19th April 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾಧಿಕಾರಿಯವರಾದ ಶ್ರೀ ವೈ.ಎಸ್.ಪಾಟೀಲ್ ರವರ ಬಗ್ಗೆ ನನಗೆ ಅಪಾರ ಗೌರವ. ಕಾರಣ ಇಷ್ಟೆ. ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಲೋಕಸಭಾ ಮಾಜಿ ಸದಸ್ಯರಾಗಿದ್ದ ಅವÀಧಿಯಲ್ಲಿ, ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಹಭಾಗಿತ್ವದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಆರಂಭಿಸಿ, ಕರ್ನಾಟಕ ರಾಜ್ಯ ಸಮಗ್ರ ನೀರಾವರಿ ಅಧ್ಯಯನ ಮಾಡಲು ಫೋರಂ ಪರವಾಗಿ ರೂ 50 ಲಕ್ಷ ಹಣ ನೀಡಿ, ಅನುಮತಿ ಕೊಡಿಸಿದವರಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.

ತುಮಕೂರು ವಿಸಿಯಾಗಿದ್ದ ಶ್ರೀ ರಾಜಾಸಾಬ್ ರವರು, ಅಂದು ಮುಖ್ಯ ಮಂತ್ರಿಯವರಾಗಿದ್ದ ಶ್ರೀ ಸಿದ್ಧರಾಮಯ್ಯನವರು, ಜಲಸಂಪನ್ಮೂಲ ಸಚಿವರಾಗಿದ್ದ ಶ್ರೀ ಎಂ.ಬಿ.ಪಾಟೀಲ್ ರವರು, ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಯವರಾಗಿದ್ದ ಶ್ರೀ ರಾಕೇಶ್ ಸಿಂಗ್ ರವರು, ಮುಖ್ಯ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರಾಗಿದ್ದ ಶ್ರೀ ಎಲ್.ಕೆ.ಅತೀಕ್ ರವರು, ಜಲಸಂಪನ್ಮೂಲ ಸಚಿವರ ಆಪ್ತಕಾರ್ಯದರ್ಶಿಂiÀiವರಾಗಿದ್ದ ಶ್ರೀ ವೈ.ಎಸ್.ಪಾಟೀಲ್ ರವರು,À ಜಲಸಂಪನ್ಮೂಲ ಕಾರ್ಯದರ್ಶಿಯವರಾಗಿದ್ದ ಶ್ರೀ ಗುರುಪಾದಸ್ವಾಮಿರವರು, ವಿಜೆಎನ್‍ಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀ ಕೆ.ಜೈಪ್ರಕಾಶ್ ರವರ ಸಹಕಾರ ಎಂದು ಮರೆಯುವ ಹಾಗಿಲ್ಲ.

ನೀರಾವರಿ ತಜ್ಞರ ಹೆಸರಿನಲ್ಲಿ, ತುಮಕೂರು ವಿಶ್ವವಿದ್ಯಾನಿಲಯಕ್ಕೆ ಫೋರಂ ಪಾವತಿಸ ಬೇಕಿದ್ದ ರೂ 50 ಲಕ್ಷ ಹಣ ನೀಡಲು ಜಿಲ್ಲೆಯ ಯಾವೊಬ್ಬ ರಾಜಕಾರಣಿಗಳ ಶೀಪಾರಸ್ಸು ಇರಲಿಲ್ಲ, ಮಾಜಿಯಾಗಿದ್ದ ಶ್ರೀ.ಜಿ.ಎಸ್.ಬಸವರಾಜ್ ರವರು ಮಾತ್ರ ಟೊಂಕ ಕಟ್ಟಿ ನಿಂತಿದ್ದರು.

ಅಂದು ನಮ್ಮ ಈಗಿನ ಜಿಲ್ಲಾಧಿಕಾರಿಗಳ ತಂತ್ರಗಾರಿಕೆ ಬಗ್ಗೆ ನಾನು ಬರೆಯುವುದಿಲ್ಲಾ, ಆದರೇ ಜೀವ ಇರುವವರೆಗೂ ಮರೆಯುವುದಿಲ್ಲ. ಅದೇನೆ ಇರಲಿ. ಈಗ ಹಸಿರು ತುಮಕೂರು ಯೋಜನೆ ಕಡೆ ಗಮನ ಹರಿಸೋಣ?

ಶ್ರೀ ಜಿ.ಎಸ್.ಬಸವರಾಜ್ ರವರು 1999 ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾಗ ಮೊದಲನೇ ಹಂತದ ಹಸಿರು-ತುಮಕೂರು ಯೋಜನೆ ಘೋಷಣೆ ಮಾಡಿದ್ದರು. 2009 ರಲ್ಲಿ ಸಂಸದರಾಗಿದ್ದಾಗ ಎರಡನೇ ಹಂತದ ಹಸಿರು-ತುಮಕೂರು ಯೋಜನೆ ಘೋಷಣೆ ಮುಂದುವರೆಸಿದ್ದರು. ಈಗ 2019 ರಲ್ಲಿ ಸಂಸದರಾದ ಮೇಲೆ ಮೂರನೇ ಹಂತದ ಹಸಿರು-ತುಮಕೂರು ಯೋಜನೆ ಘೋಷಣೆ ಮಾಡಲು ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣಗೊಳ್ಳಲಿ ಎಂದು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸಲಹೆ ನೀಡಿದ್ದರಿಂದ ಇಲ್ಲಿಯವರೆಗೂ ಕಾಯಬೇಕಿತ್ತು.

