6th December 2024
Share

TUMAKURU:SHAKTHIPEETA FOUNDATION

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿ ಮತ್ತು ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಒಂದು ಲಕ್ಷ ಗಿಡ ಹಾಕುವ ಹಸಿರು ತುಮಕೂರು ಆಂದೋಲನಕ್ಕೆ ಪೂರಕವಾಗಿ, ತುಮಕೂರು ಅಮಾನಿಕೆರೆಯಲ್ಲಿ ಗಿಡಗಳನ್ನು ಸಂಗ್ರಹ ಮಾಡಿಕೊಳ್ಳುವ ಬಗ್ಗೆ ಹಾಗೂ ನರ್ಸರಿ ಮಾಡುವ ಸ್ಥಳ ಪರಿಶೀಲನೆ ಮಾಡಲು, ಹಸಿರು ತುಮಕೂರು ಪಿತಾಮಹ ಹಾಗೂ ತುಮಕೂರು ಲೋಕಸಭಾ ಸದಸ್ಯರಾದ  ಶ್ರೀ ಜಿ.ಎಸ್.ಬಸವರಾಜ್ ರವರು ಇಂದು (ದಿನಾಂಕ:20.06.2022) ಬೆಳಿಗ್ಗೆ 11.15  ಗಂಟೆಗೆ  ತುಮಕೂರು ಅಮಾನಿಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು.

ಪರಿಸಾಕ್ತರು, ದಿಶಾ ಸಮಿತಿಯ ಸದಸ್ಯರು, ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಸಮಿತಿಯ ಪದಾಧಿಕಾರಿಗಳು, ಗಿಡಗಳಿಗೆ ಸಂಭಂದಿಸಿದ ಅಧಿಕಾರಿಗಳು ಭಾಗವಹಿಸಲು ಸಂಸದರ ಕಚೇರಿ ಸಿಬ್ಬಂಧಿ ತುರ್ತಾಗಿ ತಿಳಿಸಿದ್ದಾರೆ.

ಬೆಳಿಗ್ಗೆ 10.30 ಕ್ಕೆ ತುಮಕೂರಿನ ಸಣ್ಣ ನೀರಾವರಿ ಇಲಾಖೆ ಇ.ಇ ಕಚೇರಿಗೆ ಭೇಟಿ ನೀಡುವ ಕೇಂದ್ರ ಜಲಶಕ್ತಿ ಸಚಿವಾಲಯದ ಸಮಿತಿಯ ಸದಸ್ಯರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ  ಶ್ರೀ ಜಿ.ಎಸ್.ಬಸವರಾಜ್ ರವರು, ದಿನಾಂಕ:30.06.2022 ರಂದು ಬೆಂಗಳೂರು/ಮೈಸೂರಿನಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಅಟಲ್ ಭೂಜಲ್, ಅಂತರ್ಜಲ ಮರುಪೂರಣ ಮತ್ತು ಜಲಶಕ್ತಿ ಅಭಿಯಾನದ ರೂಪುರೇಷೆ ಸಭೆಗೆ, ಪೂರಕವಾಗಿ, ತುಮಕೂರು ಸಣ್ಣ ನೀರಾವರಿ ಇಲಾಖೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಮತ್ತು ರಾಜ್ಯ ಮಟ್ಟzಲ್ಲಿÀ ಸಣ್ಣ ನೀರಾವರಿ ಇಲಾಖೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸುವರು.

2019 ರಿಂದ ಈವರೆಗೂ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದಿರುವ, ಸುಮಾರು 10 ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿನ, ತುಮಕೂರು ಜಿಲ್ಲಾ ನೀರಾವರಿ ಸಮಗ್ರ ಅಭಿವೃದ್ಧಿ ಬಗ್ಗೆ ಕೈಗೊಂಡಿರುವ ನಿರ್ಣಯಗಳ ಅನುಪಾಲನಾ ವರದಿ ಬಗ್ಗೆಯೂ ಪರಿಶೀಲನೆ ನಡೆಸುವರು. ಈ ಮಾಹಿತಿಗಳನ್ನು ಕೇಂದ್ರ ಜಲಶಕ್ತಿ ಸಚಿವಾಲಯದ ಸಭೆಯಲ್ಲಿ ಮಂಡಿಸುವರು.

ಶಕ್ತಿಪೀಠ ಫೌಂಡೇಷನ್ ಸಿದ್ಧಪಡಿಸುತ್ತಿರುವ ಜಲಗ್ರಂಥ, ಮಾಹಿತಿ ಕಣಜದ ಪೋರ್ಟಲ್‍ಗೆ, ಮಾಹಿತಿ ಅಪ್‍ಲೋಡ್ ಮಾಡುವುದು ಹಾಗೂ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಗೆ, ಜಿಐಎಸ್ ಲೇಯರ್ ಅಪ್ ಲೋಡ್ ಮಾಡುವ ಬಗ್ಗೆ ಹಾಗೂ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಡೆಸಿದ, ಜಿಲ್ಲಾ ಜಲಸಂವಾದದಲ್ಲಿ ಕೈಗೊಂಡಿರುವ ನಿರ್ಣಯಗಳ ಬಗ್ಗೆಯೂ ಚರ್ಚೆ ನಡೆಸುವರು.

ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಅಮಾನಿಕೆರೆಗೆ ಬೇಟಿ ನೀಡುವ ಹಿನ್ನಲೆಯಲ್ಲಿ, ತುಮಕೂರು ಅಮಾನಿಕೆರೆಗೆ ಭೇಟಿ ನೀಡಿ ಎರಡು ಮೂರು ಕಡೆ ಸ್ಥಳ ಪರಿಶೀಲನೆ ಮಾಡಲಾದ ಚಿತ್ರ.