಸಿದ್ಧತೆ ನಡೆದಿದೆ.
ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಎ.ನಾರಾಯಣ ಸ್ವಾಮಿರವರು, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಅರಗಜ್ಞಾನೇಂದ್ರವರು, ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು, ಶ್ರೀ ಬಿ.ಸಿ.ನಾಗೇಶ್ ರವರು ಸೇರಿದಂತೆ ತುಮಕೂರು ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳ ಸಲಹೆಗಳೊಂದಿಗೆ, ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರು ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದÀ ಶ್ರೀ ರಾಕೇಶ್ ಸಿಂಗ್ ರವರಿಗೆ ಸಲ್ಲಿಸಬೇಕಿದೆ. ನಂತರ ಅವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಅಗತ್ಯವಾಗಿದೆ.
ಜಲಶಕ್ತಿ ಸಚಿವಾಲಯದ ಸದಸ್ಯರು ಆಗಿರುವ ಶ್ರೀ ಜಿ.ಎಸ್.ಬಸವರಾಜ್ ರವರು ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸುವುದು ಸೂಕ್ತವಾಗಿದೆ. ಸಂಸದರ ನೇತೃತ್ವದಲ್ಲಿ ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ನಡೆಸಲು ಒಂದು ನಿಯೋಗವೂ ತೆರಳಲಿದೆ.
ಶಕ್ತಿಪೀಠ ಫೌಂಡೇಷನ್ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಹಾಗೂ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿಗೆ ಅನುದಾನ ತರುವ ಬಗ್ಗೆ ಸ್ಟ್ರಾಟಜಿ ಮಾಡುತ್ತಿರುವುದರಿಂದ ವಿವಿಧ ಕಚೇರಿಗಳಿಗೆ ನೀಡಿ ಸಮಾಲೋಚನೆ ನಡೆಸಲಾಯಿತು.
ದಿನಾಂಕ:18.06.2022 ರಂದು ಹೇಮಾವತಿ ನಾಲಾವಲಯದ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ತುಮಕೂರು ಸಮಗ್ರ ನೀರಾವರಿ ಪ್ರಸ್ತಾವನೆ ಬಗ್ಗೆ ಸಮಾಲೋಚನೆ.

ದಿನಾಂಕ:18.06.2022 ರಂದು ಎತ್ತಿನಹೊಳೆ ನಾಲಾವಲಯದ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ತುಮಕೂರು ಸಮಗ್ರ ನೀರಾವರಿ ಪ್ರಸ್ತಾವನೆ ಬಗ್ಗೆ ಸಮಾಲೋಚನೆ.

ದಿನಾಂಕ:18.06.2022 ರಂದು ಗ್ರಾಮೀಣ ಕುಡಿಯುವ ನೀರು ಕಚೇರಿಯಲ್ಲಿ ತುಮಕೂರು ಸಮಗ್ರ ನೀರಾವರಿ
ಪ್ರಸ್ತಾವನೆ ಬಗ್ಗೆ ಸಮಾಲೋಚನೆ.

ದಿನಾಂಕ:18.06.2022 ರಂದು ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ತುಮಕೂರು ಸಮಗ್ರ ನೀರಾವರಿ ಪ್ರಸ್ತಾವನೆ ಬಗ್ಗೆ ಸಮಾಲೋಚನೆ.