ಈಗ ಮೂರನೇ ಹಂತದ ಯೋಜನೆಗೆ ಚಾಲನೇ ನೀಡಬೇಕಿದೆ. ಅಂದಿನಿಂದ ಇಲ್ಲಿಯವರೆಗೂ ಹಸಿರು ತುಮಕೂರು ಯೋಜನೆಗೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಪಣ ತೊಟ್ಟು ನಿಂತಿದೆ. ಈಗಲೂ ಮುಂದುವರೆಸಲಿದೆ.

ಗಿಡವೊಂದಕ್ಕೆ ಕೇವಲ ರೂ 97 ರೂ ಖರ್ಚು ಮಾಡಿ, ನಗರಾಧ್ಯಾಂತ ಹಾಕಿದ್ದ ಸಾವಿರಾರು ಹೊಂಗೆ ಗಿಡಗಳು ರಾರಾಜಿಸುತ್ತಿವೆ. ಸಿದ್ಧಗಂಗಾ ಶ್ರೀಗಳ 100 ವರ್ಷದ 36500 ದಿವಸಕ್ಕೂ ಒಂದೊಂದು ಗಿಡದಂತೆ 36500 ಗಿಡ ಹಾಕಲಾಗಿದೆ. ಎಷ್ಟು ಉಳಿದಿವೆ ಎಂಬ ಬಗ್ಗೆ ಮೌಲ್ಯಮಾಪನ ಮಾಡಬೇಕಿದೆ.

‘ಈಗ ಬಸವರಾಜ್ ರವರ ಆಸೆ, ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿ ಮತ್ತು ವಸಂತನರಸಾಪುರ ಕೈಗಾರಿಕಾ ವ್ಯಾಪ್ತಿಯಲ್ಲಿ, ಒಂದು ಲಕ್ಷ ಗಿಡ ಹಾಕಲೇ ಬೇಕಂತೆ. ಇದಕ್ಕೆ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸಂಪೂರ್ಣ ಸಹಕಾರ ನೀಡಲಿದ್ದಾರೆ.

ಮುಂದಿನ ಮೂರು ವರ್ಷ ನಮ್ಮ ಗುರಿ, ನಿರ್ವಹಣೆ ಮಾತ್ರ ಮುಂದಿನ 10 ವರ್ಷ. ಹಸಿರು ತುಮಕೂರು ತಂಪು ತುಮಕೂರು ಯೋಜನೆ ರೂಪಿಸಿ, ಒಂದು ಹಸಿರು ಮತ್ತು ಜಲ ಕ್ರಾಂತಿ ಮಾಡಲೇ ಬೇಕಿದೆ.

ಪಿಪಿಪಿ ಮಾದರಿಯಲ್ಲಿ ಮಾಡೋಣ, ತಾವೂ ತುಮಕೂರು ಜಿಲ್ಲಾ ಪಿಪಿಪಿ ಸಮಿತಿಯ ಅಧ್ಯಕ್ಷರು ಆಗಿರುವದರಿಂದ ಒಂದು ಅತ್ಯುತ್ತಮ ಯೋಜನೆ ರೂಪಿಸೋಣ ಸಾರ್, ಗಿಡಹಾಕುವ ಹಲವಾರು ತಂಡ, ನೀರು ಹಾಕುವ ತಂಡ, ಮುಳ್ಳು ಕಟ್ಟುವ ತಂಡ, ಮರಗಳನ್ನು ಟ್ರಿಮ್ ಮಾಡುವ ತಂಡ, ನೀಡ್ ಬೇಸ್ಡ್ ನರ್ಸರಿ ಬೆಳೆಸುವ ತಂಡ, ಡಿಜಿಟಲ್ ಗಣತಿ ತಂಡ, ಉಧ್ಯಾನವನಗಳ ವೆಬ್ ಆಫ್ ಮಾಡುವ ತಂಡ, ಗಿಡಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ, ತಪಾಸಣೆ ಮಾಡಲು ನಗರದ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಹಭಾಗಿತ್ವ, ಉಧ್ಯಾನವನಗಳ ನಿರ್ವಹಣೆಗೆ ಹಲವಾರು ಸಂಸ್ಥೆಗಳ ಸಹಭಾಗಿತ್ವ, ಇವೆರೆಲ್ಲರ ಮತ್ತು ಅಧಿಕಾರಿಗಳ ಸಮನ್ವಯ ಸಾಧಿಸಲು ಶಕ್ತಿಪೀಠ ಫೌಂಡೇಷನ್ ಉಚಿತವಾಗಿ ಸೇವೆ ಸಲ್ಲಿಸಲಿದೆ.

ತಾವೂ ಒಂದು ಬೆಸ್ಟ್ ಪ್ರಾಕ್ಟೀಸಸ್  ರೂಪುರೇಷೆಯೊಂದಿಗೆ ಸರ್ಕಾರದ ಆದೇಶ ಕೊಡಿಸುವ ಮೂಲಕ ತುಮಕೂರು ಜನರ ಮನಗೆಲ್ಲಿ ಸಾರ್. ಈಗಾಗಲೇ ಈ ಬಗ್ಗೆ ನಗರಾಭಿವೃದ್ಧಿ ಕಾರ್ಯದರ್ಶಿಯವರಾದ ಶ್ರೀ ಅಜಯ್ ನಾಗಭೂಷಣ್ ರವರು ಚರ್ಚಿಸಿದ್ದಾರಂತೆ. ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲೂ ನಿರಂತರವಾಗಿ ಚರ್ಚೆ ನಡೆಯುತ್ತಲೇ ಇದೆಯಂತೆ.

ಸಿದ್ಧಗಂಗಾ ಶ್ರೀಗಳು ಮತ್ತೆ ನನ್ನ ಹೆಸರಿನಲ್ಲಿ ಗಿಡ ಹಾಕುತ್ತಿದ್ದಾರೆ ಎಂದು ಖುಷಿ ಪಡಬಹುದು.